ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡ ಕಾರು ಅಪಘಾತಕ್ಕೀಡಾಗಿದೆ. ಇತ್ತೀಚೆಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸ್ವೀಟಿ ಬೋರಾ ಸನ್ಮಾನಿಸಲು  ಹಿಸ್ಸಾರ್ ಜಿಲ್ಲೆಯಲ್ಲಿ  ಗಿರಯೆ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅಪಾಘತ ಸಂಭವಿಸಿದೆ. 

ಹರ್ಯಾಣ(ಏ.09): ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿನ್‌ಶಿಪ್‌ನಲ್ಲಿ ಇತ್ತೀಚೆಗೆ ಭಾರತದ ಪ್ರತಿಭಾನ್ವಿತ ಪಟು ಸ್ವೀಟಿ ಬೋರಾ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದರು. ಮಾರ್ಚ್ 25 ರಂದು ಸ್ವೀಟಿ ಬೋರಾ 81 ಕೆಜಿ ವಿಭಾಗದಲ್ಲಿ ಚೀನಾದ ವ್ಯಾಂಗ್ ಲಿನಾ ವಿರುದ್ದ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಭಾರತ ಕೀರ್ತಿ ಪತಾಕೆ ಹಾರಿಸಿದ ಹರ್ಯಾಣದ ಬಾಕ್ಸರ್ ಸ್ವೀಟಿ ಬೋರಾಗೆ ಹರ್ಯಾಣ ಸರ್ಕಾರ ಸೇರಿದಂತೆ ಹಲವು ಕ್ರೀಡಾ ಸಂಸ್ಥೆಗಳು ಸನ್ಮಾನ ಮಾಡಿದೆ. ಇತ್ತ ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡ ಕೂಡ ಹರ್ಯಾಣದ ಪ್ರತಿಭೆಯನ್ನು ಸನ್ಮಾನಿಸಲು ಬಯಸಿದ್ದರು. ಇದಕ್ಕಾಗಿ ಇಂದು(ಏ.09) ಭೂಪೇಂದ್ರ ಸಿಂಗ್ ಹೂಡ ಹಿಸ್ಸಾರ್ ಜಿಲ್ಲೆಯ ಗ್ರಿರಯೆ ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿ ಹೂಡ ಕಾರು ಅಪಘಾತಕ್ಕೀಡಾಗಿದೆ. ಟೋಯೋಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಹೂಡ ಇತರ ನಾಯಕರು ಸಂಚರಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಭೂಪೇಂದ್ರ ಸಿಂಗ್ ಹೂಡ ಹಾಗೂ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೂಡ ಕಾರು ವೇಗವಾಗಿ ಸಂಚರಿಸುತ್ತಿದ್ದ ವೇಳೆ ನೀಲ್ಗಾಯ್ ಕಾಡು ಪ್ರಾಣಿ ಹೂಡ ಕಾರಿಗೆ ಡಿಕ್ಕಿಯಾಗಿದೆ. ವೇಗದಲ್ಲಿ ಸಂಚರಿಸುತ್ತಿದ್ದ ಕಾರಿಗೆ ದೊಡ್ಡ ಗಾತ್ರದ ನಿಲ್ಗಾಯ್ ಪ್ರಾಣಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಪುಡಿಯಾಗಿದೆ. ಚಾಲಕ ತಜ್ಞಣವೇ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದರಿದಂ ಹೆಚ್ಚಿನ ಅಪಾಯವಾಗಿಲ್ಲ. ಕಾರು ಕೂಡ ವೇಗದಲ್ಲಿದ್ದ ಕಾರಣ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಆದರೆ ಚಾಲಕನ ಚಾಣಾಕ್ಷ ನಡೆಯಿಂದ ಕಾರನ್ನು ನಿಯಂತ್ರಣಕ್ಕೆ ತೆಗೆದು ನಿಲ್ಲಿಸಲಾಗಿದೆ. 

