ನವದೆಹಲಿ(ಡಿ.30): ಕಳೆದ ಒಂದು ತಿಂಗಳನಿಂದ ರೈತರು ನಡಸುತ್ತಿರುವ ಪ್ರತಿಭಟನೆ ಹರ್ಯಾಣ ಸ್ಥಳೀಯ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಹರ್ಯಾಣ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಸೋನಿಪತ್ ಹಾಗೂ ಅಂಬಾಲದಲ್ಲಿನ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ.

ಒತ್ತಾಯಪೂರ್ವಕವಾಗಿ MSPಗಿಂತ ಕಡಿಮೆ ದರಕ್ಕೆ ಮಾರಾಟ; ರೈತರಿಂದ ಹೋರಾಟ ಖಚಿತ!

ಕಳೆದ ವರ್ಷ ಚುನಾವಣೆ ಬಳಿಕ ಬಿಜೆಪಿ ಹಾೂ ಜೆಜೆಪಿ ಮೈತ್ರಿಮಾಡಿಕೊಂಡಿದೆ. ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ಅವರ ಜೆಜೆಪಿ ಪಕ್ಷ ಹಿಸಾರ್, ಉಕಲನಾ ಹಾಗೀ ರೇವಾರಿಯಲ್ಲಿ ಸೋಲು ಕಂಡಿದೆ. ಈ ಮೂಲಕ ರೈತ ಪ್ರತಿಭಟನೆಯಿಂದ ಆಡಳಿತರೂಡ ಬಿಜೆಪಿಗೆ ಇದೀಗ ಒಂದೊಂದೆ ಸ್ಥಾನ ಕೈತಪ್ಪುತ್ತಿದೆ.

ಸೋನಿಪತ್‌ನಲ್ಲಿ ಕಾಂಗ್ರೆಸ್ ಬರೋಬ್ಬರಿ 14,000 ಮತಗಳ ಅಂತರದಿಂದ ಗೆದ್ದಿದೆ. ಕಾಂಗ್ರೆಸ್ 72,111 ಮತ ಪಡೆದು ಗೆಲವು ಸಾಧಿಸಿದ್ದರೆ,  ಬಿಜೆಪಿ 58,300 ಮತಗಳನ್ನು ಪಡೆದಿದೆ. ಸೋನಿಪತ್ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಗು ಗಡಿ ಪ್ರದೇಶದ ಸನಿಹದಲ್ಲೇ ಇದೆ.  

ಈ ಕುರತಿ ಕಾಂಗ್ರೆಸ್ ನಾಯಕ ಶ್ರೀವತ್ಸ ಟ್ವೀಟ್ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಈ ಸೋಲಿನ ಕುರಿತು ಬಿಜೆಪಿ ಹಾಗೂ ಮಾಧ್ಯಮಗಳು ಬಾಯಿಬಿಚ್ಚುವುದಿಲ್ಲ. ಹೀಗಾಗಿ ಕಾರ್ಯಕರ್ತರು ಈ ಗೆಲುವಿನ ಸಂದೇಶ ಹರಡಬೇಕು ಎಂದು ಟ್ವೀಟ್ ಮಾಡಿದ್ದಾರೆ.