ನವದೆಹಲಿ(ಡಿ.30): ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆ ಇದೀಗ ದೇಶದ ಹಲವು ಭಾಗಗಳಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟದ ಕುರಿತು ಬೆಳಕು ಚೆಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ ಕೃಷಿ ಮಸೂದೆ ಜಾರಿಗೊಂಡ ಬಳಿಕ ಭತ್ತ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ಬೆಲೆ ಶೇಕಡಾ 50ರಷ್ಟು ಕುಸಿತ ಕಂಡಿದೆ. ಇಷ್ಟೇ ಅಲ್ಲ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡಿಸಲಾಗುತ್ತಿದೆ ಎಂದು ರೈತರ ಸಂಘಟನೆಗಳು ಆರೋಪಿಸಿದೆ

ಪ್ರತಿಭಟನಾ ನಿರತ ರೈತರ ಒಂದು ನಿರ್ಧಾರ, ಸಂಕಷ್ಟದಲ್ಲಿ ಒಂದು ರಾಜ್ಯದ ಜನ!.

ಕೇಂದ್ರದ ಕೃಷಿ ಮಸೂದೆಗಳು ಇದೇ ಕಾರಣಕ್ಕೆ ರೈತರಿಗೆ ಪ್ರಯೋಜನವಿಲ್ಲ ಎಂದು ನಾವು ಹೇಳುತ್ತಿದ್ದೇವೆ. ಕನಿಷ್ಠ ಬೆಂಬಲ ಬೆಲೆಯೂ ಇಲ್ಲ, ಮಾರುಕಟ್ಟೆ ಬೆಲೆಯೂ ಇಲ್ಲ. ಹೀಗಿರುವಾಗ ಕೃಷಿ ಮಸೂದೆಯ ಅಗತ್ಯವೇನಿದ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರಶ್ನಿಸಿದೆ.

ಸರ್ಕಾರ ರೈತರ ಬೇಡಿಕೆಗಳನ್ನೂ ಪೂರೈಸಿದರೆ ಮಾತ್ರ ಪ್ರತಿಭಟನೆ ಹಿಂಪಡೆಯಲಿದ್ದೇವೆ. ಆದರೆ ನಮ್ಮ ಬೇಡಿಕೆಯಲ್ಲಿ ರಾಜೀ ಇಲ್ಲ. ಸಂಪೂರ್ಣ ಬೇಡಿಕೆ ಈಡೇರುವವರೆಗೆೆ ಹೋರಾಟ ಮುಂದವರಿಸಲಿದ್ದೇವೆ. ನಾವು ದೆಹಲಿಯಲ್ಲಿ ಬೇಡಿಕೆ ಈಡೇರುವರಗೆ ತಂಗಲು ಸಿದ್ಧರಾಗಿದ್ದೇವೆ. ಹೊಸ ವರ್ಷವನ್ನು ದೆಹಲಿ ಗಡಿಯಲ್ಲೇ ಆಚರಿಸಲಿದ್ದೇವೆ ಎಂದು  ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.