Asianet Suvarna News Asianet Suvarna News

ನಾಗಪುರದಲ್ಲಿ ಭಾರೀ ಮಳೆಗೆ ಓರ್ವ ವೃದ್ಧೆ, 14 ಜಾನುವಾರು ಬಲಿ: 400 ಜನರ ಸ್ಥಳಾಂತರ

ರಾತ್ರಿ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಭಾರೀ ಮಳೆ ಸುರಿದು ಹಲವು ಪ್ರದೆಶಗಳು ಜಲಾವೃತಗೊಂಡಿದ್ದು, ಮಳೆಗೆ ಓರ್ವ ವೃದ್ಧೆ ಬಲಿಯಾಗಿದ್ದಾರೆ. ಅಲ್ಲದೇ ಇತರ 400 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Heavy rain in Nagpur one elderly woman killed, 14 cattles also dead in Nagpur 400 people displaced akb
Author
First Published Sep 24, 2023, 7:39 AM IST

ನಾಗ್ಪುರ: ರಾತ್ರಿ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಭಾರೀ ಮಳೆ ಸುರಿದು ಹಲವು ಪ್ರದೆಶಗಳು ಜಲಾವೃತಗೊಂಡಿದ್ದು, ಮಳೆಗೆ ಓರ್ವ ವೃದ್ಧೆ ಬಲಿಯಾಗಿದ್ದಾರೆ. ಅಲ್ಲದೇ ಇತರ 400 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ (Devendra Fadnavis) ಮಳೆಗೆ ಓರ್ವ ವೃದ್ಧೆ ಹಾಗೂ 14 ಜಾನುವಾರುಗಳು ಸಾವನ್ನಪ್ಪಿವೆ. ಎನ್‌ಡಿಆರ್‌ಎಫ್‌ (NDRF)ಮತ್ತು ಎಸ್‌ಡಿಆರ್‌ಎಫ್‌ ಪಡೆಗಳು ಈವರೆಗೆ 400 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಈ ಪೈಕಿ ವಾಕ್‌ ಮತ್ತು ಶ್ರವಣ ದೋಷವಿರುವ ಮಕ್ಕಳ ಶಾಲೆಯಿಂದ 70 ವಿದ್ಯಾರ್ಥಿಗಳು ಮತ್ತು ಎಲ್‌ಎಡಿ ಕಾಲೇಜಿನ 50 ವಿದ್ಯಾರ್ಥಿನಿಯರು ಸೇರಿದ್ದಾರೆ. ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.

ಶುಕ್ರವಾರ ಮಧ್ಯರಾತ್ರಿ 2 ಗಂಟೆಯಿಂದ 4 ಗಂಟೆವರೆಗಿನ ಕಡಿಮೆ ಅವಧಿಯಲ್ಲಿ ನಗರದಲ್ಲಿ 90 ಮಿ.ಮೀ ಮಳೆ ಸುರಿದಿದ್ದು, ಈ ವೇಳೆ ಹಲವಾರು ಮನೆಗಳಿಗೆ ನೀರು ನುಗ್ಗಿ ವಸತಿ ಪ್ರದೇಶಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಇನ್ನು ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ಮುಂದಿನ 24 ಗಂಟೆಗಳವರೆಗೆ ಆರೆಂಜ್‌ ಅಲರ್ಟ್ (Orange Alert)ಘೋಷಿಸಿದೆ. ಅಲ್ಲದೇ ಆಡಳಿತವು ಶಾಲೆ- ಕಾಲೇಜುಗಳಿಗೆ ರಜೆ ಘೋಷಿಸಿದೆ.

 

ಜಾತಿ ಗಣತಿ ಮಾಡಲು ಮೋದಿಗೇಕೆ ಭಯ?: ರಾಹುಲ್‌ ಪ್ರಶ್ನೆ

ಜೈಪುರ: ದಿನದ 24 ಗಂಟೆ ಒಬಿಸಿಗಳ (ಹಿಂದುಳಿದ ವರ್ಗ) ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು ಜಾತಿ ಗಣತಿ ನಡೆಸಲು ಏಕೆ ಹೆದರುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಇಲ್ಲಿ ನಡೆದ ಕಾಂಗ್ರೆಸ್ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್‌ ದೇಶದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲು ವಿಶೇಷ ಅಧಿವೇಶನ ಕರೆಯಲಾಗಿತ್ತು. ಆದರೆ ಅದರ ಬದಲು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಯಿತು. ಈ ಮಸೂದೆಯಲ್ಲಿ ಒಬಿಸಿಗಳಿಗೆ ಒಳಮೀಸಲಾತಿ ನೀಡುವಂತೆ ನಾವು ಒತ್ತಾಯಿಸಿದೆವು. ಆದರೆ ಜಾತಿಗಣತಿ ಮಾಡದೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ದಿನದ 24 ಗಂಟೆ ಒಬಿಸಿಗಳು ಹಾಗೂ ಅವರ ಗೌರವಿಸುವ ಕುರಿತು ಮಾತನಾಡುತ್ತಾರೆ. ಹಾಗಿದ್ದರೆ ಜಾತಿ ಗಣತಿ ನಡೆಸಲು ಮೋದಿ ಏಕೆ ಹೆದರುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ಮಳೆಯ ಅಭಾವ: ಮೋಡ ಬಿತ್ತನೆಗೆ ಅಂತಿಮ ಹಂತದ ಸಿದ್ಧತೆ

ಅಲ್ಲದೇ ‘ಮಹಿಳಾ ಮೀಸಲಾತಿ ಇಂದೇ ಜಾರಿಯಾಗಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. ಅದನ್ನು ಈಗಲೇ ಜಾರಿ ಮಾಡಬಹುದಾಗಿದೆ. ಆದರೆ ಕ್ಷೇತ್ರ ಪುನರ್‌ವಿಂಗಡನೆ ಹಾಗೂ ಜಾತಿ ಜನಗಣತಿ ನೆಪವೊಡ್ಡಿ ಮಸೂದೆಯನ್ನು 10 ವರ್ಷ ಮುಂದೂಡಲು ಬಿಜೆಪಿ ಯೋಜಿಸಿದೆ. ಪ್ರಧಾನಿಯವರೇ ಕಾಂಗ್ರೆಸ್‌ ಜಾತಿಗಣತಿ ಮಾಡಿದೆ ಎಂಬುದನ್ನು ನಿಮ್ಮ ಮುಂದಿನ ಭಾಷಣದಲ್ಲಿ ದೇಶಕ್ಕೆ ತಿಳಿಸಿ. ಜಾತಿ ಗಣತಿ ನಡೆಸಿ’ ಎಂದಿದ್ದಾರೆ.

ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!

ಪುಸ್ತಕದೊಳಗೆ ಫೋನ್‌: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು

 

Follow Us:
Download App:
  • android
  • ios