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಕೊರಳೊಡ್ಡಿದ ನೀತು & ಸ್ವೀಟಿ

ಟೋಯೋಟಾ ಲ್ಯಾಂಡ್ ಕ್ರೂಸರ್ ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಏರ್‌ಬ್ಯಾಗ್ ತೆರೆದುಕೊಂಡಿದೆ. ಹೀಗಾಗಿ ಹೂಡ ಬೇರೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ. ಅಪಘಾತದ ಬಳಿಕ ಬೇರೆ ಕಾರಿನಲ್ಲಿ ಪ್ರಯಾಣ ಮುಂದುವರಿಸಿದ ಭೂಪೇಂದ್ರ ಹೂಡ, ಗಿರಯೆ ಗ್ರಾಮಕ್ಕೆ ತೆರಳಿ ಬಾಕ್ಸರ್ ಸ್ವೀಟಿ ಬೋರಾ ಸನ್ಮಾನಿಸಿದ್ದಾರೆ. ಇದಾದ ಬಳಿಕ ಭೂಪೇಂದ್ರ ಹೂಡ ತಮ್ಮ ಆಪ್ತರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭೂಪೇಂದ್ರ ಸಿಂಗ್ ಹೂಡ, ಯಾರಿಗೂ ಅಪಾಯ ಸಂಭವಿಸಿಲ್ಲ. ಅಚಾನಕ್ಕೆ ನಿಲ್ಗಾಯ್ ಎದುರಾಗಿ ಡಿಕ್ಕಿ ಹೊಡೆದಿತ್ತು. ಕಾಡು ಪ್ರಾಣಿ ರಸ್ತೆಯ ಒಂದು ಬಂದಿಯಿಂದ ಮತ್ತೊಂದು ಬದಿಗೆ ಜಿಗಿದ ವೇಳೆ ಘಟನೆ ನಡೆದಿದೆ. ಕಾರಿನ ಏರ್‌ಬ್ಯಾಗ್ ತೆರೆದುಕೊಂಡ ಕಾರಣ ಆತಂಕವಾಗಿತ್ತು. ಆದರೆ ಚಾಲಕ ತಕ್ಷಣವೇ ಕಾರು ನಿಲ್ಲಿಸಿದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ನಿಗದಿಯಾಗಿರುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಭೂಪೇಂದ್ರ ಸಿಂಗ್ ಹೂಡ ಹೇಳಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ, ಜಮ್ಮು ರಸ್ತೆಯಲ್ಲಿ ಘಟನೆ!

ಸ್ವೀಟಿ ಬೋರಾ ಬಾಕ್ಸಿಂಗ್ ಚಿನ್ನ ಗೆದ್ದು ಹರ್ಯಾಣಕ್ಕೆ ಕೀರ್ತಿ ತಂದಿದ್ದರು. ಇದರ ಜೊತೆಗೆ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈ ಬಾರಿ 4 ಚಿನ್ನದ ಪದಕ ಗೆದ್ದುಕೊಂಡಿತ್ತು. ಸ್ವೀಟಿ ಬೋರಾ ಮಾತ್ರವಲ್ಲ, 48 ಕೆ.ಜಿ. ವಿಭಾ​ಗ​ದಲ್ಲಿ ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ನೀತು ಮಂಗೋ​ಲಿ​ಯಾದ ಲುತ್ಸೈ​ಖಾನ್‌ ವಿರುದ್ಧ 5-0 ಅಂತ​ರ​ದಲ್ಲಿ ಗೆದ್ದು ಚೊಚ್ಚ​ಲ ವಿಶ್ವ ಚಾಂಪಿ​ಯನ್‌ ಚಿನ್ನ ಗೆದ್ದುಕೊಂಡಿದ್ದರು. ಇನ್ನು ನಿಖಾತ್‌ ಜರೀನ್‌ ಹಾಗೂ ಲವ್ಲೀನಾ ಬೋರ್ಗೋ​ಹೈನ್‌ ವಿಶ್ವ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿ​ದರು