ಗ್ಯಾನವಾಪಿ ಕೆಳಮಹಡಿಯ ಮಂದಿರದಲ್ಲಿ ಪೂಜೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್!
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಉತ್ತರ ಪ್ರದೇಶ ಸಿಎಂ ಕಾಶಿ ವಿಶ್ವನಾಥ ಮಂದಿರ ತಲುಪಿದ್ದರು ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವಭೂಷಣ್ ಮಿಶ್ರಾ ತಿಳಿಸಿದ್ದಾರೆ. ಮೊದಲಿಗೆ ಕಾಶಿ ವಿಶ್ವನಾಥ ಮಂದಿರದಲ್ಲಿ ಪೂಜೆ ಸಲ್ಲಿಸಿದ ಅವರು ಬಳಿಕ, ಗ್ಯಾನವಾಪಿಯ ನೆಲಮಾಳಿಗೆಯಲ್ಲಿರುವ ವ್ಯಾಸ್ ಜೀಗೆ ತೆರಳಿ ಪೂಜೆ ಸಲ್ಲಿಸಿದರು.
ನವದೆಹಲಿ (ಫೆ.14): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಗ್ಯಾನವಾಪಿಯ ವ್ಯಾಸ್ ಜೀ ನೆಲಮಾಳಿಗೆಯಲ್ಲಿ ಇರಿಸಲಾಗಿರುವ ವಿಗ್ರಹಗಳ ಪೂಜೆಯನ್ನು ನೆರವೇರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿ ಭೇಟಿ ಮಾಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಂಗಳವಾರ ವಾರಣಾಸಿಗೆ ಭೇಟಿ ನೀಡಿ ಆಗಲಿರುವ ಸಿದ್ಧತೆಗಳನ್ನು ಮಾಹಿತಿಯನ್ನು ನೀಡಿದ್ದಾರೆ. ಈ ವೇಳೆ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಕಾಶಿ ವಿಶ್ವನಾಥ ಮಂದಿರದ ಪೂಜೆಯ ಬಳಿಕ ಸಿಎಂ ನೇರವಾಗಿ ಜ್ಞಾನವಾಪಿಯ ವ್ಯಾಸ್ ಜೀ ನೆಲಮಾಳಿಗೆಗೆ ಆಗಮಿಸಿ ಅಲ್ಲಿನ ವಿಗ್ರಹಗಳಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಸಿಎಂ ಯೋಗಿ ಕಾಶಿ ವಿಶ್ವನಾಥ ಮಂದಿರ ತಲುಪಿದ್ದರು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವಭೂಷಣ ಮಿಶ್ರಾ ತಿಳಿಸಿದ್ದಾರೆ. ಮೊದಲಿಗೆ ಅವರು ಬಾಬಾ ಕಾಶಿ ವಿಶ್ವನಾಥನನ್ನು ಪೂಜಿಸಿದರು. ಇಲ್ಲಿಂದ ನೇರವಾಗಿ ವ್ಯಾಸ್ ಜೀ ನೆಲ ಮಾಳಿಗೆಗೆ ಹೋಗಿದ್ದರು.
