ಹೈದರಾಬಾದ್ : ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿ ಕೇಂದ್ರದಲ್ಲಿ ಕರ್ನಾಟಕ ಮೂಲದ ಮಹಿಳಾ ಟ್ರೈನಿ ಐಪಿಎಸ್‌ ಅಧಿಕಾರಿಗೆ ಸಹದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪ ಹೊತ್ತಿರುವ ಐಪಿಎಸ್ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.

- ಹೈದ್ರಾಬಾದ್‌ನಲ್ಲಿ ಘಟನೆ

ಉದಯ್‌ ಕೃಷ್ಣ ರೆಡ್ಡಿ(Uday krishna reddy) ಜೂ.23ರಿಂದ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಜು.10ರಂದು ಹಲ್ಲೆ ನಡೆಸಿದ್ದಾರೆ. ಖಾಸಗಿ ವಿಡಿಯೋ ಇಟ್ಟು ಕೊಂಡು ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಅಕಾಡೆಮಿ ತೊರೆದಿದ್ದ ಉದಯ್‌ ತಮ್ಮ ಸ್ನೇಹಿತನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮ*ಹತ್ಯೆಗೆ ಯತ್ನಿಸಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೇದೆಯಿಂದ ಐಪಿಎಸ್‌ಗೆ: 

ವೈದ್ಯರಾಗುವ ಆಸೆ ಹೊತ್ತಿದ್ದ ಉದಯ್‌ಗೆ ಬಡತನ ಅಡ್ಡಿಯಾಗಿತ್ತು. ಹೀಗಾಗಿ ಪೊಲೀಸ್‌ ಕಾನ್‌ಸ್ಟೇಬಲ್ ಕೆಲಸಕ್ಕೆ ಸೇರಿದರು. 2018ರಲ್ಲಿ ಹಿರಿಯ ಸರ್ಕಲ್‌ ಇನ್ಸ್‌ಪೆಕ್ಟರ್‌ 60 ಅಧಿಕಾರಿಗಳ ಮುಂದೆ ಅವಮಾನಿಸಿದರು ಎನ್ನುವ ಕಾರಣಕ್ಕೆ ಐಪಿಎಸ್‌ ಬರೆಯುವ ನಿರ್ಧಾರ ಮಾಡಿದರು. ಕೆಲಸಕ್ಕೆ ರಾಜೀನಾಮೆ ನೀಡಿ ಪರೀಕ್ಷೆಗೆ ತಯಾರಾಗಿ ಮೊದಲ ಪ್ರಯತ್ನದಲ್ಲಿ ಐಆರ್‌ಎಸ್‌ಗೆ ಅರ್ಹತೆ ಪಡೆದರು. ಆದರೆ ಛಲ ಬಿಡದೆ ಮತ್ತೇ ಓದಿ 2024ರಲ್ಲಿ ಐಪಿಎಸ್‌ಗೆ ಅರ್ಹತೆ ಪಡೆದುಕೊಂಡಿದ್ದರು.a