Asianet Suvarna News Asianet Suvarna News

121 ಜನರ ಬಲಿ ಪಡೆದ ಹತ್ರಾಸ್ ಸತ್ಸಂಗದ ಹಿಂದಿರುವ ಗುರು ಬೋಲೇಬಾಬಾ ಯಾರು?

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತದಲ್ಲಿ  121 ಜನ ಪ್ರಾಣಬಿಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಸಾಗರೋಪಾದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಈ ಸತ್ಸಂಗದ ಹಿಂದಿರುವ ಗುರು ಯಾರು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ...

Hathras stampede Who is Guru Bholebaba behind the Hathras Satsang that killed 121 people akb
Author
First Published Jul 3, 2024, 12:00 PM IST

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತದಲ್ಲಿ  121 ಜನ ಪ್ರಾಣಬಿಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಸಾಗರೋಪಾದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಈ ಸತ್ಸಂಗದ ಹಿಂದಿರುವ ಗುರು ಯಾರು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ...

121 ಜನರ ಬಲಿ ಪಡೆದ ಈ ದುರಾದೃಷ್ಟಕರ ಸತ್ಸಂಗವನ್ನು ಆಯೋಜಿಸಿದವರು ಭೋಲೆ ಬಾಬಾ ಅಲಿಯಾಸ್ ನಾರಾಯಣ ಸಾಕರ್‌ ಹರಿ, ಸ್ವಯಂ ಘೋಷಿತ ದೇವಮಾನವರಾಗಿರುವ ಇವರು, ತಾನು ಈ ಹಿಂದೆ ಭಾರತದ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ತಾನು ಉದ್ಯೋಗದಲ್ಲಿದ್ದಾಗಲೇ ನನಗೆ ಆಧ್ಯಾತ್ಮದತ್ತ ಒಲವು ಮೂಡಿತ್ತು. ಹೀಗಾಗಿ 1990ರಲ್ಲಿ ಉದ್ಯೋಗವನ್ನು ತೊರೆದು ಆಧ್ಮಾತ್ಮಿಕದ ದಾರಿಯಲ್ಲಿ ಸಾಗಲು ನಿರ್ಧರಿಸಿದೆ ಎಂದು ಇವರು ಹೇಳಿಕೊಂಡಿದ್ದಾರೆ.

ಹಾಥ್ರಸ್ ಕಾಲ್ತುಳಿತ: ಎಲ್ಲೆಂದರಲ್ಲಿ ಹೆಣಗಳು.. ಆಸ್ಪತ್ರೆಯಲ್ಲಿ ಮನಕಲಕುವ ದೃಶ್ಯ

ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಹಾದೂರ್ ನಗರಿ ಗ್ರಾಮದಲ್ಲಿ ರೈತ ನನ್ನೇ ಲಾಲ್ ಹಾಗೂ ಕಟೋರಿ ದೇವಿ ಎಂಬುವವರ ಮಗನಾಗಿ ಜನಿಸಿದ ಈ ಭೋಲೆ ಬಾಬಾನ ಮೂಲ ಹೆಸರು ಸೂರಜ್ ಪಾಲ್, ಇಬ್ಬರು ಸೋದರರನ್ನು ಹೊಂದಿದ್ದು, ಅವರಲ್ಲೊಬ್ಬರು ಮೃತಪಟ್ಟಿದ್ದಾರೆ. ತಮ್ಮ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ಇವರು ಕಾಲೇಜು ಶಿಕ್ಷಣ ಮುಗಿಸಿದ ನಂತರ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಸ್ಥಳೀಯ ಗುಪ್ತಚರ ವಿಭಾಗದಲ್ಲಿ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಂತರ ಕೆಲಸ ತೊರೆದು ಧಾರ್ಮಿಕ ಗುರುವಾಗಿ ಬದಲಾಗಿದ್ದರು. 

