Asianet Suvarna News Asianet Suvarna News

ಕೇಂದ್ರ ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ, ಜಮ್ಮು ರಸ್ತೆಯಲ್ಲಿ ಘಟನೆ!

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾದ ಘಟನೆ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ರಿಜಿಜು ಸಂಚರಿಸುತ್ತದ್ದವಾಹನಕ್ಕೆ ಲಾರಿ ಡಿಕ್ಕಿಯಾಗಿದೆ.

Car Accident Law minister Kiren Rijiju Vehicle hits by truck in jammu and kashmir BJP leader escaped unhurt ckm
Author
First Published Apr 8, 2023, 8:36 PM IST

ಉಧಮಪುರ(ಏ.08): ಲೀಗಲ್ ಸರ್ವೀಸ್ ಕ್ಯಾಂಪ್‌ಗಾಗಿ ಜಮ್ಮು ಮತ್ತು ಕಾಶ್ಮೀರದ ಉಧಮಪುರಕ್ಕೆ ತೆರಳಿದ್ದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಾರು ಅಪಘಾತಕ್ಕೀಡಾಗಿದೆ. ವೇಗವಾಗಿ ಸಂಚರಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದೆ. ಹೆದ್ದಾರಿಯಲ್ಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಸಚಿವ ಕಿರಣ್ ರಿಜಿಜು ಅಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯ ಬನಿಹಾಲ್ ಬಳಿ ಸರಕು ತುಂಬಿದ್ದ ಲಾರಿ, ಸಚಿವರ ಕಾರಿಗೆ ಡಿಕ್ಕಿಯಾಗಿದೆ. ಬುಲೆಟ್‌ಫ್ರೂಫ್ ಕಾರಿನ ಒಂದು ಬದಿ ನಜ್ಜು ಗುಜ್ಜಾಗಿದೆ. 

ಕಿರುಣ್ ರಿಜಿಜು ಕಾರ್ಯಕ್ರಮದ ನಿಮಿತ್ತ ಬೆಂಗಾವಲು ವಾಹನದೊಂದಿಗೆ ತೆರಳಿದ್ದಾರೆ. ಈ ಕಿರಣ್ ರಿಜಿಜು ಸಂಚರಿಸುತ್ತಿದ್ದ ವಾಹನಕ್ಕೆ ಬೃಹತ್ ಗಾತ್ರದ ಸರಕು ತುಂಬಿದ ಲಾರಿ ಡಿಕ್ಕಿಯಾಗಿದೆ. ವಾಹನದ ಎಡಭಾಗಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಇತ್ತ ಸಚಿವರ ಬೆಂಗಾವಲು ವಾಹನಕ್ಕೂ ಲಾರಿ ಡಿಕ್ಕಿಯಾಗಿದೆ.ಆದರೆ ಈ ಘಟನೆಯಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಸೂರತ್‌ ಕೋರ್ಟ್‌ನಲ್ಲಿ ಕೈ ಶಕ್ತಿ ಪ್ರದರ್ಶನ: ನ್ಯಾಯಾಲಯಕ್ಕೆ ಒತ್ತಡ ಹೇರುವ ಬಾಲಿಶ ಪ್ರಯತ್ನ ಎಂದ ಬಿಜೆಪಿ

 

 

ಅಪಘಾತ ಸಂಭವಿಸಿದ ಬೆನ್ನಲ್ಲೇ ಬೆಂಗಾವಲು ಪಡೆ ಸಿಬ್ಬಂದಿಗಳು ತಕ್ಷಣವೇ ವಾಹನದತ್ತ ಓಡಿದ್ದಾರೆ. ಬಳಿಕ ಕಾರಿನ ಡೋರ್ ಓಪನ್ ಮಾಡಿ ಸಚಿವರು ಹೊರಬರಲು ಅವಕಾಶ ಮಾಡಿದ್ದಾರೆ. ಇದೀಗ ಅಪಘಾತದ ಬಳಿಕ ಕಿರಣ್ ರಿಜಿಜು ಕಾರಿನಿಂದ ಇಳಿದು ಕೆಲ ನಿರ್ದೇಶ ನೀಡಿ ಮತ್ತೊಂದು ಕಾರಿನಲ್ಲಿ ಸಂಚರಿಸಿದ್ದಾರೆ. ಇದೀಗ ಪ್ರಕರಣ ದಾಖಲಾಗಿದೆ. 

ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಜಮ್ಮು ಮತ್ತು ಕಾಶ್ಮೀರದ ಸೌಂದರ್ಯದ ಕುರಿತು ಖುದ್ದು ಸಚಿವ ಕಿರಣ್ ರಿಜಿಜು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಸಚಿವರ ಕಾರು, ಬೆಂಗಾವಲು ವಾಹನ ಸಾಗುತ್ತಿರುವ ದೃಶ್ಯದ ಜೊತೆಗೆ, ರಸ್ತೆಯ ಎರಡು ಬದಿಯಲ್ಲಿನ ಪ್ರಾಕೃತಿ ಸೌಂದರ್ಯದ ದೃಶ್ಯಗಳನ್ನು ಕಿರಣ್ ರಿಜಿಜು ಚಿತ್ರಿಸಿದ್ದರು. 

ಇತ್ತೀಚೆಗೆ ಕಿರಣ್ ರಿಜಿಜು ನ್ಯಾಯಮೂರ್ತಿಗಳ ನೇಮಕ ಹಾಗೂ ಕೊಲಿಜಿಯಂ ಕುರಿತು ನೀಡಿರುವ ಹೇಳಿ ಭಾರಿ ಸಂಚಲನ ಸೃಷ್ಟಿಸಿತ್ತು. ಪರ ವಿರೋಧ ಚರ್ಚೆಗಳು ಸೃಷ್ಟಿಯಾಗಿತ್ತು. ಜಡ್ಜ್‌ಗಳ ನೇಮಕ, ವರ್ಗ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂ ನಡುವೆ ಜಟಾಪಟಿ ನಡೆಯುತ್ತಿರುವ ಹೊತ್ತಿನಲ್ಲೇ, ಕಾಲಕಾಲಕ್ಕೆ ನಮಗೆ ಹಾಲಿ ಮತ್ತು ನಿವೃತ್ತ ಜಡ್ಜ್‌ಗಳ ಬಗ್ಗೆ ಸಮಾಜದ ವಿವಿಧ ಕಡೆಯಿಂದ ದೂರು ಸಲ್ಲಿಕೆಯಾಗುತ್ತಲೇ ಇರುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದರು.

‘ಕೇಂದ್ರ ಕಾನೂನು ಸಚಿವರ ಪ್ರಕಾರ ಸುಪ್ರೀಂ ಕೋರ್ಚ್‌ನ ಕೆಲ ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗುಂಪಿಗೆ ಸೇರಿದ್ದಾರಾ.?’ ಎಂಬ ಪ್ರಶ್ನೆಗೆ ಗುರುವಾರ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಅವರು, ‘ಕಾನೂನು ಸಚಿವಾಲಯವು ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ನ್ಯಾಯಮೂರ್ತಿಗಳ ಮೇಲಿನ ದೂರುಗಳನ್ನು ಕಾಲ ಕಾಲಕ್ಕೆ ಸ್ವೀಕರಿಸುತ್ತಿದೆಯಾದರೂ ಉನ್ನತ ನ್ಯಾಯಾಂಗದ ಸದಸ್ಯರ ನೇಮಕಾತಿ ಮತ್ತು ಸೇವಾ ಷರತ್ತುಗಳಿಗೆ ಸಂಬಂಧಿಸಿದ ದೂರನ್ನು ಮಾತ್ರ ಅದು ಪರಿಗಣಿಸುತ್ತದೆ’ ಎಂದಿದ್ದರು.

ಅಲ್ಲದೇ ‘ಸುಪ್ರೀಂ ಮತ್ತು ಹೈಕೋರ್ಚ್‌ನ ನಿವೃತ್ತ ನ್ಯಾಯಾಧೀಶರ ಮೇಲಿನ ದೂರುಗಳನ್ನು ನ್ಯಾಯಾಂಗ ಇಲಾಖೆ ನಿರ್ವಹಿಸುವುದಿಲ್ಲ. ಸೂಕ್ತ ಕ್ರಮಕ್ಕಾಗಿ ಇಂತಹ ದೂರುಗಳನ್ನು ಭಾರತದ ಮುಖ್ಯ ನ್ಯಾಯಾಧೀಶ ಅಥವಾ ಸಂಬಂಧಪಟ್ಟಹೈಕೋರ್ಚ್‌ನ ಮುಖ್ಯ ನ್ಯಾಯಾಧೀಶರಿಗೆ ರವಾನಿಸಲಾಗುವುದು’ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios