ನವದೆಹಲಿ[ಮಾ.09]: ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ನಿಟ್ಟಿನಿಂದ ಜನರು ಹ್ಯಾಂಡ್‌ ಸ್ಯಾನಿಟೈಸರ್‌ (ಕೈತೊಳೆಯುವ ದ್ರಾವಣ)ವನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಹೀಗಾಗಿ ಹ್ಯಾಂಡ್‌ ಸ್ಯಾನಿಟೈಸರ್‌ಗಳು ಅಂಗಡಿ ಮಾತ್ರವಲ್ಲ ಆನ್‌ಲೈನ್‌ನಲ್ಲೂ ಬಲು ದುಬಾರಿ ಆಗಿವೆ.

ಫ್ಲಿಪ್‌ಕಾರ್ಟ್‌ನಲ್ಲಿ 300 ಎಂಎಲ್‌ ಹ್ಯಾಂಡ್‌ ಸ್ಯಾನಿಟೈಸರ್‌ನ ದರ 16 ಪಟ್ಟು ಜಾಸ್ತಿಯಾಗಿದೆ. ಉದಾಹರಣೆಗೆ ಹಿಮಾಲಯ ಪ್ಯೂರ್‌ ಹ್ಯಾಂಡ್ಸ್‌ 30 ಎಂಎಲ್‌ ಬಾಟಲ್‌ನ ದರ 999 ರು. ವರೆಗೂ ತೋರಿಸಲಾಗುತ್ತಿದೆ. ಈ ಬಗ್ಗೆ ಅನೇಕ ಗ್ರಾಹಕರು ಟ್ವೀಟರ್‌ ಮೂಲಕ ಟೀಕೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಾವು ಹ್ಯಾಂಡ್‌ ಸ್ಯಾನಿಟೈಸರ್‌ಗಳ ದರವನ್ನು ಏರಿಕೆ ಮಾಡಿಲ್ಲ. ಮಧ್ಯವರ್ತಿಗಳು ಅಕ್ರಮವಾಗಿ ದರಗಳನ್ನು ಏರಿಕೆ ಮಾಡಿದ್ದಾರೆ.

ಬೆಲೆ ಏರಿಕೆಗೆ ಕಾರಣವಾದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿಮಾಲಯ ಔಷಧ ಕಂಪನಿ ತಿಳಿಸಿದೆ.