ನವದೆಹಲಿ[ಜ.15]: ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದಕರಿಗೆ ಆಶ್ರಯ ನೀಡಿ ಬಂಧಿತನಾಗಿರುವ ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ದವಿಂದರ್‌ ಸಿಂಗ್‌ ಪ್ರಕರಣಕ್ಕೂ ಕಾಂಗ್ರೆಸ್‌, ಜಾತಿ-ಧರ್ಮದ ಬಣ್ಣ ಬಳಿಯಲೂ ಯತ್ನಿಸಿದೆ.

ಉಗ್ರರಿಗೆ ಮನೆಯಲ್ಲೇ ಆಶ್ರಯ ಕೊಟ್ಟಿದ್ದ ಡಿವೈಎಸ್ಪಿ!

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ‘ಬಂಧಿತ ಅಧಿಕಾರಿ ದವಿಂದರ್‌ ಸಿಂಗ್‌ ಬದಲು ದವಿಂದರ್‌ ಖಾನ್‌ ಆಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಆರೆಸ್ಸೆಸ್‌ ಬೆಂಬಲಿತ ಸಾಮಾಜಿಕ ಮಾಧ್ಯಮದ ಟ್ರೋಲ್‌ಗಳು ಬೇರೆ ರೀತಿಯೇ ಪ್ರತಿಕ್ರಿಯಿಸುತ್ತಿದ್ದರು. ನಮ್ಮ ದೇಶದ ವೈರಿಗಳನ್ನು ಜಾತಿ, ಧರ್ಮ, ವರ್ಣವನ್ನು ಮೀರಿ ನೋಡಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ ಸ್ವತಃ ಅಧಿರ್‌ ಅವರೇ ತಮ್ಮ ಹೆಸರಿನ ಮುಂದೆ ಖಾನ್‌ ಸೇರಿಸಿಕೊಳ್ಳಲಿ ಎಂದು ನಿವೃತ್ತ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ.ಸಿಂಗ್‌ ತಿರುಗೇಟು ನೀಡಿದ್ದಾರೆ.

ಉಗ್ರರ ಜತೆ ಸಿಕ್ಕಿಬಿದ್ದ ಡಿವೈಎಸ್ಪಿ! : ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್‌ ಬಲೆಗೆ