ಲಕ್ನೋ(ಅ.01): ಹತ್ರಾಸ್ ಗ್ಯಾಂಗ್‌ರೇಪ್ ಹಾಗೂ ಕ್ರೌರ್ಯಕ್ಕೆ ಗುರಿಯಾದ ಯುವತಿಯ ಮರಣೋತ್ತರ ವರದಿ ಸದ್ಯ ಬಹಿರಂಗವಾಗಿದೆ. ವರದಿಯಲ್ಲಿ ಯುವತಿಯ ಕತ್ತು ಹಿಸುಕಿದ ಹಾಗೂ ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಲಾಗಿದೆ. ಯುವತಿಯ ಬೆನ್ನುಮೂಳೆಗೂ ಹಾನಿಯಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಿಂದ ಯುವತಿಯ ಮೇಲೆ ನಡೆದ ಕ್ರೌರ್ಯ ಎಷ್ಟು ಭೀಕರವಾಗತ್ತೆಂಬುವುದು ಅಂದಾಜಿಸಬಹುದಾಗಿದೆ.

ಸಫ್ದರ್‌ಗಂಜ್ ಆಸ್ಪತ್ರೆ ಜಾರಿಗೊಳಿಸಿದ ಈ ವರದಿಯಲ್ಲಿ ಕೇವಲ ಒಂದು ಬಾರಿಯಲ್ಲ ಅನೇಕ ಬಾರಿ ಕತ್ತು ಹಿಸುಕಲಾಗಿದೆ ಎಂದು ತಿಳಿಸಲಾಗಿದೆ. ಈ ವೇಳೆ ಸಂಸತ್ರಸ್ತೆ ತನ್ನ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಹೀಗಾಗಿ ಕುತ್ತಿಗೆಯ ಮೂಳೆ ತುಂಡಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಈ ಘಟನೆ ಸೆಪ್ಟೆಂಬರ್ 14 ರಂದು ಬೆಳಗ್ಗೆ ಸುಮಾರು ಒಂಭತ್ತು ಗಂಟೆಗೆ ನಡೆದಿದ್ದು, ಸಂಜೆ ಸುಮಾರು ನಾಲ್ಕು ಗಂಟೆಗೆ ಈಕೆಯನ್ನು ಆಲೀಘರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇಲ್ಲಿ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಾಗ ಸೆಪ್ಟೆಂಬರ್ 28 ರಂದು ಎಹಲಿಯ ಸಫ್ದರ್‌ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಯುವತಿ ಸೆ. 29ರಂದ ಬೆಳಗ್ಗೆ 6.55 ಗಂಟೆಗೆ ಕೊನೆಯುಸಿರೆಳೆದಿದ್ದಾಳೆದು ಹೇಳಲಾಗಿದೆ. 

ಇನ್ನು ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತೋ ಇಲ್ಲವೋ ಎಂಬ ವರದಿ ಗುರುವಾರ ಮಧ್ಯಾಹ್ನ ಬರುವ ವರದಿಯಲ್ಲಿ ತಿಳಿಯಲಿದೆ. ಫಾರೆನ್ಸಿಕ್ ಸ್ಯಾಂಪಲ್‌ಗಳನ್ನು ಆಗ್ರಾದ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಇಲ್ಲಿ ಪರೀಕ್ಷೆ ನಡೆಯಲಿದೆ.