ಸೆಂಟ್ರಲ್ ವಿಸ್ಟಾ ಯೋಜನೆ-ಕೊರೋನಾ; ರಾಹುಲ್ ಗಾಂಧಿ ಆದ್ಯತೆ ಪಾಠಕ್ಕೆ ಬಿಜೆಪಿ ತಿರುಗೇಟು!
ಕೇಂದ್ರ ಸರ್ಕಾರದ ಸರ್ಕಾರ ಮಹತ್ವದ ಯೋಜನೆ ಸೆಂಟ್ರಲ್ ವಿಸ್ಟಾಗೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ರಾಹುಲ್ ಗಾಂಧಿ ಹೊಸ ಪಾರ್ಲಿಮೆಂಟ್‌ಗಿಂತ ಸೋಂಕಿತರ ಜೀವ ಉಳಿಸಿ ಎಂದಿದ್ದಾರೆ. ಆದರೆ ರಾಹುಲ್ ಟ್ವೀಟ್ ಇದೀಗ ತಿರುಗುಬಾಣವಾಗಿದೆ. ಕಾರಣ ಬಿಜೆಪಿ ಅಂಕಿ ಅಂಶದ ಜೊತೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದೆ.
ನವದೆಹಲಿ(ಮೇ.07); ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಹತ್ವದ ಯೋದನೆ ಸೆಂಟ್ರಲ್ ವಿಸ್ಟಾ ಹೆಚ್ಚು ಚರ್ಚೆಯಾಗುತ್ತಿದೆ. ಈ ಕಠಿಣ ಸಂದರ್ಭದಲ್ಲಿ ಹೊಸ ಪಾರ್ಲಿಮೆಂಟ್ ಯೋಜನೆ ಕೈಬಿಟ್ಟು ಜೀವ ಉಳಿಸಿ ಎಂದು ವಿಪಕ್ಷಗಳು ಟೀಕಿಸಿದೆ. ಇದೀಗ ರಾಹುಲ್ ಗಾಂಧಿ ಇದು ಕ್ರಿಮಿನಲ್ ವೇಸ್ಟ್ ಎಂದಿದ್ದಾರೆ. ಆರೋಪಗಳ ಬೆನ್ನಲ್ಲೇ ನಾಗರೀಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಆದ್ಯತೆ ಕುರಿತು ನಿಮಗಿಂತ ಚೆನ್ನಾಗಿ ನಮಗೆ ತಿಳಿದಿದೆ. ಇದಕ್ಕೆ ಅಂಕಿ ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ.
ಹೊಸ ಸಂಸತ್ ಭವನಕ್ಕೆ ಸುಪ್ರೀಂ ಒಪ್ಪಿಗೆ, ಅಡ್ಡಿ ನಿವಾರಣೆ!
ರಾಹುಲ್ ಗಾಂಧಿ ಟ್ವೀಟ್ ಮಾಡಿದ ಬೆನ್ನಲ್ಲೇ ಹರ್ದೀಪ್ ಸಿಂಗ್ ಪುರಿ ತಕ್ಕ ಉತ್ತರ ನೀಡಿದ್ದಾರೆ. ಸೆಂಟ್ರಲ್ ವಿಸ್ಟಾ ಯೋಜನೆ ಕುರಿತು ಕಾಂಗ್ರೆಸ್ ಹೇಳಿಕೆಗಗಳು ವಿಲಕ್ಷಣವಾಗಿದೆ. ಸೆಂಟ್ರಲ್ ವಿಸ್ಟಾ ವೆಚ್ಚ ಸುಮಾರು 20,000 ಕೋಟಿ ರೂಪಾಯಿ ಇದು ಹಲವಾರು ವರ್ಷಗಳ ಯೋಜನೆಯಾಗಿದ್ದು, ಹಂತ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಭಾರತ ಸರ್ಕಾರ ಈಗಾಗಲೇ ಸೆಂಟ್ರಲ್ ವಿಸ್ಟಾ ಯೋಜನೆಯ ದುಪ್ಪಟ್ಟು ಹಣವನ್ನು ಲಸಿಕೆಗಾಗಿ ವಿನಿಯೋಗಿಸಿದೆ. ಈ ವರ್ಷದ ಭಾರತದ ಆರೋಗ್ಯ ರಕ್ಷಣಾ ಬಜೆಟ್ ಗಾತ್ರ 3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು. ಹೀಗಾಗಿ ನಮ್ಮ ಆದ್ಯತೆ ನಿಮಗಿಂತ ಚೆನ್ನಾಗಿ ತಿಳಿದಿದೆ ಎಂದು ಹರ್ದಿಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ಲಾಕ್‌ಡೌನ್ ಒಂದೇ ಪರಿಹಾರ, ಯೂ ಟರ್ನ್ ಹೊಡೆದ ರಾಗಾಗೆ ನೆಟ್ಟಿಗರ ಕ್ಲಾಸ್!.
ಹೊಸ ಪಾರ್ಲಿಮೆಂಟ್ ಕಟ್ಟಡ ಸೆಂಟ್ರಲ್ ವಿಸ್ಟಾ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿತ್ತು. ಇದರ ಯೋಜನಾ ಮೊತ್ತ 20,000 ಕೋಟಿ ರೂಪಾಯಿ. ಸೆಂಟ್ರಲ್ ವಿಸ್ಟಾ ಕಾಮಾಗಾರಿಗೆ ಬಳಸುವ ಹಣವನ್ನು ಕೇಂದ್ರ ಸರ್ಕಾರ ಸೋಂಕಿತರ ಜೀವ ಉಳಿಸಲು, ಕೊರೋನಾ ತಡೆಯಲು ಬಳಸಬೇಕು ಎಂದು ರಾಹುಲ್ ಗಾಂಧಿ ಟ್ವಿಟರ್ ಮೂಲಕ ಆಗ್ರಹಿಸಿದ್ದರು.
ಸೆಂಟ್ರಲ್ ವಿಸ್ಟಾ ಯೋಜನೆ ಕ್ರಿಮಿನಲ್ ವೇಸ್ಟ್. ಜನರ ಜೀವ ಉಳಿಸುವ ಕಾರ್ಯಕ್ಕೆ ಆದ್ಯತೆ ನೀಡಿ. ನಿಮ್ಮ ಜಾಣ ಕುರುಡು ಹಾಗೂ ಅಹಂಕಾರದ ಹೊಸ ಪಾರ್ಲಿಮೆಂಟ್ ಮನಗೆ ಹಣ ವಿನಿಯೋಗ ಸಲ್ಲದು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.