Asianet Suvarna News Asianet Suvarna News

ಖ್ಯಾತ ಭೋಜ್‌ಪುರಿ ಮಹಿಳಾ ಯೂಟ್ಯೂಬರ್ ಸಾವು: ಪತಿಯ ಅನೈತಿಕ ಸಂಬಂಧಕ್ಕೆ ಬಲಿ?

ಖ್ಯಾತ ಭೋಜ್‌ಪುರಿ ಮಹಿಳಾ ಯೂಟ್ಯೂಬರ್ ಮಾಲ್ತಿ ದೇವಿ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಪೋಷಕರು ತಮ್ಮ ಮಗಳನ್ನು ವರದಕ್ಷಿಣೆಗಾಗಿ ಆಕೆಯ ಗಂಡ ಹಾಗೂ ಅತ್ತೆ ಮನೆಯವರೇ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Famous Bhojpuri female YouTuber Malti Devi dies husband's Illegal affair akb
Author
First Published Nov 25, 2023, 1:20 PM IST

ಖ್ಯಾತ ಭೋಜ್‌ಪುರಿ ಮಹಿಳಾ ಯೂಟ್ಯೂಬರ್ ಮಾಲ್ತಿ ದೇವಿ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಪೋಷಕರು ತಮ್ಮ ಮಗಳನ್ನು ವರದಕ್ಷಿಣೆಗಾಗಿ ಆಕೆಯ ಗಂಡ ಹಾಗೂ ಅತ್ತೆ ಮನೆಯವರೇ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಸಂತ ಕಬೀರ ನಗರದ ಮನೆಯಲ್ಲಿ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 

ಘಟನೆಗೆ ಸಂಬಂಧಿಸಿದಂತೆ ಮಾಲ್ತಿ ತಂದೆ ದೀಪ್‌ಚಂದ್ (Deepchand) ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮಗಳನ್ನು ಆಕೆಯ ಅತ್ತೆ ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಯುವುದಕ್ಕೂ ಮೊದಲು ಮಾಲ್ತಿ ದೇವಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀಡಿಯೋವೊಂದನ್ನು ಹಾಕಿದ್ದು, ಅದರಲ್ಲಿ ತನ್ನ ಗಂಡ ವಿಷ್ಣುಕುಮಾರ್ ಹಾಗೂ ಆತನ ಕುಟುಂಬದ ಸದಸ್ಯರು ವರದಕ್ಷಿಣೆಗೆ (Dowry) ಒತ್ತಾಯಿಸಿ ನನಗೆ ಹೊಡೆದು ಬಡೆದು ಮಾಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. 

ನಮಸ್ಕಾರ ದೇವ್ರೂ ಅನ್ನೋ ಡಾ ಬ್ರೋ ಹಿಂದಿನ ನೋವಿನ ಕಥೆ ನಿಮಗೊತ್ತಾ?

ಇನ್ನು ಮಾಲ್ತಿ ತಂದೆ ದೀಪ್‌ಚಂದ್ ಈ ಬಗ್ಗೆ ಮಾತನಾಡಿದ್ದು, ಘಟನೆ ನಡೆಯುವ ಒಂದು ದಿನ ಮೊದಲಷ್ಟೇ ಆಕೆಯ ಪತಿ ವಿಷ್ಣು  ಆಕೆಯನ್ನು ತಾಯಿ ಮನೆಯಿಂದ ಕರೆದುಕೊಂಡು ಹೋಗಿದ್ದ. ವಿಷ್ಣು ಇತರ ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದ, ಇದೇ ಕಾರಣಕ್ಕೆ ಗಂಡ ಹೆಂಡತಿ ಮಧ್ಯೆ ವಿರಸ ಮೂಡಿತ್ತು. ಇದಕ್ಕಾಗಿ ಆತ ಹೆಂಡತಿಯನ್ನು ದಿನವೂ ಹೊಡೆಯುತ್ತಿದ್ದ ಎಂದು ಮಾಲ್ತಿ ತಂದೆ ಆರೋಪಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳಡಿ ಮಾಲ್ತಿ  ಪತಿ ವಿಷ್ಣು ಹಾಗೂ ಆತನ ಮೂವರು ಸಂಬಂಧಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ತನ್ನನ್ನು ಕೆಲಸದಿಂದ ಕಿತ್ತುಹಾಕಿದ ಏರ್‌ ಏಷ್ಯಾ ಸಿಇಒಗಿಂತ ನನಗೇ ಹೆಚ್ಚು ಸಂಬಳ: ಯೂಟ್ಯೂಬರ್‌

Follow Us:
Download App:
  • android
  • ios