ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌: ಚಿನ್ನಕ್ಕೆ ಕೊರಳೊಡ್ಡಿದ ನೀತು & ಸ್ವೀಟಿ

ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀತು ಮತ್ತು ಸ್ವೀಟಿ
48 ಕೆ.ಜಿ. ವಿಭಾ​ಗ​ದಲ್ಲಿ ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ನೀತುಗೆ ಫೈನಲ್‌ನಲ್ಲಿ ಸುಲಭ ಜಯ
2018ರ ವಿಶ್ವ ಚಾಂಪಿ​ಯನ್‌ ಚೀನಾದ ಆಟಗಾರ್ತಿಗೆ ಸೋಲುಣಿಸಿದ ಸ್ವೀಟಿ ಬೋರಾ

India Nitu Ghanghas and Saweety Boora are become World Boxing Champion kvn

ನವ​ದೆ​ಹ​ಲಿ(ಮಾ.26): ಭಾರ​ತದ ತಾರಾ ಬಾಕ್ಸಿಂಗ್‌ ಪಟು​ಗ​ಳಾದ ನೀತು ಗಂಗಾಸ್‌ ಹಾಗೂ ಸ್ವೀಟಿ ಬೋರಾ ಮಹಿಳಾ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿ​ದ್ದಾರೆ. ಇಲ್ಲಿ ನಡೆ​ಯು​ತ್ತಿ​ರುವ ಬಾಕ್ಸಿಂಗ್‌ ಕೂಟದ 48 ಕೆ.ಜಿ. ವಿಭಾ​ಗ​ದಲ್ಲಿ ಕಾಮ​ನ್‌​ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತೆ ನೀತು ಮಂಗೋ​ಲಿ​ಯಾದ ಲುತ್ಸೈ​ಖಾನ್‌ ವಿರುದ್ಧ 5-0 ಅಂತ​ರ​ದಲ್ಲಿ ಗೆದ್ದು ಚೊಚ್ಚ​ಲ ವಿಶ್ವ ಚಾಂಪಿ​ಯನ್‌ ಚಿನ್ನಕ್ಕೆ ಮುತ್ತಿ​ಟ್ಟರು. ಆರಂಭ​ದಲ್ಲೇ ಆಕ್ರ​ಮ​ಣ​ಕಾ​ರಿ​ಯಾಗಿ ಪಂಚ್‌​ಗಳ ಮೂಲಕ ಮೇಲುಗೈ ಸಾಧಿ​ಸಿದ ನೀತು ಯಾವ ಕ್ಷಣ​ದಲ್ಲೂ ಎದು​ರಾ​ಳಿಗೆ ತಿರು​ಗೇಟು ನೀಡಲು ಅವ​ಕಾಶ ನೀಡ​ಲಿ​ಲ್ಲ. 

ಇದೇ ವೇಳೆ 81+ ಕೆ.ಜಿ. ವಿಭಾ​ಗ​ದಲ್ಲಿ ಸ್ವೀಟಿ 2018ರ ವಿಶ್ವ ಚಾಂಪಿ​ಯನ್‌, ಚೀನಾದ ವ್ಯಾಂಗ್‌ ಲಿನಾ ವಿರುದ್ಧ 4-3 ಅಂತ​ರ​ದಲ್ಲಿ ಗೆದ್ದು ವಿಶ್ವ ಚಾಂಪಿ​ಯನ್‌ ಎನಿ​ಸಿ​ಕೊಂಡರು. ಇದ​ರೊಂದಿಗೆ ಲೈಟ್‌ ಹೇವಿ​ವೈಟ್‌ ವಿಭಾ​ಗ​ದಲ್ಲಿ ಚಿನ್ನ ಗೆದ್ದ ಭಾರ​ತದ ಮೊದಲ ಬಾಕ್ಸರ್‌ ಎಂಬ ಖ್ಯಾತಿಗೆ ಪಾತ್ರ​ರಾ​ದ​ರು.

ಭಾನು​ವಾರ ಹಾಲಿ ಚಾಂಪಿ​ಯನ್‌ ನಿಖಾತ್‌ ಜರೀ​ನ್‌​(50 ಕೆ.ಜಿ.) ಹಾಗೂ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗೋ​ಹೈ​ನ್‌​(75 ಕೆ.ಜಿ.) ಫೈನ​ಲ್‌​ನಲ್ಲಿ ಸೆಣ​ಸಾ​ಡ​ಲಿದ್ದು, ಭಾರ​ತಕ್ಕೆ ಮತ್ತೆ​ರಡು ಚಿನ್ನ ತಂದು​ಕೊ​ಡುವ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ.

ಭಾರ​ತಕ್ಕೆ 11ನೇ ಚಿನ್ನ

ಮಹಿಳಾ ವಿಶ್ವ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಈವ​ರೆಗೆ ಭಾರ​ತ 11 ಪದಕ ತನ್ನ​ದಾ​ಗಿ​ಸಿ​ಕೊಂಡಿ​ದೆ. ಮೇರಿ​ ಕೋ​ಮ್‌(2002, 2005, 2006, 2010, 2018), ಸರಿತಾ ದೇವಿ​(2006), ಜೆನ್ನಿ​(2006), ಲೇಖಾ ಕೆ.ಸಿ.​(2006), ನಿಖಾತ್‌ ಜರೀ​ನ್‌​(2022) ಈ ಮೊದಲು ಚಿನ್ನ ಗೆದ್ದಿ​ದ್ದಾರೆ.

