ಬಿಸಿಗಾಳಿಗೆ ಉತ್ತರ ತತ್ತರ: ಪ್ರಯಾಗದಲ್ಲಿ 44.2 ದಾಖಲು , ಧಗಧಗಿಸಿದ ಧರೆ
ದೇಶಾದ್ಯಂತ ಬಿಸಿಗಾಳಿಯ ಹೊಡೆತ ಮುಂದುವರೆದಿದ್ದು, ಹಲವು ಭಾಗಗಳಲ್ಲಿ ಮಂಗಳವಾರ 40ರಿಂದ 44 ಡಿಗ್ರಿ ಸೆ.ನಷ್ಟು ತಾಪಮಾನ ದಾಖಲಾಗಿದೆ. ಉತ್ತರಪ್ರದೇಶದ ಹಮೀರ್‌ಪುರ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಗರಿಷ್ಠ 44.2 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ದೆಹಲಿಯ ಸಫ್ದಾರ್‌ಜಂಗ್‌ನಲ್ಲಿ 40.4 ಡಿ.ಸೆ., ತಾಪಮಾನ ದಾಖಲಾಗಿದೆ.
ನವದೆಹಲಿ: ದೇಶಾದ್ಯಂತ ಬಿಸಿಗಾಳಿಯ ಹೊಡೆತ ಮುಂದುವರೆದಿದ್ದು, ಹಲವು ಭಾಗಗಳಲ್ಲಿ ಮಂಗಳವಾರ 40ರಿಂದ 44 ಡಿಗ್ರಿ ಸೆ.ನಷ್ಟು ತಾಪಮಾನ ದಾಖಲಾಗಿದೆ. ಉತ್ತರಪ್ರದೇಶದ ಹಮೀರ್‌ಪುರ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಗರಿಷ್ಠ 44.2 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ದೆಹಲಿಯ ಸಫ್ದಾರ್‌ಜಂಗ್‌ನಲ್ಲಿ 40.4 ಡಿ.ಸೆ., ತಾಪಮಾನ ದಾಖಲಾಗಿದೆ.
ಸತತ 4 ದಿನಗಳಿಂದ ಈ ಪ್ರದೇಶದಲ್ಲಿ 40 ಡಿಗ್ರಿ ಸೆಲ್ಸಿಯಸ್ಗೂ, ಹೆಚ್ಚು ತಾಪಮಾನ ದಾಖಲಾಗುತ್ತಿದೆ. ಪುಸಾ ಮತ್ತು ಪಿತಾಮ್‌ಪುರದಲ್ಲಿ 41.6 ಮತ್ತು 41.9 ಡಿಗ್ರಿ ಸೆಲ್ಸಿಯಸ್, ಉಷ್ಣಾಂಶ ದಾಖಲಾಗಿದೆ. ಪಟನಾ, ಬಂಕಾ, ಜಾಮುಯ್, ನವಾಡ, ಔರಂಗಾಬಾದ್‌ಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ನಳಂದ, ಬೆಗುಸರಾಯ್, ಗಯಾ, ಅರ್ವಾಲ್, ಭೋಜ್‌ಪುರ್, ರೋಹ್ಟಾಸ್, ಬಕ್ಸರ್, ಖಗಾರಿಯಾ ಮತ್ತು ಮುಂಗೇರ್‌ಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮ ಬಂಗಾಳದ ಬಾಂಕುರಾದಲ್ಲಿ 43.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರ್ಯಾಣ ಮತ್ತು ಪಂಜಾಬ್‌ಗಳಲ್ಲೂ ಉಷ್ಣಾಂಶ 40 ಡಿಗ್ರಿಗಿಂತ ಹೆಚ್ಚಿದೆ.
ಪ್ರಮುಖ ಪ್ರವಾಸಿ ತಾಣಗಳಾದ ಶಿಮ್ಲಾ (Shimla), ಮನಾಲಿ, ಧರ್ಮಶಾಲಾ (Dharmashala) ಮತ್ತು ನಾರ್ಕಂಡಾಗಳಲ್ಲೂ ತಾಪಮಾನ 25 ಡಿಗ್ರಿ ಸೆ.ಗಿಂತ ಜಾಸ್ತಿಯಾಗಿದೆ. ಅತಿಯಾದ ಉಷ್ಣಾಂಶದಿಂದಾಗಿ ಮೇಘಾಲಯದಲ್ಲಿ ಶಾಲಾ ಕಾಲೇಜುಗಳಿಗೆ ಏ.21ರವರೆಗೆ ರಜೆ ಘೋಷಿಸಲಾಗಿದೆ.
Viral Video: ಬಿಸಿಲ ಧಗೆಯಲ್ಲಿ ಪೊಲೀಸರಿಗೆ ನೀರು ಕೊಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮ
ದೇಶದ ಹಲವು ರಾಜ್ಯಗಳಿಗೆ ಬಿಸಿಗಾಳಿ ಹೊಡೆತ
ದೇಶದ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣದ ಹಲವು ರಾಜ್ಯಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗಿದ್ದು, ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯವಾಗಿದೆ. ಹಲವು ರಾಜ್ಯಗಳಲ್ಲಿ ಗರಿಷ್ಠ ಉಷ್ಣಾಂಶ 40-43 ಡಿ.ಸೆ.ವರೆಗೂ ತಲುಪಿದ್ದು ಜನರನ್ನು ಹೈರಾಣಾಗಿಸಿದೆ. ಹೀಗಾಗಿ ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಕೆಲ ದಿನಗಳ ರಜೆ ಘೋಷಿಸಲಾಗಿದೆ.
ಭಾರತದ ಪೂರ್ವ ರಾಜ್ಯಗಳಲ್ಲಿ ಬಿಸಿಗಾಳಿ (Heatwave) ಇನ್ನೂ 4 ದಿನಗಳ ಕಾಲ ಮುಂದುವರೆಯಲಿದ್ದು, ವಾಯುವ್ಯ ಭಾಗದಲ್ಲಿ ಇನ್ನೆರಡು ದಿನದಲ್ಲಿ ತಾಪಮಾನ ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೆಹಲಿಯಲ್ಲಿ ಗರಿಷ್ಠ ತಾಪಮಾನ 40.4 ಡಿಗ್ರಿ ಸೆ., ಏರಿಕೆಯಾಗಿದೆ. ಬಿಹಾರದ 5 ಪ್ರದೇಶಗಳಲ್ಲಿ 43 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ರಾಜಸ್ಥಾನದ ಹಲವು ಭಾಗಗಳಲ್ಲಿ 39ರಿಂದ 41 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ಅಲ್ಲದೇ ದಕ್ಷಿಣದ ಆಂಧ್ರ ಪ್ರದೇಶದಲ್ಲೂ 38ರಿಂದ 41 ಡಿಗ್ರಿ ಸೆ., ತಾಪಮಾನ ದಾಖಲಾಗಿದೆ. ಒಡಿಶಾದಲ್ಲೂ ಗರಿಷ್ಠ 43 ಡಿಗ್ರಿ ಸೆ., ತಾಪಮಾನ (Temperature) ದಾಖಲಾಗಿದ್ದು, ರಾಜ್ಯದ 10 ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆ., ಮೀರಿದೆ.
ಬಿಸಿಲ ಧಗೆ ತಡೆಯೋಕೆ ಆಗ್ತಿಲ್ವಾ? ಇಂಥಾ ಪಾನೀಯ ಕುಡಿಯೋದು ಬಿಟ್ಬಿಡಿ