ಉತ್ತರ ಪ್ರದೇಶ(ಅ.02): ಹಥ್ರಾಸ್ ಗ್ಯಾಂಗ್ ರೇಪ್ ಅಂಡ್ ಮರ್ಡರ್ ಪ್ರಕರಣ ದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ. ಆದರೆ ಉತ್ತರ ಪ್ರದೇಶದ ಪೊಲೀಸರು ಮಾತ್ರ ತಾವಾಡಿದ್ದೇ ಆಟ ಎಂಬಂತೆ ವರ್ತಿಸಿದ್ದರು. ಅತ್ಯಾಚಾರ ಹಾಗೂ ತೀವ್ರವಾಗಿ ಗಾಯಗೊಂಡ  19 ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟ ಬೆನ್ನಲ್ಲೇ ರಾತ್ರೋರಾತ್ರೋ ಪೊಲೀಸರು ಶವಸಂಸ್ಕಾರ ಮಾಡಿದ್ದರು. ಪೋಷಕರನ್ನು ಹತ್ತಿರ ಸೇರಿಸದ ಪೊಲೀಸರ ನಡೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಐವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.

11 ರೇಪುಗಳು ; ಹತ್ತಾರು ಅನುಮಾನಗಳು... ಬೆಚ್ಚಿ ಬೀಳಿಸುವ ಯುಪಿ ರಿಪೋರ್ಟ್ ಕಾರ್ಡ್!.

ಹಥ್ರಾಸ್ ಎಸ್‌ಪಿ ವಿಕ್ರಾಂತ್ ವೀರ್, ಸರ್ಕಲ್ ಆಫೀಸರ್ ರಾಮ್ ಶಬ್ದ್, ಇನ್ಸ್‌ಪೆಕ್ಟರ್ ರಾಮ್ ಕುಮಾರ್ ವರ್ಮಾ, ಸಬ್ ಇನ್ಸ್‌ಪೆಕ್ಟರ್ ಜಗ್‌ವೀರ್ ಸಿಂಗ್ ಹಾಗೂ ಮುಖ್ಯ ಪೇದೆ ಮಹೇಶ್ ಪಾಲ್ ಅಮಾನತು ಮಾಡುವಂತೆ ಯೋಗಿಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.

ಹತ್ರಾಸ್ ಗ್ಯಾಂಗ್‌ ರೇಪ್, ಮೃತ ಸಂತ್ರಸ್ತೆಯ ಪೋಸ್ಟ್‌ ಮಾರ್ಟಂ ರಿಪೋರ್ಟ್ ಬಹಿರಂಗ!...

ಅತ್ಯಾಚಾರಕ್ಕೊಳಗಾದ ಬಾಲಕಿ ಮೃತಪಟ್ಟ ಬೆನ್ನಲ್ಲೇ, ಪೋಷಕರ ವಿರೋಧದ ನಡುವೆ ರಾತ್ರೋ ರಾತ್ರಿ ಪೊಲೀಸರು ಶವಸಂಸ್ಕಾರ ಮಾಡಿದ್ದರು. ಬಾಲಕಿ ಶವವನ್ನು ಪೋಷಕರಿಗೆ ಹಸ್ತಾಂತರಿಸಿದೆ ತಾವೇ ಬೆಂಕಿಹಚ್ಚಿ ಸುಟ್ಟಿದ್ದರು. ಇದು ಸಾಕಷ್ಟು ಅನುಮಾನಕ್ಕೂ ಕಾರಣವಾಗಿತ್ತು. ಈ ರೀತಿ ನಡೆದುಕೊಂಡು ನಿಯಮ ಉಲ್ಲಂಘಿಸಿದ ಪೊಲೀಸರನ್ನು ಅಮಾನತು ಮಾಡುವಂತೆ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.

ಆದೇಶಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಮಹಿಳೆಯ ಸುರಕ್ಷೆತೆಗೆ ಯುಪಿ ಸರ್ಕಾರ ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದರು. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಈ ಶಿಕ್ಷೆ ದೇಶಕ್ಕೆ ಮಾದರಿಯಾಗಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು. ಮಹಿಳೆಯರು ಯಾವುದೇ ಆತಂಕ ಪಡಬೇಕಿಲ್ಲ ಎಂದಿದ್ದರು.