ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ರಾಹುಲ್ ಗಾಂಧಿ ಸೇರಿ ಅನೇಕ ಪ್ರಮುಖ ನಾಯಕರು ಹೊಸ ವರ್ಷಕ್ಕೆ ದೇಶದ ಜನತೆಗೆ ಶುಭ ಕೋರಿದ್ದಾರೆ.
ಹೊಸದಿಲ್ಲಿ, ಜನವರಿ 1, 2023: ಇಂದು ಜನವರಿ 1, 2023. ಅಂದರೆ ಹೊಸ ವರ್ಷದ (New Year) ಮೊದಲ ದಿನ. ಈ ಹಿನ್ನೆಲೆ ಪ್ರಧಾನಿ ಮೋದಿ (PM Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೇರಿ ದೇಶದ ಪ್ರಮುಖ ನಾಯಕರು (Leaders) ದೇಶದ ಜನತೆಗೆ ಹೊಸ ವರ್ಷದ ಶುಭ ಕೋರಿದ್ದಾರೆ. 2023 ಎಲ್ಲರಿಗೂ ಸಂತಸ (Happiness) ಸಿಗಲಿ ಹಾಗೂ ಯಶಸ್ಸು (Success) ದೊರೆಯಲಿ ಎಂದೂ ನಾಯಕರು ಭಾನುವಾರ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ಜನವರಿ 1, ಭಾನುವಾರ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘’ಎಲ್ಲರಿಗೂ 2023 ಉತ್ತಮವಾಗಿರಲಿ. ಇದು ಭರವಸೆ, ಸಂತೋಷ ಮತ್ತು ಬಹಳಷ್ಟು ಯಶಸ್ಸಿನಿಂದ ತುಂಬಿರಲಿ. ಪ್ರತಿಯೊಬ್ಬರೂ ಅದ್ಭುತ ಆರೋಗ್ಯವನ್ನು ಆಶೀರ್ವದಿಸಲಿ’’ ಎಂದು ಪ್ರಧಾನಿ ಮೋದಿ ಶುಭ ಕೋರಿದ್ದಾರೆ.
ಇದನ್ನು ಓದಿ: 2023 Box Office: 2023ಕ್ಕೆ 'ಭಾರತೀಯ ಚಿತ್ರರಂಗ'ದ ಬಾಕ್ಸಾಫೀಸ್ ಸುಲ್ತಾನ ಯಾರು?
ಹಾಗೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಹೊಸ ವರ್ಷ ಹಿನ್ನೆಲೆ ಜನರಿಗೆ ಶುಭ ಕೋರಿದ್ದು, ಅವರಿಗೆ ಹೊಸ ಸ್ಫೂರ್ತಿಗಳು, ಗುರಿಗಳು ಮತ್ತು ಸಾಧನೆಗಳನ್ನು ಹಾರೈಸಿದರು. ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ದ್ರೌಪದಿ ಮುರ್ಮು “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಎಲ್ಲಾ ನಾಗರಿಕರಿಗೆ ಮತ್ತು ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ಶುಭಾಶಯಗಳು. 2023 ರ ವರ್ಷವು ನಮ್ಮ ಜೀವನದಲ್ಲಿ ಹೊಸ ಸ್ಫೂರ್ತಿಗಳು, ಗುರಿಗಳು ಮತ್ತು ಸಾಧನೆಗಳನ್ನು ತರಲಿ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸಂಕಲ್ಪ ಮಾಡೋಣ’’ ಎಂದು ಶುಭ ಹಾರೈಸಿದ್ದಾರೆ.
ಇನ್ನು, ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಜನರು ಸಂಕಲ್ಪ ಮಾಡಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮನವಿ ಮಾಡಿದ್ದಾರೆ. “ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ಸಂತೋಷದಾಯಕ ಸಂದರ್ಭವು ನಮ್ಮ ಉನ್ನತಿ ಬೆಳವಣಿಗೆಯ ಪಥವನ್ನು ಖಾತ್ರಿಪಡಿಸುವ ಹೆಚ್ಚಿನ ಶಕ್ತಿಯೊಂದಿಗೆ ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಒಂದು ಅವಕಾಶವಾಗಿದೆ. ಭಾರತವನ್ನು ಪ್ರಗತಿ ಮತ್ತು ಸಮೃದ್ಧಿಯ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸೋಣ. #ವೆಲ್‌ಕಮ್2023” ಎಂದು ಜಗದೀಪ್ ಧನಕರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: New Year 2023: ಹೊಸ ವರ್ಷಕ್ಕೆ ಈ ಕೆಲಸ ಮಾಡಿದ್ರೆ ಹಣದ ಮಳೆಯಾಗೋದು ಖಚಿತ
ರಾಹುಲ್ ಗಾಂಧಿಯಿಂದಲೂ ಶುಭ ಹಾರೈಕೆ
ಕಾಂಗ್ರೆಸ್ ಪಕ್ಷದ ಪಾದಯಾತ್ರೆಯನ್ನು ಮುನ್ನಡೆಸುತ್ತಿರುವ ‘ಕೈ’ ಸಂಸದ ರಾಹುಲ್ ಗಾಂಧಿ, ರಾಷ್ಟ್ರಾದ್ಯಂತ ಜನಸಾಮಾನ್ಯರನ್ನು ಸಂಪರ್ಕಿಸಲು ಪ್ರಾರಂಭಿಸಲಾದ 'ಭಾರತ್ ಜೋಡೋ ಯಾತ್ರೆ' ಬಗ್ಗೆ ಹಂಚಿಕೊಂಡಿದ್ದಾರೆ. ಮತ್ತು "2023 ರಲ್ಲಿ, ಪ್ರತಿ ಬೀದಿ, ಪ್ರತಿ ಹಳ್ಳಿ, ಪ್ರತಿ ನಗರವು ಪ್ರೀತಿಯ ಅಂಗಡಿಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಾಗೆ, ದೇಶದ ಬಹುತೇಕ ರಾಜ್ಯದ ಮುಖ್ಯಮಂತ್ರಿಗಳು ಸಹ ಹೊಸ ವರ್ಷ ಹಿನ್ನೆಲೆ ಜನತೆಗೆ ಶುಭ ಕೋರಿದ್ದಾರೆ. ಈ ಮಧ್ಯೆ, ದೇಶದ ಜನತೆ 2023 ಅನ್ನು ಸಂಭ್ರಮಾಚರಣೆಯ ಮೂಲಕ ಬರ ಮಾಡಿಕೊಂಡಿದ್ದಾರೆ. ಪಟಾಕಿ ಸಿಡಿಸುವ ಮೂಲಕ, ಸಂಗೀತದೊಂದಿಗೆ ಕುಣಿದು, ಕುಪ್ಪಳಿಸಿ ದೇಶದ ಬಹುತೇಕ ನಗರಗಳ ಜನತೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
