ಲಾಕ್‌ಡೌನ್ ಒಂದೇ ಪರಿಹಾರ, ಯೂ ಟರ್ನ್ ಹೊಡೆದ ರಾಗಾಗೆ ನೆಟ್ಟಿಗರ ಕ್ಲಾಸ್!
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕೊರೋನಾ| ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿ ಎಂದ ರಾಹುಲ್ ಗಾಂಧಿ| ಒಂದೇ ವರ್ಷದಲ್ಲಿ ಯೂ ಟರ್ನ್ ಹೊಡೆದ ರಾಹುಲ್ ಗಾಂಧಿಗೆ ನೆಟ್ಟಿಗರ ಕ್ಲಾಸ್
ನವದೆಹಲಿ(ಮೇ.04): ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಜನರ ಆತಂಕವೂ ಹೆಚ್ಚಿದೆ. ಈ ನಡುವೆ ಅತ್ತ ರಾಜಕೀಯ ವಲಯದಲ್ಲೂ ಕೊರೋನಾ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಹಗ್ಗಜಗ್ಗಾಟಕ್ಕೆ ಇದು ಕಾರಣವಾಗಿದೆ. ಸದ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ ಒಂದು ಭಾರೀ ಸದ್ದು ಮಾಡುತ್ತಿದ್ದು, ಲಾಕ್‌ಡೌನ್ ವಿಚಾರವಾಗಿ ಅವರು ತೆಗೆದುಕೊಂಡ ಯೂ ಟರ್ನ್ ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು ಕೆಲ ದಿನಗಳ ಹಿಂದಷ್ಟೇ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರ ಅಲ್ಲ ಎಂದಿದ್ದ ರಾಹುಲ್ ಗಾಂಧಿ ಇದೀಗ ಬೇರೆಯೇ ರಾಗ ತೆಗೆದಿದ್ದಾರೆ. ಸುಪ್ರಿಂ ಕೋರ್ಟ್ ಸರ್ಕಾರಕ್ಕೆ ದೇಶಾದ್ಯಂತ ಎರಡು ವಾರಗಳ ಲಾಕ್‌ಡೌನ್ ಹೇರುವಂತೆ ಸೂಚಿಸಿದ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿಯೂ ಟ್ವೀಟ್ ಮಾಡಿ 'ಸರ್ಕಾರಕ್ಕೆ ಕೊರೋನಾ ವಿರುದ್ಧ ಹೋರಾಡಲು ಲಾಕ್‌ಡೌನ್ ಒಂದೇ ಅಸ್ತ್ರ, ಲಾಕ್‌ಡೌನ್ ಜಾರಿ ಮಾಡಿ. ಸರ್ಕಾರದ ನಿಷ್ಕ್ರಿಯತೆಯಿಂದ ಅಮಾಯಕರು ಸಾಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
"
ಆದರೆ ಮೊದಲನೇ ಅಲೆ ದೇಶದವನ್ನು ಕಾಡಿದ್ದ ವೇಳೆ ಇದರ ನಿಯಂತ್ರಣಕ್ಕಾಗಿ ದೇಶಾದ್ಯಂತ ಸರ್ಕಾರ ಲಾಕ್‌ಡೌನ್ ಹೇರಿತ್ತು. ಆದರೆ ಅಂದು ಸರ್ಕಾರದ ಈ ನಡೆಯನ್ನು ಖಂಡಿಸಿದ್ದ ರಾಹುಲ್ ಗಾಂಧಿ ಲಾಕ್‌ಡೌನ್‌ನಿಂದ ಕೊರೋನಾ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಇದು ಕೇವಲ ಕೆಲ ದಿನಗಳವರೆಗೆ ಪರಿಸ್ಥಿತಿ ನಿಯಂತ್ರಿಸುತ್ತದೆ. ಲಾಕ್‌ಡೌನ್ ಬದಲಾಗಿ ಕೊರೋನಾ ಟೆಸ್ಟಿಂಗ್ ಸಾಮರ್ಥ್ಯ ಹೆಚ್ಚಿಸಿ, ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲೂ ಲಾಕ್‌ಡೌನ್ ಹೇರಿರಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
ಹೀಗಿರುವಾಗ ಯೂ ಟರ್ನ್ ತೆಗೆದುಕೊಂಡ ರಾಹುಲ್ ಗಾಂಧಿಗೆ ನೆಟ್ಟಿಗರು ಭರ್ಜರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವೇ ಅಲ್ವಾ ಕಳೆದ ಬಾರಿ ಲಾಖ್‌ಡೌನ್ ಸರಿ ಅಲ್ಲ ಎಂದವರು ಎಂದು ಒಬ್ಬರು ಪ್ರಶ್ನಿಸಿದದ್ದಾರೆ.
ಈ ಟ್ವೀಟ್‌ಗೆ ಕಮೆಂಟ್ ಮಾಡಿರುವ ಮತ್ತೊಬ್ಬ ಟ್ವಿಟರ್ ಬಳಕೆದಾರ ಲಾಕ್‌ಡೌನ್ ಹೇರಿದ್ರೆ ಬೇಡ, ಹೇರದಿದ್ರೆ ಬೇಕು ಅಂತೀರಿ. ನೀವೇನು ಬಯಸುತ್ತೀರೆಂದು ಸ್ಪಷ್ಟಪಡಿಸಿ ಎಂದು ಕೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona