ಯುವಕನೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಮಾಡಿದ್ದ ವಿಡಿಯೋದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನ ಕಿರುಕುಳವೇ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಚಂಡೀಗಢ: ಜೂನ್ 18ರಂದು ಹರಿಯಾಣದ ದೊಹ್ನ ಎಂಬ ಹಳ್ಳಿಯಲ್ಲಿ ಮಗನ್ ಅಲಿಯಾಸ್ ಅಜಯ್ ಆತ್ಮಹ*ತ್ಯೆ ಮಾಡಿಕೊಂಡಿದ್ದು, ಇದೀಗ ಸಾಯುವ ಮುನ್ನ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. ಈ ವಿಡಿಯೋ ನೋಡಿದ ಪುರುಷ ನೆಟ್ಟಿಗರು, #JusticeForMen ಎಂಬ ಹ್ಯಾಶ್ ಟ್ಯಾಗ್ ಬಳಕೆ ಮಾಡುವ ಮೂಲಕ ಮಗನ್ ಸಾವಿನ ನ್ಯಾಯ ಸಿಗಬೇಕೆಂದು (Justice For Men - Save Men Save Country) ಆಗ್ರಹಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಸಾವಿನ ಬೆನ್ನಲ್ಲೆ ಪುರುಷರ ಮೇಲಾಗುವ ಕೌಟುಂಬಿಕ ದೌರ್ಜನ್ಯಗಳ ಬಗ್ಗೆ ಚರ್ಚೆಗಳು ನಡೆದಿದ್ದವು. ಪತ್ನಿಯ ಕಿರುಕುಳದಿಂದ ಸಾವಿಗೆ ಶರಣಾದ ಪುರುಷರು ಕುಟುಂಬಸ್ಥರು ರಸ್ತೆಗಿಳಿದು ಪ್ರತಿಭಟನೆಯನ್ನು ಸಹ ನಡೆಸಿದ್ದರು,

ಆತ್ಮಹ*ತ್ಯೆಗೆ ಮಾಡಿಕೊಳ್ಳುವ ಮುನ್ನ ಮಗನ್ ವಿಡಿಯೋ ಮಾಡಿದ್ದು, ಸಾವಿಗೆ ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್ ಕಾರಣ ಎಂದು ಹೇಳಿದ್ದಾರೆ. ಇಬ್ಬರು ಜೊತೆಯಾಗಿ ತಮಗೆ ಹೇಗೆ ಕಿರುಕುಳ ನೀಡಿದ್ದಾರೆ ಎಂಬುದನ್ನು ಮಗನ್ ಎಳೆ ಎಳೆಯಾಗಿ ವಿವರಿಸುತ್ತಾ ಕಣ್ಣೀರು ಹಾಕಿದ್ದಾರೆ.

ನಾನು ಮಗನ್... ಆಕೆ ಮತ್ತು ಅವನು!

ನನ್ನ ಹೆಸರು ಮಗನ್, ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ್ ದೀಪಕ್‌ ಕಿರುಕುಳದಿಂದ ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪತ್ನಿಯ ಪ್ರಿಯಕರ ದೀಪಕ್ ಸಂಭಾಜಿ ನಗರದ ನಿವಾಸಿಯಾಗಿದ್ದು, ಪೊಲೀಸ್ ಸೇವೆಯಲ್ಲಿದ್ದಾನೆ. ಇವರಿಬ್ಬರು ಜೊತೆಯಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಮೋಸವಾಗಿದ್ದು, ಹಣವನ್ನು ಸಹ ಪಡೆದುಕೊಂಡಿದ್ದಾರೆ. ನನಗೆ ಹಣ ನೀಡುವಂತೆ ಪದೇ ಪದೇ ಒತ್ತಡ ಹಾಕುತ್ತಾರೆ. ಈಗ ದೀಪಕ್‌ಗೆ ಉದ್ಯೋಗದಲ್ಲಿ ಬಡ್ತಿ ಸಿಗಲು ಲಂಚ ಕೊಡಬೇಕಿದೆ. ಅದಕ್ಕಾಗಿ ತಂದೆಯನ್ನು ಕೊ*ಲ್ಲು ಮತ್ತು ಪೂರ್ವಜರಿಂದ ಬಂದಿರುವ ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಹೇಳುತ್ತಿದ್ದಾರೆ.

ಪತ್ನಿ ದಿವ್ಯಾ ವಿಡಿಯೋ ಕಳುಹಿಸಿದ್ದು, ಇದರಲ್ಲಿ ಆಕೆ ದೀಪಕ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾಳೆ. ದಿವ್ಯಾ ಮತ್ತು ದೀಪಕ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿದೆ. ಇದರಿಂದಾಗಿ ನಾನು ಮಾನಸಿಕವಾಗಿ ಕುಸಿದಿದ್ದೇನೆ ಎಂದು ಮಗನ್ ಹೇಳಿದ್ದಾನೆ.

ಪದೇ ಪದೇ ಹಣಕ್ಕಾಗಿ ಬೇಡಿಕೆ!

ಮುಂದುವರಿದು ಮಾತನಾಡಿರುವ ಮಗನ್, ಈಗಾಗಲೇ ದೀಪಕ್ ಬಡ್ತಿಗಾಗಿ 3.5 ಲಕ್ಷ ರೂ. ನೀಡಿದ್ದೇನೆ. ಇದೀಗ ಮತ್ತೆ 1.5 ಲಕ್ಷ ರೂ. ನೀಡುವಂತೆ ಹೇಳುತ್ತಿದ್ದಾರೆ. ತನ್ನನ್ನು ಮದುವೆಯಾಗುವ ಮುಂಚೆಯೇ ದಿವ್ಯಾಳಿಗಹೆ ಮದುವೆಯಾಗಿತ್ತು. ನಂತರ ಈ ಪ್ರಕರಣವನ್ನು ಹಣವನ್ನು ನೀಡಿ ಇತ್ಯರ್ಥ ಮಾಡಿಕೊಂಡಿದ್ದೇನೆ. ನನ್ನ ಸಾವಿಗೆ ಇವರಿಬ್ಬರು ಕಾರಣ. ಹಾಗಾಗಿ ಇವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Scroll to load tweet…

ಈ ಬಗ್ಗೆ ಪೊಲೀಸರು ಹೇಳಿದ್ದೇನು?

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಹು ಅಕ್ಬರಪುರ ಪೊಲೀಸ್ ಠಾಣೆಯ ಎಎಸ್ಐ ಸಂಜಯ್, ಅಧಿಕಾರಿಗಳು ಮಗನ್ ಹೇಳಿಕೆಯ ವಿಡಿಯೋ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಅತ ಮತ್ತು ದೀಪಕ್ ನಡುವಿನ ಹಣಕಾಸಿನ ವ್ಯವಹಾರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಿಸ್ಸಾರ್ ನಲ್ಲಿರುವ ದಿವ್ಯಾ ಪೋಷಕರ ಮನೆಗೂ ಭೇಟಿ ನೀಡಲಾಗಿದ್ದು, ಆದ್ರೆ ಮಗಳು ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ದಿವ್ಯಾ ಮುಂಬೈನಲ್ಲಿದ್ದಾಳೆ ಎಂದು ಹೇಳಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರಿಗೂ ಈ ಪ್ರಕರಣದ ಮಾಹಿತಿಯನ್ನು ರವಾನಿಸಲಾಗಿದೆ ಎಂದು ಹೇಳಿದ್ದಾರೆ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಮಗನ್ ಪೋಷಕರು ಆಗ್ರಹಿಸಿದ್ದಾರೆ.