ಇದಾದ ನಂತರ ನೆಲಮಾಳಿಗೆಯ ಮುಂದೆ ನಂದಿಜಿಯ ದರ್ಶನವನ್ನೂ ಮಾಡಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದಲ್ಲಿ ರಾತ್ರಿ 8 ರಿಂದ 8:30 ರ ವರೆಗೆ ಸುಮಾರು ಅರ್ಧ ಗಂಟೆಗಳ ಕಾಲ ಇದ್ದರು ಎಂದು ವಿಶ್ವಭೂಷಣ ಮಿಶ್ರಾ ಮಾಹಿತಿ ನೀಡಿದ್ದಾರೆ. ಕಾಶಿ ವಿಶ್ವನಾಥ್, ವ್ಯಾಸಜಿ ತೆಹಖಾನ ಮತ್ತು ನಂದಿಜಿ ಮೂರೂ ಸ್ಥಳಗಳಿಗೆ ಭೇಟಿ ನೀಡಿದ ನಂತರ ಸಿಎಂ ಯೋಗಿ ಆದಿತ್ಯನಾಥ್ ವಾಪಸ್ ತೆರಳಿದರು
ಇತ್ತೀಚೆಗೆ ವಾರಾಣಾಸಿ ಜಿಲ್ಲಾ ಕೋರ್ಟ್‌ನ ಆದೇಶದ ಬಳಿಕ ಪೊಲೀಸ್ ಆಡಳಿತವು ಜ್ಞಾನವಾಪಿ ಮಸೀದಿಯ ದಕ್ಷಿಣ ತುದಿಯ ಕೆಳಗಿನ ನೆಲ ಮಹಡಿಯಲ್ಲಿರುವ ವ್ಯಾಸಜಿಯ ನೆಲಮಾಳಿಗೆಯನ್ನು ತೆರೆದು ದರ್ಶನ ಮತ್ತು ಪೂಜೆಯನ್ನು ಪ್ರಾರಂಭ ಮಾಡಲು ಅವಕಾಶ ನೀಡಿತ್ತು. ಅಂದಿನಿಂದ ಸಾಮಾನ್ಯ ಭಕ್ತರಿಗೂ ಜಾನಕಿ ದರ್ಶನ ನೀಡಲಾಗುತ್ತಿದೆ. ಇದೇ ಸ್ಥಳದಿಂದ ಯೋಗಿ ಆದಿತ್ಯನಾಥ್ ವಿಗ್ರಹದ ಪೂಜೆಯನ್ನು ಮಾಡಿದ್ದಾರೆ.
ನಾವು ಇವತ್ತಲ್ಲ ನಾಳೆ ಸಾಯಲೇಬೇಕು, ಹೀಗಾಗಿ ಸಂಘರ್ಷಕ್ಕೆ ತಯಾರಾಗಿ : ಅಬ್ದುಲ್ ಮಜೀದ್ ಮೈಸೂರು
ಜನವರಿ 31 ರಂದು ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಹಿಂದೂಗಳ ಪರವಾಗಿ ಐತಿಹಾಸಿಕ ತೀರ್ಪು ನೀಡಿತು. ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಮಾಡುವ ಹಕ್ಕನ್ನು ನ್ಯಾಯಾಲಯವು ಹಿಂದೂ ಪಕ್ಷಕ್ಕೆ ನೀಡಿತ್ತು. 7 ದಿನದೊಳಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಕೋರ್ಟ್ ಆದೇಶ ಬಂದ ತಕ್ಷಣ ಪೊಲೀಸರು-ಆಡಳಿತ ಬ್ಯಾರಿಕೇಡ್ ಗಳನ್ನು ತೆಗೆದು ಅದೇ ದಿನ ದರ್ಶನ ಆರಂಭಕ್ಕೆ ಅವಕಾಶ ನೀಡಿದರು.ಜ್ಯಾನವಾಪಿ ಮಸೀದಿಯ ಕೆಳಗಡೆ ವ್ಯಾಸ್ ಜೀ ನೆಲಮಾಳಿಗೆ ಇದೆ. 1993ರ ನವೆಂಬರ್ ಬಳಿಕ ವ್ಯಾಸ್ ನೆಲಮಾಳಿಗೆಯಲ್ಲಿ ಪೂಜೆಯನ್ನು ಆಗಿನ ರಾಜ್ಯ ಸರ್ಕಾರ ನಿಲ್ಲಿಸಿತು ಎಂದು ಹಿಂದೂ ಕಡೆಯವರು ಹೇಳಿದ್ದಾರೆ. ಅದೇ ಸಮಯದಲ್ಲಿ, ಮುಸ್ಲಿಂ ಕಡೆಯವರು ಪೂಜಾ ಸ್ಥಳದ ಕಾಯ್ದೆಯನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿದರು. ಆದರೆ ನ್ಯಾಯಾಲಯವು ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಜ್ಞಾನವಾಪಿಯ ವ್ಯಾಸ್ ನೆಲಮಾಳಿಗೆಯಲ್ಲಿ ಪೂಜೆ ಮಾಡುವ ಹಕ್ಕನ್ನು ಹಿಂದೂ ಪಕ್ಷದವರಿಗೆ ನೀಡಿದೆ.
ಶುಕ್ರವಾರದ ನಮಾಜ್ ಬೆನ್ನಲ್ಲೇ, ಜ್ಞಾನವಾಪಿ ವಿಚಾರದಲ್ಲಿ ಜೈಲ್ ಭರೋಗೆ ಕರೆ ನೀಡಿದ ಮುಸ್ಲಿಂ ಧರ್ಮಗುರು!