ವಿಮಾನದ ಕೊನೆ ಸೀಟ್‌ಗೆ ಕರೆದೊಯ್ದು ಆಪ್‌ ಡ್ಯೂಟಿ ಪೈಲಟ್‌ನಿಂದ ಯುವತಿಗೆ ಕಿರುಕುಳ

 20 ವರ್ಷದ ಯುವತಿಯೊಬ್ಬಳ ಜೊತೆ ಕರ್ತವ್ಯ ನಿರತನಲ್ಲದ ಪೈಲಟ್‌ವೊಬ್ಬರು ಅಸಭ್ಯವಾಗಿ ವರ್ತಿಸಿದ್ದು, ಅದಕ್ಕೆ ವಿಮಾನ ಸಿಬ್ಬಂದಿಯೂ ಸಹ ಕೈಜೋಡಿಸಿದ ಆರೋಪ ಕೇಳಿ ಬಂದಿದೆ. 

Young woman molested by off duty pilot in Air Akasa Airlines take girl to last seat and forcefully made her drink alcohol akb

ಬೆಂಗಳೂರು: 20 ವರ್ಷದ ಯುವತಿಯೊಬ್ಬಳ ಜೊತೆ ಕರ್ತವ್ಯ ನಿರತನಲ್ಲದ ಪೈಲಟ್‌ವೊಬ್ಬರು ಅಸಭ್ಯವಾಗಿ ವರ್ತಿಸಿದ್ದು, ಅದಕ್ಕೆ ವಿಮಾನ ಸಿಬ್ಬಂದಿಯೂ ಸಹ ಕೈಜೋಡಿಸಿದ ಆರೋಪ ಕೇಳಿ ಬಂದಿದೆ. ಘಟನೆ ಅ.1ರಂದು ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಆಕಾಸ ಏರ್‌ಲೈನ್‌ಗೆ ಸೇರಿದ್ದ ವಿಮಾನದಲ್ಲಿ ನಡೆದಿದೆ.

ಈ ಕುರಿತು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿಕೊಂಡಿರುವ ಯುವತಿ, ತನ್ನನ್ನು ಬಲವಂತವಾಗಿ ವಿಮಾನದ ಕಡೆಯ ಸೀಟ್‌ಗೆ ಲಗೇಜ್‌ ಸಮೇತ ಕರೆದುಕೊಂಡು ಹೋಗಿ ಆಲ್ಕೋಹಾಲ್‌ ನೀಡಲಾಯಿತು. ತಾನು ನಿರಾಕರಿಸಿದರೂ ಒಪ್ಪದ ಪೈಲಟ್‌, ಬಲವಂತ ಮಾಡಿದರು ಹಾಗೂ ವಿಮಾನ ಸಿಬ್ಬಂದಿ ಸಹ ನನ್ನ ನೆರವಿಗೆ ಬರಲಿಲ್ಲ. ಇವರ ದುರ್ವರ್ತನೆ ವಿಮಾನದಿಂದ ಇಳಿದ ನಂತರವೂ ಮುಂದುವರೆದಿದ್ದು, ನನ್ನ ಮೊಬೈಲ್‌ ನಂಬರ್‌ ನೀಡುವಂತೆಯೂ ಒತ್ತಾಯಪಡಿಸಲಾಯಿತು. ಬಳಿಕ ಆಕಾಸ ಏರ್‌ಲೈನ್ಸ್‌ ಜಾಲತಾಣದಲ್ಲಿ ದೂರು ಹಾಕಿದರೂ ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು  ಆರೋಪಿಸಿದ್ದಾರೆ.

ಇನ್ನೂ ಹೆಣ ಬೀಳೋದಿದೆ, ಎಲ್ಲ ಒಟ್ಟಿಗೆ ಹೂಳ್ತೀವಿ.. ಇಸ್ರೇಲ್‌ ಮಹಿಳಾ ಯೋಧೆಯ ಕಿಡಿನುಡಿ

ಈ ಕುರಿತು ಪ್ರತಿಕ್ರಿಯಿಸಿರುವ ಆಕಾಶ ಏರ್‌ಲೈನ್ಸ್‌ ಸಿಬ್ಬಂದಿ, ಅವರ ಸಾಮಾಜಿಕ ಜಾಲತಾಣ ಖಾಸಗಿ ಅಕೌಂಟ್‌ ಆಗಿರುವುದರಿಂದ ಅವರನ್ನು ಸಂಪರ್ಕಿಸಲು ಕಷ್ಟವಾಯಿತು. ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದೆ.

ಮಧ್ಯಪ್ರದೇಶ ಚುನಾವಣೆ: ಕಾಂಗ್ರೆಸ್‌ನಿಂದ 59 ಭರವಸೆಗಳ ಬೃಹತ್‌ ಪ್ರಣಾಳಿಕೆ: ಏನೆಲ್ಲಾ ಉಚಿತ ನೋಡಿ

Latest Videos
Follow Us:
Download App:
  • android
  • ios