ಹೃದಯಾಘಾತ: ದೆಹಲಿ ಏರ್‌ಪೋರ್ಟ್‌ನಲ್ಲಿ ಏರ್‌ ಇಂಡಿಯಾದ ಯುವ ಪೈಲಟ್ ಸಾವು

ಏರ್ ಇಂಡಿಯಾದ ಪೈಲಟ್  ಒಬ್ಬರು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. 

Heart attack Young Air India pilot dies at Delhi Airport akb

ನವದೆಹಲಿ: ಇತ್ತೀಚೆಗೆ ಸಣ್ಣ ವಯಸ್ಸಿನ ತರುಣರು ಯುವಕ ಯುವತಿಯರು ಹೃದಯಾಘಾತದಿಂದಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಏರ್ ಇಂಡಿಯಾದ ಪೈಲಟ್  ಒಬ್ಬರು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಏರ್ ಇಂಡಿಯಾದ ಯುವ ಪೈಲಟ್ ಒಬ್ಬರು ಪ್ರಾಣ ಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದ್ದು ಮೃತ ಪೈಲಟ್ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದೆ. 

ಕ್ಯಾಪ್ಟನ್ ಹಿಮಾನಿಲ್ ಕುಮಾರ ಮೃತ ಪೈಲಟ್. ನಮ್ಮ ಸಹೋದ್ಯೋಗಿ ಕ್ಯಾಪ್ಟನ್‌ ಹಿಮಾನಿಲ್ ( Himanil Kumar)ದಿಢೀರ್ ಅಗಲಿಕೆಯಿಂದ ನಮಗೆ ಬಹಳ ಬೇಸರವಾಗಿದೆ. ಕ್ಯಾಪ್ಟನ್ ಹಿಮಾನಿಲ್ ಅವರು ಹಿರಿಯ ಕಮಾಂಡರ್ ಆಗಿದ್ದರು. ಅವರು ದೆಹಲಿ ಏರ್‌ಪೋರ್ಟ್‌ನ  (Delhi Airport) ಟರ್ಮಿನಲ್ 3ಯಲ್ಲಿ ನಮ್ಮ ಕಾರ್ಯನಿರ್ವಹಣಾ ಕಚೇರಿಗೆ ಎಂದಿನಂತೆ ಕೆಲಸದ ನಿಮಿತ್ತ ಬಂದಿದ್ದರು ಎಂದು ಏರ್ ಇಂಡಿಯಾ ತನ್ನ ಶೋಕ ಪತ್ರದಲ್ಲಿ ಹೇಳಿದೆ.

ಏರ್‌ ಶೋದಲ್ಲಿ ಫೈಟರ್ ಜೆಟ್ ಕ್ರ್ಯಾಶ್‌: ಇಬ್ಬರು ಪೈಲಟ್‌ಗಳು ಸಾವು: ಕೊನೆ ಕ್ಷಣದ ವೀಡಿಯೋ

ಕಚೇರಿಯಲ್ಲಿ ಇರುವಾಗಲೇ ಕ್ಯಾಪ್ಟನ್ ಹಿಮಾನಿಲ್ ಕುಮಾರ್ ಅಸ್ವಸ್ಥಗೊಂಡಿದ್ದು, ಕೂಡಲೇ ಸಹೋದ್ಯೋಗಿಗಳು ಅವರ ನೆರವಿಗೆ ಬಂದರು. ಹಾಗೂ ಏರ್‌ಪೋರ್ಟ್ ಆವರಣದಲ್ಲೇ ಇರುವ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಯ್ತು. ಆದರೆ ಅಲ್ಲಿ ಅವರು ಪ್ರಾಣ ಬಿಟ್ಟರು. ಅವರು ಸಕ್ರಿಯ ವಿಮಾನ ಹಾರಾಟದ ಕೆಲಸದಲ್ಲಿ ಇರಲಿಲ್ಲ, ಅವರು ದೊಡ್ಡ ಪ್ರಮಾಣದ ವಿಮಾನವನ್ನು ನಿರ್ವಹಿಸುವ ಪರಿವರ್ತನಾ ತರಬೇತಿ ಪಡೆಯುತ್ತಿದ್ದರು. 

ಇತ್ತೀಚಿನ ತಿಂಗಳುಗಳಲ್ಲಿ ಯುವ ಪೈಲಟ್‌ಗಳು ಸಾವನ್ನಪ್ಪುತ್ತಿರುವ ಮೂರನೇ ಪ್ರಕರಣ ಇದಾಗಿದ್ದು, ಆಗಸ್ಟ್‌ನಲ್ಲಿ ನಾಗಪುರದ (Nagapur) ಏರ್‌ಪೋರ್ಟ್‌ನ ಬೋರ್ಡಿಂಗ್ ಗೇಟ್ ಬಳಿ ಕುಸಿದು ಬಿದ್ದು ಇಂಡಿಗೋ ಪೈಲಟ್ (Indigo Pilot) ಸಾವನ್ನಪ್ಪಿದ್ದರು. ಅವರು ಪುಣೆಗೆ ಹೊರಟಿದ್ದ ವಿಮಾನವನ್ನು ಹತ್ತಲು ಹೋದಾಗ ಈ ಘಟನೆ ನಡೆದಿತ್ತು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಲಾದರೂ ಅವರನ್ನು ಬದುಕಿಸಿಕೊಳ್ಳಲಾಗಲಿಲ್ಲ. ಇದಕ್ಕೂ ಒಂದು ದಿನ ಮೊದಲು ಸ್ಪೈಸ್ ಜೆಟ್‌ನ ಮಾಜಿ ಉದ್ಯೋಗಿ ಕತಾರ್ ಏರ್‌ವೇಸ್‌ನಲ್ಲಿ ದೆಹಲಿಯಿಂದ ದೋಹಾಕ್ಕೆ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು.

ವಿಮಾನದ ಕೊನೆ ಸೀಟ್‌ಗೆ ಕರೆದೊಯ್ದು ಆಪ್‌ ಡ್ಯೂಟಿ ಪೈಲಟ್‌ನಿಂದ ಯುವತಿಗೆ ಕಿರುಕುಳ

Latest Videos
Follow Us:
Download App:
  • android
  • ios