ಉತ್ತರದಲ್ಲಿ ಮತ್ತೆ ಮಳೆ ಅಬ್ಬರ: ಹಿಮಾಚಲದಲ್ಲಿ 3 ಸಾವು, ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 26ಕ್ಕೇರಿಕೆ

ಮುಂದಿನ ಕೆಲ ದಿನಗಳ ಕಾಲ ಕರ್ನಾಟಕ ಸೇರಿದಂತೆ 10 ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ, ತೆಲಂಗಾಣ, ಪಂಜಾಬ್‌, ಹಿಮಾಚಲಪ್ರದೇಶ ಮತ್ತು ಗುಜರಾತ್‌ನಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.

Heavy Rain Continued in North India grg

ನವದೆಹಲಿ(ಜು.23):  ಕಳೆದ ಕೆಲ ದಿನಗಳಿಂದ ದೇಶದ ಉತ್ತರ, ಪೂರ್ವದ ರಾಜ್ಯಗಳು ತತ್ತರಿಸಿರುವ ಮಾಡಿರುವ ಮುಂಗಾರು ಮಳೆ, ತನ್ನ ಅನಾಹುತವನ್ನು ಮುಂದುವರೆಸಿದ್ದು ಭಾರೀ ಪ್ರಮಾಣದ ಜೀವ, ಆಸ್ತಿಪಾಸ್ತಿಗೆ ಕಾರಣವಾಗಿದೆ. ಗುಜರಾತ್‌, ಕಾಶ್ಮೀರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಶುಕ್ರವಾರದಿಂದೀಚೆಗೆ ಭಾರಿ ಮಳೆ, ಮೇಘಸ್ಫೋಟದಂಥ ಘಟನೆಗಳು ಸಂಭವಿಸಿದ್ದು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಜೊತೆಗೆ ಮುಂದಿನ ಕೆಲ ದಿನಗಳ ಕಾಲ ಕರ್ನಾಟಕ ಸೇರಿದಂತೆ 10 ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ರಾಜಸ್ಥಾನ, ಉತ್ತರಾಖಂಡ, ಮಧ್ಯಪ್ರದೇಶ, ತೆಲಂಗಾಣ, ಪಂಜಾಬ್‌, ಹಿಮಾಚಲಪ್ರದೇಶ ಮತ್ತು ಗುಜರಾತ್‌ನಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.

ಗುಜರಾತ್‌ ತತ್ತರ:

ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಬಹುತೇಕ ಭಾಗಗಳು ಜಲಾವೃತವಾಗಿವೆ. ಜೊತೆಗೆ ಪ್ರವಾಹದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿ ವಾಹನ ಮತ್ತು ಜಾನುವಾರುಗಳನ್ನು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ಕಳವಳ ಮೂಡಿಸಿದೆ.

ಕೃಷ್ಣ ನದಿ ಒಳಹರಿವು ಹೆಚ್ಚಳ: ಆಲಮಟ್ಟಿಅಣೆಕಟ್ಟೆಗೆ ಜೀವಕಳೆ!

ನವಸಾರಿ ನಗರದಲ್ಲಿ ಶನಿವಾರ ಬೆಳಗ್ಗೆ 10-12 ಗಂಟೆ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಸೊಂಟದ ಮಟ್ಟದವರೆಗೆ ನೀರು ನಿಂತಿತ್ತು. ಜೊತೆಗೆ ನಗರವನ್ನು ಹಾದು ಹೋಗುವ ಮುಂಬೈ- ಅಹಮಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತ ಕಾರಣ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಸಂಕಷ್ಟಎದುರಿಸುವಂತಾಯಿತು.

