Asianet Suvarna News Asianet Suvarna News

ಚಲಿಸುವ ರೈಲಲ್ಲೇ ಹೃದಯಾಘಾತ : 1 ಗಂಟೆ ತಡವಾಗಿ ಬಂದ ಆಂಬುಲೆನ್ಸ್: ಮಹಿಳೆ ಸಾವು

ಗ್ವಾಲಿಯರ್ ಬಳಿ ಚಲಿಸುವ ರೈಲಿನಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆಂಬುಲೆನ್ಸ್ ಬರಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

Heart attack on moving train Ambulance late by 1 hour Woman dies akb
Author
First Published Aug 22, 2024, 5:25 PM IST | Last Updated Aug 22, 2024, 5:25 PM IST

ಗ್ವಾಲಿಯರ್: ಚಲಿಸುವ ರೈಲಲ್ಲೇ ಮಹಿಳೆಯೊಬ್ಬರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ ಗ್ವಾಲಿಯರ್‌ ಬಳಿ ಈ ಘಟನೆ ನಡೆದಿದೆ. ರೈಲಿನಲ್ಲಿ ಮಹಿಳೆಗೆ ಹೃದಯಾಘಾತವಾದ ವಿಚಾರ ತಿಳಿಯುತ್ತಿದ್ದಂತೆ ಟಿಟಿಇಗೆ ವಿಚಾರ ತಿಳಿಸಲಾಯ್ತು. ಕೂಡಲೇ ಅವರು ಸಮೀಪದ ರೈಲ್ವೆ ಸ್ಟೇಷನ್‌ಗೆ ಮಾಹಿತಿ ನೀಡಿ ಆಂಬುಲೆನ್ಸ್ ರೆಡಿ ಇಡುವಂತೆ ಹೇಳಿದ್ದರು. ಆದರೆ ಆಂಬುಲೆನ್ಸ್ ತಲುಪುವುದು ವಿಳಂಬವಾದ ಹಿನ್ನೆಲೆ ಮಹಿಳೆ ಸಾವನ್ನಪ್ಪಿದ್ದಾರೆ. ಆಗ್ರಾದಿಂದ ಗೋವಾ ಮೂಲಕ ಪುಣೆಗೆ ಬರುತ್ತಿದ್ದ ಗೋವಾ ಎಕ್ಸ್ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ.

ರೈಲು ಪ್ರಯಾಣ ಆರಂಭಿಸಿ 2ರಿಂದ 3 ಗಂಟೆಯ ನಂತರ 66 ವರ್ಷದ ಮಹಿಳೆಯೊಬ್ಬರಿಗೆ ರೈಲಿನಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಮಹಿಳೆಯ ಪತಿ ಟಿಟಿಇಗೆ ಮಾಹಿತಿ ನೀಡಿದ್ದಾರೆ. ನಂತರ ಟಿಟಿಇ ಅವರು ಸಮೀಪದ ಗ್ವಾಲಿಯರ್ ರೈಲ್ವೆ ಸ್ಟೇಷನ್‌ ಅನ್ನು ಸಂಪರ್ಕಿಸಿ, ಆಂಬುಲೆನ್ಸೊಂದನ್ನು ರೆಡಿ ಇಡುವಂತೆ ಕೋರಿದ್ದಾರೆ. ಆದರೆ ರೈಲು ಬಂದು ನಿಲ್ದಾಣ ತಲುಪಿದರೂ, ರೋಗಿಯನ್ನು ಕರೆದುಕೊಂಡು ಹೋಗಲು ಆಂಬುಲೆನ್ಸ್‌ ಮಾತ್ರ ಬಂದಿಲ್ಲ, ಇದಾದ ನಂತರ ಮಹಿಳೆಯ ಪತಿ ಖಾಸಗಿ ಆಂಬುಲೆನ್ಸ್‌ವೊಂದಕ್ಕೆ ಕರೆ ಮಾಡಿದ್ದು, ಬಳಿಕ ಬಂದ ಖಾಸಗಿ ಆಂಬುಲೆನ್ಸ್ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದೆ. ಆದರೆ ದುರಾದೃಷ್ಟವಶಾತ್ ಅಲ್ಲಿ ವೈದ್ಯರು ಆಕೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. 

ಜಿಮ್‌ನ ಟ್ರೆಡ್ಮಿಲ್‌ನಲ್ಲಿ ಓಡುತ್ತಿದ್ದಾಗಲೇ ಹೃದಯಾಘಾತ ಕುಸಿದು ಬಿದ್ದು ವ್ಯಕ್ತಿ ಸಾವು: ವಿಡಿಯೋ

ಮೃತ ಮಹಿಳೆಯನ್ನು 66 ವರ್ಷದ ವಿಜಯ ಭಾರ್ತಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತಿಯ ಜೊತೆ ದೆಹಲಿಯ ಆಗ್ರಾದಿಂದ ಪುಣೆಗೆ ವೈಯಾ ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೂಲಗಳ ಪ್ರಕಾರ ಭಾರ್ತಿ ಅವರಿಗೆ ರೈಲು ಮೊರೇನಾ ಸ್ಟೇಷನ್‌ನಿಂದ ಹೊರಟ ನಂತರ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಮೊರೇನಾವೂ ಗ್ವಾಲಿಯರ್‌ನಿಂದ ಹೆಚ್ಚೆಂದರೆ 30 ನಿಮಿಷದ ಪಯಣ. ಕೂಡಲೇ ಟಿಟಿಇಗೆ ಮಾಹಿತಿ ನೀಡಿ, ಅಲ್ಲಿಂದ ಸಮೀಪದ ಗ್ವಾಲಿಯರ್ ನಿಲ್ದಾಣಕ್ಕೆ ಮಾಹಿತಿ ನೀಡಲಾಯ್ತಾದರು ಯಾವುದೇ ಪ್ರಯೋಜನವಾಗಲಿಲ್ಲ. 

ಗ್ವಾಲಿಯರ್‌ಗೆ ರೈಲು ತಲುಪಿ ಸುಮಾರು ಒಂದು ಗಂಟೆಯವರೆಗೂ ಇವರಿಗೆ ಆಂಬುಲೆನ್ಸ್ ಸಿಕ್ಕಿಲ್ಲ. ನಂತರ ಖಾಸಗಿ ಆಂಬುಲೆನ್ಸ್‌ಗೆ ಕರೆ ಮಾಡಿ ಕರೆಸಿದಾಗ ಸಮಯ ಕೈ ಮೀರಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ. 

ಖುಷಿಯಿಂದ ಕುಣಿಯುತ್ತಿದ್ದಾಗಲೇ ಹೊರಟೋಯ್ತು ಶಿಕ್ಷಕನ ಜೀವ: ವೀಡಿಯೋ ವೈರಲ್

Latest Videos
Follow Us:
Download App:
  • android
  • ios