ಸ್ವಿಸ್ ಓಪನ್‌: ಸಾತ್ವಿಕ್‌-ಚಿರಾಗ್ ಜೋಡಿ ಫೈನಲ್‌ಗೆ ಲಗ್ಗೆ

ಬಸೆಲ್‌: ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ- ಚಿರಾಗ್ ಶೆಟ್ಟಿ ಜೋಡಿ ಸ್ವಿಸ್ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 

Swiss Open 2023: ಹಾಲಿ ಚಾಂಪಿಯನ್‌ ಸಿಂಧುಗೆ ಸ್ವಿಸ್ ಆಘಾತ

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಯೆವ್‌ ಸಿನ್‌-ಟಿಯೋ ಯಿ ಜೋಡಿ ವಿರುದ್ದ 21-19, 17-21, 21-17 ಗೇಮ್‌ಗಳಿಂದ ರೋಚಕ ಜಯಗಳಿಸಿತು. ಭಾನುವಾರ ಫೈನಲ್‌ನಲ್ಲಿ ಚೀನಾದ ಕ್ಷಿಯಾಂಗ್‌ ಯು ತಾನ್‌ ಕ್ವಿಯಾಂಗ್‌ ವಿರುದ್ದ ಸೆಣಸಲಿದ್ದು, ಟೂರ್ನಿಯಲ್ಲಿ ಚೊಚ್ಚಲ ಡಬಲ್ಸ್‌ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಶೂಟಿಂಗ್‌ ವಿಶ್ವ​ಕ​ಪ್‌: ಮನು ಬಾಕ​ರ್‌ಗೆ ಕಂಚು

ಭೋಪಾ​ಲ್‌: ಭಾರ​ತದ ತಾರಾ ಶೂಟರ್‌ ಮನು ಬಾಕರ್‌ ಐಎ​ಸ್‌​ಎ​ಸ್‌​ಎಫ್‌ ಶೂಟಿಂಗ್‌ ವಿಶ್ವ​ಕ​ಪ್‌​ನಲ್ಲಿ ಕಂಚಿನ ಪದಕ ಗೆದ್ದಿದ್ದು, ಭಾರ​ತದ ಪದಕ ಗಳಿಕೆ 7ಕ್ಕೆ ಏರಿ​ಕೆ​ಯಾ​ಗಿದೆ. ಭೋಪಾ​ಲ್‌​ನಲ್ಲಿ ನಡೆ​ಯು​ತ್ತಿ​ರುವ ಕೂಟ​ದ​ಲ್ಲಿ ಶನಿ​ವಾರ 25 ಮೀ. ಪಿಸ್ತೂ​ಲ್‌ ವಿಭಾ​ಗ​ದಲ್ಲಿ ಮನು 20 ಅಂಕ​ಗ​ಳೊಂದಿಗೆ 3ನೇ ಸ್ಥಾನ ಪಡೆ​ದ​ರು. ಚೀನಾದ ಝಿಯು(30 ಅಂಕ​) ಚಿನ್ನ, ಜರ್ಮ​ನಿಯ ಡೊರೀನ್‌(29 ಅಂಕ​) ಬೆಳ್ಳಿ ಪದಕ ತಮ್ಮ​ದಾ​ಗಿ​ಸಿ​ಕೊಂಡರು.

ರಾಷ್ಟ್ರೀ​ಯ ವೇಟ್‌​ಲಿ​ಫ್ಟಿಂಗ್‌: ಶ್ರಬಾನಿ, ಹಜಾ​ರಿ​ಕಾಗೆ ಚಿನ್ನ

ಬೆಂಗ​ಳೂ​ರು: 4ನೇ ಆವೃತ್ತಿಯ ಖೇಲೋ ಇಂಡಿಯಾ ರಾಷ್ಟ್ರೀಯ ಮಹಿಳಾ ರಾರ‍ಯಂಕಿಂಗ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಪಶ್ಚಿಮ ಬಂಗಾ​ಳದ ಶ್ರಬಾನಿ ದಾಸ್‌, ರೈಲ್ವೇ​ಸ್‌ನ ಪೋಪಿ ಹಜಾ​ರಿಕಾ ಚಿನ್ನದ ಪದಕ ಗೆದ್ದರು. ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ನಡೆ​ಯು​ತ್ತಿ​ರುವ ಕೂಟ​ದಲ್ಲಿ ಹಿರಿಯ ಮಹಿ​ಳೆ​ಯರ 55 ಕೆ.ಜಿ. ವಿಭಾ​ಗ​ದಲ್ಲಿ ಶ್ರಬಾ​ನಿ 178 ಕೆ.ಜಿ. ಭಾರ ಎತ್ತಿ ಚಿನ್ನ ಪಡೆ​ದರೆ, 59 ಕೆ.ಜಿ. ವಿಭಾ​ಗ​ದಲ್ಲಿ ಹಜಾ​ರಿಕಾ 181 ಕೆ.ಜಿ. ಭಾರ ಎತ್ತಿ ಬಂಗಾರ ತಮ್ಮ​ದಾ​ಗಿ​ಸಿ​ಕೊಂಡರು. ಯುವ ವಿಭಾ​ಗ​ದ 55 ಕೆ.ಜಿ. ಸ್ಪರ್ಧೆ​ಯಲ್ಲಿ ಬಿಹಾ​ರದ ಕುಶಿ ಕುಮಾರಿ, 59 ಕೆ.ಜಿ. ಸ್ಪರ್ಧೆ​ಯಲ್ಲಿ ಒಡಿ​ಶಾದ ಸುಮಿತ್ರಾ, ಕಿರಿ​ಯರ ವಿಭಾ​ಗದ 59 ಕೆ.ಜಿ. ಸ್ಪರ್ಧೆ​ಯಲ್ಲಿ ಉತ್ತರ ಪ್ರದೇ​ಶದ ಸೋನಂ ಸಿಂಗ್‌ ಚಿನ್ನ ಗೆದ್ದು​ಕೊಂಡ​ರು.

Latest Videos
Follow Us:
Download App:
  • android
  • ios