Asianet Suvarna News Asianet Suvarna News

ಪ್ರವಾದಿಗೆ ಅವಮಾನ ಮಾಡಿದ ಎಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿಯಿಂದ ಕಂಡಕ್ಟರ್ ಹತ್ಯೆ

ಪ್ರವಾದಿ ಮೊಹಮ್ಮದರನ್ನು ಹಾಗೂ ಮುಸ್ಲಿಮರನ್ನು ನಿಂದಿಸಿದ ಎಂದು ಆರೋಪಿಸಿ ಉತ್ತರ ಪ್ರದೇಶದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಬಸ್‌ ಕಂಡಕ್ಟರ್‌ನನ್ನು ಮಾಂಸ ಕತ್ತರಿಸುವ ಚಾಕುವಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

Muslim Student killed conductor for insulting the Prophet police said its clash over ticket prices akb
Author
First Published Nov 26, 2023, 9:13 AM IST

ಪ್ರಯಾಗ್‌ರಾಜ್‌: ಪ್ರವಾದಿ ಮೊಹಮ್ಮದರನ್ನು ಹಾಗೂ ಮುಸ್ಲಿಮರನ್ನು ನಿಂದಿಸಿದ ಎಂದು ಆರೋಪಿಸಿ ಉತ್ತರ ಪ್ರದೇಶದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಬಸ್‌ ಕಂಡಕ್ಟರ್‌ನನ್ನು ಮಾಂಸ ಕತ್ತರಿಸುವ ಚಾಕುವಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಆದರೆ ಇದು ಟಿಕೆಟ್‌ ದರಕ್ಕಾಗಿ ನಡೆದ ಘರ್ಷಣೆ. ಕಂಡಕ್ಟರ್‌ (Conductor) ಪ್ರವಾದಿಯನ್ನು ಅವಮಾನ ಮಾಡಿರಲಿಲ್ಲ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ ನಡೆಸಿ ಆರೋಪಿ ಲಾರೇಬ್‌ ಹಷ್ಮಿಯನ್ನು (20) ಬಂಧಿಸಿದ್ದಾರೆ. ಎನ್‌ಕೌಂಟರ್‌ (Encounter) ವೇಳೆ ಹಷ್ಮಿ ಕಾಲಿಗೆ ಗುಂಡು ತಾಗಿದೆ.

ಆಗಿದ್ದೇನು?:

ಪ್ರಯಾಗ್‌ರಾಜ್‌ನಲ್ಲಿ ಲಾರೇಬ್‌ ಬಸ್‌ನಲ್ಲಿ ಸಾಗುತ್ತಿರುವಾಗ ಕಂಡಕ್ಟರ್ ವಿಶ್ವಕರ್ಮ (vishwakarma) ಅವರ ಜತೆ ಜಗಳ ನಡೆದಿದೆ. ಈ ವೇಳೆ ತನ್ನ ಬ್ಯಾಗ್‌ನಲ್ಲಿದ್ದ ಮಾಂಸ ಕತ್ತರಿಸುವ ಚಾಕು ಹೊರತೆಗೆದ ಲಾರೇಬ್‌, ಕಂಡಕ್ಟರ್‌ನನ್ನು ಅದರಿಂದ ಇರಿದು ಕೊಲೆ ಮಾಡಿದ್ದಾನೆ.  ನಂತರ ಸಮೀಪದ ಕಾಲೇಜು ಕ್ಯಾಂಪಸ್‌ ಒಂದಕ್ಕೆ ಓಡಿ ಹೋಗಿ ಅಡಗಿ ಕುಳಿತ ಆತ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.

ಮಕ್ಕಳ ಮೇಲೆ ಮುಸ್ಲಿಂ ವಲಸಿಗನ ದಾಳಿಗೆ ಕೆರಳಿದ ಐರ್ಲೆಂಡ್ ನಾಗರಿಕರು: ವಾಹನ, ವಲಸೆ ಕಚೇರಿಗಳಿಗೆ ಬೆಂಕಿ

ವೋ ಮುಸಲ್ಮಾನೋ ಕೊ ಗಾಲಿ ದೇ ರಹಾ ಥಾ, ಮೈನೆ ಉಸ್ಕೊ ಮಾರಾ ಹೈ. ಇನ್ಶಾಲ್ಲಾಹ್ ವೋ ಜರೂರ್ ಮರೇಗಾ (ಅವನು ಮುಸ್ಲಿಮರನ್ನು ನಿಂದಿಸುತ್ತಿದ್ದನು ಹಾಗಾಗಿ ನಾನು ಅವನ ಮೇಲೆ ದಾಳಿ ಮಾಡಿದ್ದೇನೆ ... ಅವನು ಖಂಡಿತವಾಗಿಯೂ ಸಾಯುತ್ತಾನೆ) ಎಂದಿದ್ದಾನೆ. ಅಲ್ಲದೆ, ಪ್ರವಾದಿ ಮೊಹಮ್ಮದರಿಗಾಗಿ ನಾನು ಜೀವ ಬಿಡಲು ಸಿದ್ಧ. ಮುಸ್ಲಿಮರೇ ನೀವು ಕೂಡ ಪ್ರವಾದಿಗಾಗಿ ಬಲಿದಾನಕ್ಕಾಗಿ ಸಿದ್ಧರಾಗಿ ಎಂದಿದ್ದಾನೆ.

ಬಳಿಕ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದಾಗ ಅವರ ಮೇಲೇ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಷ್ಮಿಯನ್ನು ಆತನ ಕಾಲೇಜು ಅಮಾನತು ಮಾಡಿದೆ.

ಕೇರಳ ಸ್ಟೋರಿ ಚಿತ್ರವನ್ನು ಟೀಕಿಸಿ ಮುಸ್ಲಿಂ ವ್ಯಕ್ತಿಯ ಮದುವೆಯಾಗಿದ್ದ ಹಿಂದು ಹುಡುಗಿ ಬದುಕು ನರಕ!

Follow Us:
Download App:
  • android
  • ios