ದೆಹಲಿಯಲ್ಲಿ ಮತ್ತೆ ಆತಂಕ:

ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಅಪಾಯ ಮಟ್ಟಕಿಂತ ಮೇಲೇ ಹರಿಯುತ್ತಿದ್ದ ಯುಮುನಾ ನದಿಯ ನೀರಿನ ಮಟ್ಟಶನಿವಾರ ಹೆಚ್ಚೂ ಕಡಿಮೆ ಅದೇ ಮಟ್ಟಕಾಯ್ದುಕೊಂಡಿದೆ. ಅಪಾಯದ ಮಟ್ಟ205 ಮೀ. ಆಗಿದ್ದು, ಶನಿವಾರ 205.29 ಮೀ.ಗೆ ಯಮುನಾ ನದಿ ಹರಿಯುತ್ತಿತ್ತು. ಆದರೆ ಆದರೆ ನದಿ ಉಗಮ ಸ್ಥಳವಾದ ಉತ್ತರಾಖಂಡದಲ್ಲಿ ಮತ್ತೆ ಭಾರೀ ಮಳೆ ಸುರಿಯುತ್ತಿರುವ ಕಾರಣ ನದಿಯ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯ ಆತಂಕ ವ್ಯಕ್ತವಾಗಿದೆ. ಹೀಗಾಗಿ ಮತ್ತೆ ಯಮುನಾ ನದಿ ತಟದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಶುರುವಾಗಿದೆ.

ಮಹಾಕಾಲ ದೇಗುಲ ಸನಿಹ ಪ್ರವಾಹ:

ಈ ನಡುವೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಪ್ರಸಿದ್ದ ಮಹಾಕಾಲ ದೇಗುಲದ ಸನಿಹಕ್ಕೆ ಪ್ರವಾಹದ ನೀರು ನುಗ್ಗಿದೆ. ದೇಗುಲದ ಸನಿಹದ ಗಣೇಶ ಮತ್ತು ನಂದಿ ಮಂಟಪ ಪ್ರದೇಶಗಳಿಗೆ ನೀರು ನುಗ್ಗಿದ್ದು, ಭಾರೀ ಸಾಮರ್ಥ್ಯದ ಮೋಟಾರ್‌ಗಳನ್ನು ಬಳಸಿಕೊಂಡು ನೀರು ಹೊರಹಾಕುವ ಕೆಲಸ ಮಾಡಲಾಗುತ್ತಿದೆ. ಆದರೂ ಶನಿವಾರ ಮಧ್ಯಾಹ್ನದವರೆಗೂ 80 ಸಾವಿರಕ್ಕೂ ಹೆಚ್ಚು ಭಕ್ತರು ಮಹಾಕಾಲ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಕುಮಾರ್‌ ಪುರುಷೋತ್ತಮ್‌ ಮಾಹಿತಿ ನೀಡಿದ್ದಾರೆ.

ಕಾಶ್ಮೀರದಲ್ಲಿ ಭೂಕುಸಿತ:

ಭಾರಿ ಮಳೆ ಮತ್ತು ಭೂಕುಸಿದ ಕಾರಣ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. 270 ಕಿ.ಮೀ ವ್ಯಾಪ್ತಿಯ ಹೆದ್ಧಾರಿಯಲ್ಲಿ ಬರುವ ಮೆಹರ್‌ ಮತ್ತು ದಲ್ವಾಸ್‌ ಪ್ರದೇಶದಲ್ಲಿ ಭೂಕುಸಿದ ಘಟನೆಗಳು ಸಂಭವಿಸಿವೆ. ಹೀಗಾಗಿ 3472 ಅಮರನಾಥ ಭಕ್ತರ ತಂಡ 132 ವಾಹನಗಳನ್ನು ಮಾರ್ಗಮಧ್ಯದಲ್ಲೇ ತಡೆಹಿಡಿಯಲಾಗಿದೆ. ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ ದಿಢೀರ್‌ ಪ್ರವಾಹ ಸೃಷ್ಟಿಯಾಗಿ ಭಾರೀ ಅನಾಹುತ ಸೃಷ್ಟಿಯಾಗಿದೆ.

