ಪರಿಶ್ರಮದ ಮೂಲಕ ಮಗನಿಗೆ ಐಫೋನ್ 16, ತನಗೆ 15 ಫೋನ್ ಖರೀದಿಸಿದ ಚಿಂದಿ ಆಯುವ ವ್ಯಕ್ತಿ!

ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಗುಜುರಿ ವಸ್ತುಗಳನ್ನು ಆಯ್ದುಕೊಂಡು ಮಾರಾಟ ಮಾಡುವ ಬಡ ಶ್ರಮಿಕ ಇದೀಗ ತನ್ನ ಮಗನಿಗೆ ಐಫೋನ್ 16 ಹಾಗೂ ತನಗೆ ಐಫೋನ್ 15 ಖರೀದಿಸಿದ್ದಾನೆ. ಈ ಚಿಂದಿ ಆಯುವ ವ್ಯಕ್ತಿಯ ವಿಡಿಯೋ ಒಂದು ಭಾರಿ ಪ್ರಶಂಸೆಗೆ ಕಾರಣವಾಗಿದೆ.
 

Hard work Scrap seller buys iphone 16 for his son iphone 15 for himself video claims ckm

ಮುಂಬೈ(ಸೆ.27) ಕಠಿಣ ಪರಿಶ್ರಮ, ಸಾಧಿಸುವ ಛಲ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನೋ ಮಾತಿದೆ. ತಾನು ಬಡವ, ದುಡ್ಡಿಲ್ಲ ಎಂದು ಕೊರಗುತ್ತಾ ಪರಿಶ್ರಮ ಪಡದಿದ್ದರೆ ಏನೂ ಸಾಧ್ಯವಿಲ್ಲ ಅನ್ನೋದು ಇದೀಗ ಮತ್ತೆ ಸಾಬೀತಾಗಿದೆ. ಪ್ಲಾಸ್ಟಿಕ್ ಸೇರಿದಂತೆ ಇತರ ಗುಜುರಿ ವಸ್ತುಗಳನ್ನು ಆಯ್ದುಕೊಂಡು ಬದುಕು ಸಾಗಿಸುವ ಬಡ ಶ್ರಮಿಕ ಇದೀಗ ತನ್ನ ಮಗನಿಗೆ ಐಫೋನ್ 16 ಹಾಗೂ ತನಗೆ ಐಫೋನ್ 15 ಖರೀದಿಸಿದ್ದಾನೆ. ಈತ ಕೈಯಲ್ಲಿ ದುಡ್ಡು ಹಿಡಿದು ಆ್ಯಪಲ್ ಸ್ಟೋರ್‌ಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಆದರೆ ಹಣ ನೀಡಿ ಎರಡು ಫೋನ್ ಖರೀದಿಸಿದ್ದಾನೆ. ಕಠಿಣ ಪರಿಶ್ರಮದ ಮೂಲಕ ಎರಡು ಫೋನ್ ಖರೀದಿಸಿದ ಈ ಚಿಂದಿ ಆಯುವ ವ್ಯಕ್ತಿಯ ಯಶಸ್ಸಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸರ್ಪ್‌ಮಿತ್ರ ಪ್ರವೀಣ್ ಪಾಟಿಲ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮುಂಬೈನಲ್ಲಿ ಗುಜುರಿ ಆಯ್ದುಕೊಂಡು ಜೀವನ ಸಾಗಿಸುತ್ತಿರುವ ಬಡ ಶ್ರಮಿಕನ ಸಾಧನೆಯ ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಗುಜುರಿ ವಸ್ತುಗಳನ್ನು ಹೆಕ್ಕಿ ಮಾರಾಟ ಮಾಡಿ ಈ ಶ್ರಮಿಕ ಜೀವನ ಸಾಗಿಸುತ್ತಿದ್ದಾನೆ. ಸ್ಲಂನಲ್ಲಿ ವಾಸವಿರುವ ಈತನ ಕುಟುಂಬದ ಎಲ್ಲರೂ ಇದೇ ಗುಜುರಿ ಆಯುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲೇ ಇವರ ಜೀವನ ಸಾಗುತ್ತಿದೆ.

ತನ್ನ ಮಗ ಐಫೋನ್ ಕನಸು ಕಾಣುತ್ತಿದ್ದ. ಇದನ್ನೂ ಈಡೇರಿಸಲು ಈತ ಹೆಚ್ಚುವರಿ ಕೆಲಸ ಮಾಡಿದ್ದಾನೆ. ಸತತವಾಗಿ ಕೆಲಸ ಮಾಡಿ ಹಣ ಸಂಪಾದಿಸಿದ್ದಾನೆ. ಮಗನ ಆಸೆ ಈಡೇರಿಸಲು ಇದೀಗ ದುಬಾರಿ ಐಫೋನ್ ಖರೀದಿಸಿದ್ದಾನೆ. ಐಫೋನ್ ಖರೀದಿಸುವಾಗ ತನ್ನ ಮಗನ ಮಾತ್ರವಲ್ಲ, ತನ್ನ ಆಸೆಯನ್ನೂ ಈಡೇರಿಸಿಕೊಂಡಿದ್ದಾನೆ. ಕಾರಣ ಒಟ್ಟು 2 ಐಫೋನ್ ಈತ ಖರೀದಿಸಿದ್ದಾನೆ. 

ಭಾರತದಲ್ಲಿ ಐಫೋನ್ 16 ಸೀರಿಸ್ ಆರಂಭಿಕ ಬೆಲೆ 79,900 ರೂಪಾಯಿ, ಇನ್ನು ಟಾಪ್ ಮಾಡೆಲ್ ಬೆಲೆ 1,59,900 ರೂಪಾಯಿ. ಇನ್ನು ಐಫೋನ್ 15 ಸೀರಿಸ್ ಬೆಲೆ 69,900 ರೂಪಾಯಿಂದ ಆರಂಭಗೊಳ್ಳುತ್ತಿದೆ. ಆದರೆ ಕೆಲ ಆಫರ್ ಲಭ್ಯವಿರುವ ಕಾರಣ ಐಫೋನ್ 15 ಫೋನ್ 54 ಸಾವಿರ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಈ ಗುಜುರಿ ಆಯುವ ಕಾರ್ಮಿಕ ಯಾವ ಸೀರಿಸ್ ಫೋನ್ ಖರೀದಿಸಿದ್ದಾನೆ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. 

 

 

ಈ ಗುಜುರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಈತ ಹರಕು ಮುರುಕು ಬಟ್ಟೆ ಧರಿಸಿದ್ದಾನೆ. ಬಡತನದ ನಡುವೆಯೂ ತನ್ನ ಕನಸು ಸಾಕಾರಗೊಳಿಸಿದ್ದಾನೆ. ಈತನ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದು ಕಠಿಣ ಪರಿಶ್ರಮದ ಫಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬಡವ ಅನ್ನೋದು ಇಲ್ಲ, ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಖರೀದಿಸಬಹುದು ಎಂದಿದ್ದಾರೆ. 

ಭಾರತದಲ್ಲಿ ಐಫೋನ್‌ಗೆ ಬಂತು ಸಿನಿಮಾ ಕ್ರೇಜ್, ರಾತ್ರಿಯಿಂದಲೇ ಕ್ಯೂ ನಿಂತು ಐಫೋನ್ 16 ಖರೀದಿಸಿದ ಗಾಯಕ!
 

Latest Videos
Follow Us:
Download App:
  • android
  • ios