ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. 2007ರ ವಿವಾದಾತ್ಮಕ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾಗೊಂಡಿದೆ.

ನವದೆಹಲಿ(ಆ.26): ಹೇಳಿಕೆ ವಿವಾದಗಳು ಇದೀಗ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ನಾಯಕ ನೂಪುರ್ ಶರ್ಮಾ ನೀಡಿದ ಹೇಳಿಕೆ, ಬಿಜೆಪಿ ನಾಯಕ ಟಿ ರಾಜಾ ಸಿಂಗ್ ನೀಡಿರುವ ಹೇಳಿಕೆ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇದರ ನಡುವೆ 2007ರ ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. 2007ರಲ್ಲಿ ಯೋಗಿ ಆದಿತ್ಯನಾಥ್ ಭಾಷಣದಲ್ಲಿ ಒಂದು ಸಮುದಾಯ ಹಾಗೂ ಧರ್ಮದ ಕುರಿತು ಮಾತನಾಡಿದ್ದಾರೆ. ಇದರಿಂದ ಸಮುದಾಯಕ್ಕೆ ನೋವಾಗಿದೆ. ಹೀಗಾಗಿ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಿಸ್ಕರಿಸಿದೆ. ಈ ಅರ್ಜಿ ಯೋಗಿ ಆದಿತ್ಯನಾಥ್ ವಿರುದ್ಧ ಪ್ರಕರಣ ದಾಖಲಿಸುವ ಅರ್ಹತೆ ಪಡೆದಿಲ್ಲ ಎಂದ ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಈ ಪ್ರಕರಣಕ್ಕೆ ಅಂತ್ಯಹಾಡಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಈ ಮಹತ್ವದ ಆದೇಶ ನೀಡಿದೆ. ಸಿಎಂ ಯೋಗಿ ಅದಿತ್ಯನಾಥ್ ವಿರುದ್ದ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳುವ ಅರ್ಹತೆ ಈ ಅರ್ಜಿಗಿಲ್ಲ. 2018ರಲ್ಲಿ ಅಲಹಬಾದ್ ಹೈಕೋರ್ಟ್ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. 

ನ್ಯೂಜೆರ್ಸಿಗೆ ತಲುಪಿದ ಯೋಗಿ, ಬುಲ್ಡೋಜರ್ ಬಾಬಾ ಅಮೆರಿಕದಲ್ಲೂ ಫೇಮಸ್‌!

2007ರಲ್ಲಿ ಯೋಗಿ ಆದಿತ್ಯನಾಥ್ ಗೋರಖಪುರದ ಸಂಸದನಾಗಿದ್ದರು. ಈ ವೇಳೆ ಗೋರಖಪುರದಲ್ಲಿ ಮಾಡಿದ ಭಾಷಣದಲ್ಲಿ ಒಂದು ಸಮುದಾಯ ಹಾಗೂ ಧರ್ಮವನ್ನುದ್ದೇಶಿ ಮಾತುಗಳನ್ನಾಡಿದ್ದಾರೆ. ಇದು ಸಮುದಾಯದ ಭಾವನೆಗೆ ಧಕ್ಕೆಯಾಗಿದೆ ಎಂದು ದೂರು ದಾಖಲಾಗಿತ್ತು. ಯೋಗಿ ಆದಿತ್ಯನಾಥ್ ಹೇಳಿಕೆಯಿಂದ ಗೋರಖಪುರ ಸೇರಿದಂತೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಗಲಭೆ ಸೃಷ್ಟಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. 
 ಈ ಪ್ರಕರಣ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿತ್ತು. ಈ ವಿಚಾರಣೆ ವೇಳೆ ಯೋಗಿ ಹೇಳಿಕೆಯಲ್ಲಿ ವಿವಾದಾತ್ಮಕ ಅಂಶಗಳಿಲ್ಲ. ಇಷ್ಟೇ ಅಲ್ಲ ಈ ಹೇಳಿಕೆಯಿಂದ ಗೋರಖ್‌ಪುರದಲ್ಲಿ ಯಾವುದೇ ಗಲಭೆಯಾಗಿಲ್ಲ ಎಂದಿತ್ತು. ಹೀಗಾಗಿ ಯೋಗಿ ವಿರುದ್ದದ ಪ್ರಕರಣ ಅಂತ್ಯಗೊಳಿಸಿತ್ತು. 

ಆದರೆ ಅಲಹಾಬಾದ್ ಕೋರ್ಟ್ ಆದೇಶದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಮೇಲ್ಮನವಿಗೆ ಅರ್ಹತೆ ಪಡೆದಿಲ್ಲ ಎಂದು ಪ್ರಕರಣಕ್ಕೆ ಸುಪ್ರೀಂ ಅಂತ್ಯ ಹಾಡಿದೆ. ಈ ಮೂಲಕ ಸಿಎಂ ಯೋಗಿ ಆದಿತ್ಯನಾಥ್ ನಿರಾಳರಾಗಿದ್ದಾರೆ.

ಯೋಗಿಯಿಂದ ಫೋನ್‌ ಕದ್ದಾಲಿಕೆ: ಅಖಿಲೇಶ್‌ ಆರೋಪ
ತಮ್ಮ ಪಕ್ಷದ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬೆನ್ನಲ್ಲೇ, ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ‘ಸ್ವತಃ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಅವರೇ ನಮ್ಮ ಪಕ್ಷದ ನಾಯಕರ ಫೋನ್‌ ಕದ್ದಾಲಿಕೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್‌, ‘ಸಮಾಜವಾದಿ ಪಕ್ಷದ ಎಲ್ಲಾ ಕರೆಗಳನ್ನೂ ಪ್ರತಿದಿನವೂ ಕದ್ದಾಲಿಕೆ ಮಾಡಲಾಗುತ್ತಿದೆ, ಜೊತೆಗೆ ಪಕ್ಷದ ಎಲ್ಲಾ ಕಚೇರಿಗಳ ಲ್ಯಾಂಡ್‌ಲೈನ್‌ ಕರೆಗಳನ್ನೂ ಕದ್ದಾಲಿಸಲಾಗುತ್ತಿದೆ. ನನ್ನ ಮತ್ತು ಪಕ್ಷದ ಹಲವು ಹಿರಿಯ ನಾಯಕರ ಕರೆಗಳನ್ನು ಕೂಡಾ ಕದ್ದಾಲಿಸಲಾಗುತ್ತಿದೆ. ಅದನ್ನು ನಿತ್ಯವೂ ಸಂಜೆ ವೇಳೆಗೆ ಸ್ವತಃ ಮುಖ್ಯಮಂತ್ರಿಗಳೇ ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಉದ್ಯೋಗ ನೀಡುತ್ತೇವೆ: ಯೋಗಿ ಆದಿತ್ಯನಾಥ್‌