ಜ್ಞಾನವಾಪಿ ಹೋರಾಟಕ್ಕೆ ವಿಶ್ವನಾಥನ ಅಭಯ, ಪೂಜೆ ಪ್ರಶ್ನಿಸಿದ ಮುಸ್ಲಿಮ್ ಸಮಿತಿಗೆ ಹೈಕೋರ್ಟ್‌ನಲ್ಲೂ ಹಿನ್ನಡೆ!

ಜ್ಞಾನವಾಪಿ ಹಾಗೂ ಕಾಶೀ ವಿಶ್ವನಾಥನ ಹೋರಾಟದಲ್ಲಿ ಹಿಂದೂಗಳಿಗೆ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಜ್ಞಾನವಾಪಿ ಮಸೀದಿಯ ನೆಲ ಮಹಡಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಮ್ ಸಮಿತಿಗೆ ತೀವ್ರ ಹಿನ್ನಡೆಯಾಗಿದೆ. ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

Gyanvapi Vyas Tehkhana Case Allahabad High Court reject Muslim committee plea upheld Varanasi court order ckm

ಲಖನೌ(ಫೆ.26): ಆಯೋಧ್ಯೆ ಬಳಿಕ ಕಾಶಿ ವಿಶ್ವನಾಥ ಮಂದಿರದ ಹೋರಾಟ ತೀವ್ರಗೊಂಡಿದೆ. ಮಂದಿರದ ಆವರಣದಲ್ಲಿನ ಪರಿವರ್ತಿತ ಜ್ಞಾನವಾಪಿ ಮಸೀದಿಯನ್ನು ಮರಳಿ ಪಡೆಯು ಹಿಂದೂಗಳ ಹೋರಾಟಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯ ಮಸೀದಿಯ ನೆಲಮಹಡಿಯಲ್ಲಿರುವ ಹಿಂದೂ ಮೂರ್ತಿಗಳ ಪೂಜೆಗೆ ನೀಡಿದ್ದ ಅವಕಾಶ ಪ್ರಸ್ನಿಸಿ ಮುಸ್ಲಿಮ್ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ತೀರ್ಪು ನೀಡಿದೆ. ವಾರಾಣಸಿ ಜಿಲ್ಲಾ ನ್ಯಾಯಲದ ತೀರ್ಪು ಎತ್ತಿ ಹಿಡಿದಿರುವ ಹೈಕೋರ್ಟ್, ಮುಸ್ಲಿಮ್ ಅರ್ಜಿಯನ್ನು ತಿರಸ್ಕರಿಸಿದೆ.

ಜಸ್ಟೀಸ್ ರೋಹಿತ್ ರಂಜನ್ ಅಗರ್ವಾಲ್ ಇಂದು ಜ್ಞಾನವಾಪಿ ಮಸೀದಿಯಲ್ಲಿನ ಪೂಜೆಗೆ ಅವಕಾಶದ ಕುರಿತು ತೀರ್ಪು ಪ್ರಕಟಿಸಿದ್ದಾರೆ. ಹಿಂದೂ ಹಾಗೂ ಮುಸ್ಲಿಮ್ ಪರ ವಾದ ವಿವಾದಗಳನ್ನು ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. 11 ದಿನಗಳ ಬಳಿ ಇದೀಗ ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶವನ್ನು ಎತ್ತಿ ಹಿಡಿದಿದೆ.

ಗ್ಯಾನವಾಪಿ ಕೆಳಮಹಡಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌!

ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ದೇವರ ಪೂಜೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ಅವಕಾಶ ನೀಡಿತ್ತು. 7 ದಿನದ ಒಳಗೆ ಸ್ಥಳೀಯ ಜಿಲ್ಲಾಡಳಿತ ಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿತ್ತು. ಇದರಂತೆ ಫೆಬ್ರವರಿ 2ರಂದೇ ಜ್ಞಾನವ್ಯಾಪಿ ನೆಲಮಹಡಿಯಲ್ಲಿ ಪೂಜೆ ಕೈಂಕರ್ಯ ನಡೆದಿತ್ತು. ಆದರೆ ವಾರಣಾಸಿ ಜಿಲ್ಲಾ ನ್ಯಾಯಲಯ ನೀಡಿದ ತೀರ್ಪನ್ನು  ಜ್ಞಾನವಾಪಿ ಮಸೀದಿ ವ್ಯವಹಾರ ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಹಿನ್ನಡೆ ಅನುಭವಿಸಿತ್ತು.ಫೆಬ್ರವರಿ 1 ರಂದು ಸುಪ್ರೀಂ ಕೋರ್ಟ್‌ಗೆ ತುರ್ತು ವಿಚಾರಣೆ ನಡೆಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್‌ನಲ್ಲಿ ಪ್ರಶ್ನಿಸುವಂತೆ ಸೂಚಿಸಿತ್ತು.  ಇದರಂತೆ ಮುಸ್ಲಿಮ್ ಸಮಿತಿ ಅಲಹಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

1993ರವರೆಗೂ ಜ್ಞಾನವಾಪಿ ತಳಮಹಡಿಯಲ್ಲಿರುವ ಶೃಂಗಾರ ಗೌರಿಗೆ ಕಾಶಿ ವಿಶ್ವನಾಥ ದೇಗುಲದ ಅರ್ಚಕ ಸೋಮನಾಥ ವ್ಯಾಸ್‌ ಅವರು ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು. ಆದರೆ ಅಂದಿನ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರದ ವೇಳೆ ಹಿಂದೂಗಳ ಪೂಜೆ ವಿರುದ್ಧ ಭಾರಿ ಹೋರಾಟ ನಡೆದಿತ್ತು. ಇತ್ತ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಕೋರ್ಟ್ ಆದೇಶದಿಂದ ವ್ಯಾಸ ಆವರಣದಲ್ಲಿನ ಹಿಂದೂ ಮೂರ್ತಿಗಳ ಪೂಜೆಗೆ ನಿಷೇಧ ಹೇರಲಾಗಿತ್ತು. 

ಜ್ಞಾನವ್ಯಾಪಿ ಪ್ರಕರಣ ಮಾದರಿಯಲ್ಲೇ ಮಂಗಳೂರಲ್ಲೂ ಮಸೀದಿ ವಿವಾದ: ಹಿಂದೂ ಮಂದಿರದ ಕುರುಹು ಪತ್ತೆ!

ವಾರಣಾಸಿ ಕೋರ್ಟ್ ಮತ್ತೆ ಪೂಜೆಗೆ ಅವಕಾಶ ನೀಡಿದ ದಿನವೇ ಸ್ಥಳೀಯ ಜಿಲ್ಲಾಡಳಿತ ಪೂಜೆಗೆ ಅವಕಾಶ ನೀಡಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿತ್ತು. ಜ್ಞಾನವಾಪಿ ಮಸೀದಿಯಲ್ಲಿರುವ ವಜುಖಾನಾ ಪಕ್ಕದಲ್ಲಿರುವ ನಂದಿಯ ಮೂಲಕ ದೇಗುಲಕ್ಕೆ ವಿಧಿಸಲಾಗಿದ್ದ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು.ಮಧ್ಯರಾತ್ರಿ ಭಕ್ತರು, ವ್ಯಾಸ ಕುಟುಂಬ ತಳಮಹಡಿಯಲ್ಲಿ ಪೂಜೆ ಸಲ್ಲಿಸಿದ್ದರು.   
 

Latest Videos
Follow Us:
Download App:
  • android
  • ios