ಮೇಘಸ್ಫೋಟ:

ಈ ನಡುವೆ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಶುಕ್ರವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿದೆ. ಪರಿಣಾಮ ಜನವಸತಿ ಪ್ರದೇಶಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿದ್ದು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆದರೆ ಯಾವುದೇ ಜೀವಹಾನಿಯ ವರದಿ ಆಗಿಲ್ಲ. ಆದರೆ ತಗ್ಗುಪ್ರದೇಶಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ಹಿಮಾಚಲದಲ್ಲಿ 3 ಸಾವು:

ಹಿಮಾಚಲ ಪ್ರದೇಶದ ಬಡಿಯಾರಾ ಗ್ರಾಮದಲ್ಲಿ ಕಾಣಿಸಿದ ದಿಢೀರ್‌ ಪ್ರವಾಹದಲ್ಲಿ ಡಾಬಾ ನಡೆಸುತ್ತಿದ್ದ ವೃದ್ಧ ದಂಪತಿ ಮತ್ತು ಅವರ ಮೊಮ್ಮಗ ಸಾವನ್ನಪ್ಪಿದ ಘಟನೆ ಶನಿವಾರ ಸಂಭವಿಸಿದೆ. ದಿಢೀರ್‌ ಪ್ರವಾಹದಲ್ಲಿ ಹಲವು ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ರಾಮ್‌ಪುರದಲ್ಲೂ ಭಾರೀ ಮಳೆಗೆ ಹಲವು ಮನೆ ಕುಸಿದಿವೆ. ಅಧಿಕ ಮಳೆಯ ಕಾರಣ ಈಗಲೂ ರಾಜ್ಯದ 656 ರಸ್ತೆಗಳನ್ನು ಸಂಚಾರಕ್ಕೆ ನಿರ್ಬಂಧಿಸಲಾಗಿದೆ.

ಬೆಳಗಾವಿ ಸೇರಿ 3 ಜಿಲ್ಲೆಗಳಿಗೆ ‘ಮಹಾ’ ಪ್ರವಾಹದ ಆತಂಕ

ಮಹಾರಾಷ್ಟ್ರ- ರಕ್ಷಣೆಗೆ ಕಾಪ್ಟರ್‌ ಬಳಕೆ:

ಮಹಾರಾಷ್ಟ್ರದ ಯವತ್ಮಾಲ್‌ ಜಿಲ್ಲೆಯ ಮಹಾಗಾಂವ್‌ ತಾಲೂಕಿನ ಆನಂದ್‌ನಗರ್‌ ಗ್ರಾಮದಲ್ಲಿ 45 ಜನರು ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಅವರನ್ನು ವಾಯುಪಡೆಯ 2 ಹೆಲಿಕಾಪ್ಟರ್‌ ಬಳಸಿ ರಕ್ಷಣೆ ಮಾಡುವ ಕೆಲಸ ಸಾಗಿದೆ. ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಇಬ್ಬರು ಬಲಿಯಾಗಿದ್ದಾರೆ. ಇನ್ನು ಆಳೆತ್ತರದ ಅಲೆಗಳು ಏಳುತ್ತಿರುವ ಕಾರಣ ಮುಂಬೈನ ಗೇಟ್‌ವೇ ಆಫ್‌ ಇಂಡಿಯಾ ಬಳಿ ತೆರಳದಂತೆ ಜನರಿಗೆ ಸೂಚಿಸಲಾಗಿದೆ.

ರಾಯಗಡದಲ್ಲಿ ಮೃತರ ಸಂಖ್ಯೆ 26ಕ್ಕೆ:

ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಶನಿವಾರ ಇನ್ನೂ 5 ಶವಗಳು ಪತ್ತೆ ಆಗುವುದರೊಂದಿಗೆ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 26ಕ್ಕೆ ಏರಿದೆ. ಭೂಕುಸಿತದ ಮಣ್ಣಿನಡಿ ಇನ್ನೂ ಸುಮಾರು 80 ಜನರಿದ್ದಾರೆ ಎನ್ನಲಾಗಿದ್ದು, ಕಾರಾರ‍ಯಚರಣೆ ಮುಂದುವರಿದಿದೆ.

Latest Videos
Follow Us:
Download App:
  • android
  • ios