1999ರಲ್ಲಿ ಪೊಲೀಸ್ ಇಲಾಖೆಯ ಉದ್ಯೋಗ ತೊರೆದ ಸೂರಜ್ ಪಾಲ್ ನಂತರ ತಮ್ಮ ಹೆಸರನ್ನು ನಾರಾಯಣ ಸಾಕರ್ ಹರಿ ಎಂದು ಬದಲಿಸಿಕೊಂಡು ಧಾರ್ಮಿಕ ಗುರುವಾದರು. ಈ ಭೋಲೆ ಬಾಬಾನ ಒಂದು ವಿಶೇಷ ಲಕ್ಷಣ ಎಂದರೆ ಇವರು ಎಲ್ಲಾ ಸ್ವಾಮೀಜಿಗಳಂತೆ ಕೇಸರಿ ಬಣ್ಣದ ಉಡುಪನ್ನು ಧರಿಸುತ್ತಿರಲಿಲ್ಲ, ಸದಾ ಬಳಿ ಬಣ್ಣದ ಬಟ್ಟೆ ಧರಿಸುವ ಇವರು ಅದಕ್ಕೆ ಟೈ ಧರಿಸುತ್ತಿದ್ದರು. ಅದರ ಹೊರತಾಗಿ ಕುರ್ತಾ ಪೈಜಾಮ್ ಧರಿಸುತ್ತಿದ್ದರು.  ಮಾನವ ಧರ್ಮದ ಬಗ್ಗೆ ಉಪದೇಶ ನೀಡುವ ಇವರು ತಮ್ಮ ಧರ್ಮ ಉಪದೇಶದ ವೇಳೆ ಅವರು ತಾನು ದೇಣಿಗೆಯಾಗಿ ಸಿಕ್ಕ ಹಣವನ್ನು ತನಗೆಂದು ಇಟ್ಟುಕೊಳ್ಳುವುದಿಲ್ಲ, ಅದನ್ನು ತನ್ನ ಭಕ್ತರಿಗಾಗಿಯೇ ವೆಚ್ಚ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಇವರ ಪತ್ನಿ ಪ್ರೇಮ ಬಟಿ ಅವರು ಸಹ ಸದಾ ಇವರೊಂದಿಗೆ ಇವರ ಧಾರ್ಮಿಕ ಪ್ರವಚನಗಳಲ್ಲಿ ಇರುತ್ತಿದ್ದರು. 

ಉತ್ತರ ಪ್ರದೇಶದ ಸತ್ಸಂಗದಲ್ಲಿ ಭೀಕರ ದುರಂತ: ಕಾಲ್ತುಳಿತಕ್ಕೆ 120 ಬಲಿ..!

ದುರಂತ ನಡೆದಿದ್ದು ಹೇಗೆ?

ಸತ್ಸಂಗದ ನಂತರ ಈ ಗುರುವಿನ ಸೇವಕರು ತೀವ್ರವಾದ ಶಾಖ ಹಾಗೂ ಬಿಸಿಲಿನ ವಾತಾವರಣದ ಮಧ್ಯೆಯೂ ಜನರನ್ನು ಅಲ್ಲಿಂದ ಹೋಗಲು ಬಿಡದೇ ತಡೆದರು ಎಂಬ ಆರೋಪ ಕೇಳಿ ಬಂದಿದೆ.  ಗುರು ಭೋಲೆ ಬಾಬಾ ಹಾಗೂ ಆತನ ತಂಡ ಮೊದಲು ಹೊರಟು ಹೋಗಲಿ ನಂತರ ಭಕ್ತರನ್ನು ಬಿಟ್ಟರಾಯಿತು ಎಂದು ಭಕ್ತರನ್ನು ಅಲ್ಲೇ ತಡೆದ ಕಾರಣ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮತ್ತೊಂದು ವರದಿಯ ಪ್ರಕಾರ, ಸತ್ಸಂಗದ ನಂತರ ಈ ಭೋಲೆಬಾಬಾ ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಭಕ್ತರ ಗುಂಪು ಅವರತ್ತ ಸಾಗಿ ಅವರನ್ನು ಸ್ಪರ್ಶಿಸಲು ಮುಗಿಬಿದ್ದರು. ಈ ವೇಳೆ ಆಯೋಜಕರು ಭಕ್ತರನ್ನು ತಡೆದಿದ್ದರಿಂದ ಕಾಲ್ತುಳಿತ ಉಂಟಾಗಿ ಈ ದುರಂತ ಸಂಭವಿಸಿತ್ತು ಎಂದು ವರದಿ ಆಗಿದೆ. 

 

Latest Videos
Follow Us:
Download App:
  • android
  • ios