ದೊಡ್ಡಣ್ಣಗೆ ಜೈಶಂಕರ್ ತಿರುಗೇಟು: ಅಮೆರಿಕದ ಮಾನವ ಹಕ್ಕು ಸಮಸ್ಯೆಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ!
* ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆಯಲ್ಲಿ ಮಾನವ ಹಕ್ಕುಗಳ ವಿಷಯ ಚರ್ಚೆಯಾಗಿಲ್ಲ'
* ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸ್ಪಷ್ಟನೆ
* ಈ ವಿಚಾರ ಚರ್ಚೆಯಾದಾಗಲೆಲ್ಲ ಭಾರತ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ
ನವದೆಹಲಿ(ಏ.14): ಭಾರತ ಮತ್ತು ಅಮೆರಿಕ ನಡುವಿನ 2+2 ಮಾತುಕತೆಯಲ್ಲಿ ಮಾನವ ಹಕ್ಕುಗಳ ವಿಷಯ ಚರ್ಚೆಯಾಗಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಆದರೆ, ಈ ವಿಚಾರ ಚರ್ಚೆಯಾದಾಗಲೆಲ್ಲ ಭಾರತ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. ಎಸ್ ಜೈಶಂಕರ್ ಮಾತನಾಡಿ, ಜನರು ಭಾರತದ ಬಗ್ಗೆ ಕಲ್ಪನೆಗಳನ್ನು ಹೊಂದಬಹುದು. ಅಮೆರಿಕದ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲೆ ಭಾರತವೂ ಕಣ್ಣಿಟ್ಟಿದೆ ಎಂದು ಅವರು ಹೇಳಿದರು. ಭಾರತದ ಬಗ್ಗೆ ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಭಾರತದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಅಮೆರಿಕ ಗಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದರು. ಭಾರತದಲ್ಲಿ ಕೆಲವು ರಾಜ್ಯಗಳು, ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ ಎಂದೂ ಅವರು ಉಲ್ಲೇಖಿಸಿದ್ದರು.
2+2 ಮಾತುಕತೆಯಲ್ಲಿ ಮಾನವ ಹಕ್ಕುಗಳ ವಿಷಯದ ಬಗ್ಗೆ ಮಾತನಾಡುವುದಿಲ್ಲ
ಭಾರತ ಮತ್ತು ಯುಎಸ್ ನಡುವಿನ 2+2 ಮಾತುಕತೆಯ ನಂತರ ಬ್ಲಿಂಕನ್, ಎಸ್ ಜೈಶಂಕರ್, ರಾಜನಾಥ್ ಸಿಂಗ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಈ ವಿಷಯವನ್ನು ಸಭೆಯಲ್ಲಿ ಚರ್ಚಿಸಲಾಗಿಲ್ಲ ಎಂದು ಹೇಳಿದರು. ಈ ಸಭೆಯಲ್ಲಿ ನಾವು ಮಾನವ ಹಕ್ಕುಗಳ ವಿಚಾರವನ್ನು ಚರ್ಚಿಸಿಲ್ಲ ಎಂದು ಎಸ್ ಜೈಶಂಕರ್ ಹೇಳಿದ್ದಾರೆ. ಈ ಸಭೆಯು ಮುಖ್ಯವಾಗಿ ರಾಜಕೀಯ-ಮಿಲಿಟರಿ ವಿಷಯಗಳ ಬಗ್ಗೆ ಮಾತುಕತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಲಿಂಕನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪ
ಎಸ್ ಜೈಶಂಕರ್ ಮಾತನಾಡಿ, ಬ್ಲಿಂಕನ್ ಭಾರತಕ್ಕೆ ಬಂದಾಗ ಈ ವಿಚಾರ ಮುನ್ನೆಲೆಗೆ ಬಂತು. ಆ ಪತ್ರಿಕಾಗೋಷ್ಠಿಯನ್ನು ನೀವು ನೆನಪಿಸಿಕೊಂಡರೆ, ನಾವು ಈ ವಿಷಯವನ್ನು ಚರ್ಚಿಸಿದ್ದೇವೆ ಮತ್ತು ನಾವು ನಮ್ಮ ಅಭಿಪ್ರಾಯ ಮುಂದಿಟ್ಟಿದ್ದೆವು ಎಂದು ನೆನಪಿಸಲಿಚ್ಛಿಸುತ್ತೇನೆ. ಭಾರತದಲ್ಲಿನ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಟೀಕೆಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿ ಭಾರತದ ಬಗ್ಗೆ ಅಭಿಪ್ರಾಯವನ್ನು ಹೊಂದಲು ಜನರಿಗೆ ಹಕ್ಕಿದೆ ಎಂದು ಹೇಳಿದ್ದಾರೆ. ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದರು.
ಭಾರತದಲ್ಲಿನ ಮಾನವ ಹಕ್ಕುಗಳ ಬಗ್ಗೆ ಅಮೆರಿಕದ ಟೀಕೆಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಅವರು, ಭಾರತದ ಬಗ್ಗೆ ಅಭಿಪ್ರಾಯವನ್ನು ಹೊಂದಲು ಜನರಿಗೆ ಹಕ್ಕಿದೆ ಎಂದು ಹೇಳಿದ್ದಾರೆ. ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದರು.
ಬ್ಲಿಂಕನ್ ಏನು ಹೇಳಿದರು?
ವಾಸ್ತವವಾಗಿ, 2+2 ಸಭೆಯ ನಂತರ ಜಂಟಿ ಸಮ್ಮೇಳನದಲ್ಲಿ, US ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್, ಭಾರತ ಮತ್ತು ಅಮೆರಿಕವು ಮಾನವ ಹಕ್ಕುಗಳ ರಕ್ಷಣೆಯಂತಹ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧತೆಯನ್ನು ಹಂಚಿಕೊಳ್ಳುತ್ತವೆ ಎಂದು ಹೇಳಿದ್ದರು. ಈ ಮೌಲ್ಯಗಳ ಆಧಾರದ ಮೇಲೆ ನಾವು ಭಾರತೀಯ ಪಾಲುದಾರರೊಂದಿಗೆ ಸಂಪರ್ಕ ಸಾಧಿಸುತ್ತೇವೆ. ಭಾರತದಲ್ಲಿನ ಕೆಲವು ರಾಜ್ಯಗಳು, ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಹೆಚ್ಚಿಸಿರುವ ಕೆಲವು ಘಟನೆಗಳನ್ನು ನಾವು ಭಾರತದಲ್ಲಿ ಗಮನಿಸುತ್ತಿದ್ದೇವೆ ಎಂದಿದ್ದರು.