ಗ್ಯಾನವಾಪಿ ಮಸೀದಿ-ಶೃಂಗಾರ ಗೌರಿ ವಿವಾದದ ವಿಚಾರಣೆ ಪೂರ್ಣಗೊಳಿಸಿರುವ ವಾರಣಾಸಿ ಜಿಲ್ಲಾ ಕೋರ್ಟ್, ಸೋಮವಾರ ತನ್ನ ತೀರ್ಪು ಪ್ರಕಟಿಸಲಿದೆ. ಕೋರ್ಟ್‌ನಲ್ಲಿ ತೀರ್ಪು ನಮ್ಮ ಪರವಾಗಿಯೇ ಬರಲಿ ಎಂದು ಹಿಂದುಗಳು ಯಜ್ಞ ಕೂಡ ಮಾಡಿದ್ದಾರೆ. ಇನ್ನೊಂದೆಡೆ ಇಡೀ ವಾರಣಾಸಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ವಾರಣಾಸಿ (ಸೆ.11): ಸೂಕ್ಷ್ಮ ವಿಚಾರವಾಗಿರುವ ಗ್ಯಾನವಾಪಿ ಮಸೀದಿ ವಿಚಾರದಲ್ಲಿ ವಾರಣಾಸಿಯ ಜಿಲ್ಲಾ ಕೋರ್ಟ್ ಸೋಮವಾರ ತನ್ನ ತೀರ್ಪು ಪ್ರಕಟ ಮಾಡಲಿದೆ. ಈ ಕಾರಣಕ್ಕಾಗಿ ಇಡೀ ನಗರದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ, ಹಿಂದು ಹಾಗೂ ಮುಸ್ಲಿಮರು ವಾಸಿಸುವ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯುಲ್ಲಿ ನಿಯೋಜನೆಯಾಗಿದೆ. ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳಲು ಗಸ್ತು ತಿರುಗುತ್ತಿದೆ. ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದ ಅರ್ಜಿಯನ್ನು ಪುರಸ್ಕರಿಸುವುದೇ ಅಥವಾ ಬೇಡವೇ ಎನ್ನುವ ಕುರಿತಾಗಿ ಆದೇಶ ನೀಡಲಿದೆ. ನಗರದಲ್ಲಿ ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದೆ. ಮಿಶ್ರ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಗಸ್ತು ತಿರುಗಾಟ ಆರಂಭವಾಗಿದೆ. ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಎ ಸತೀಶ್ ಗಣೇಶ್ ಹೇಳಿದ್ದಾರೆ.
ಕಳೆದ ತಿಂಗಳು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕೋಮು ಸೂಕ್ಷ್ಮ ಪ್ರಕರಣದ ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು. ಪರಿಸ್ಥಿತಿ ಶಾಂತಿಯುತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆಯಾ ಪ್ರದೇಶಗಳಲ್ಲಿನ ಧಾರ್ಮಿಕ ಮುಖಂಡರೊಂದಿಗೆ ಮಾತನಾಡಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ. ವಾರಣಾಸಿ ಜಿಲ್ಲೆಯ ಗಡಿ ಭಾಗಗಳಲ್ಲಿ ಹೋಟೆಲ್‌ಗಳು, ಅತಿಥಿ ಗೃಹಗಳು ಸೇರಿದಂತೆ ತಪಾಸಣೆಯನ್ನು ಹೆಚ್ಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ.
ಏನಿದು ಪ್ರಕರಣ: ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿದೆ. ಅವುಗಳ ದೈನಂದಿನ ಪೂಜೆಗೆ ಅನುಮತಿ ಕೋರಿ 5 ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ನಿರ್ವಹಣೆಯನ್ನು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಪ್ರಶ್ನಿಸಿದ್ದು, ಜ್ಞಾನವಾಪಿ ಮಸೀದಿಯು ವಕ್ಫ್ ಆಸ್ತಿಯಾಗಿದೆ ಎಂದು ಹೇಳಿದೆ. ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಜಿಲ್ಲಾ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಕೆಳ ನ್ಯಾಯಾಲಯವು ಮೇ 19 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯೊಂದಿಗೆ ಮೇ 16 ರಂದು ಪೂರ್ಣಗೊಂಡ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಗೆ ಆದೇಶಿಸಿತ್ತು. ವೀಡಿಯೊಗ್ರಫಿ ಸಮೀಕ್ಷೆಯ ಸಮಯದಲ್ಲಿ ಮಸೀದಿಯ ಕೆಳ ನ್ಯಾಯಾಲಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹಿಂದೂ (Hindu) ಕಡೆಯವರು ಹೇಳಿದ್ದರು. ಆದರೆ, ಮುಸ್ಲಿಮರು (Muslim) ಇದು ಶಿವಲಿಂಗವಲ್ಲ (Shivaling) ಎಂದು ವಾದಿಸಿದ್ದರು.
ಗ್ಯಾನವಾಪಿ ಪ್ರಕರಣದಲ್ಲಿ ವಿಚಾರಣೆ ಮುಕ್ತಾಯ, ಸೆ. 12ಕ್ಕೆ ತೀರ್ಪು?
ಪ್ರಕರಣದಲ್ಲಿ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯನ್ನು ಪರವಾಗಿ ವಾದ ಮಾಡಿದ್ದ ವಕೀಲ ಶಮೀಮ್ ಅಹ್ಮದ್, ಗ್ಯಾನವಾಪಿ ಮಸೀದಿ (gyanvapi mosque) ವಕ್ಫ್ ಆಸ್ತಿಯಾಗಿದ್ದು, ನ್ಯಾಯಾಲಯಕ್ಕೆ ಈ ವಿಷಯವನ್ನು ಕೇಳುವ ಹಕ್ಕಿಲ್ಲ. ಮಸೀದಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಆಲಿಸುವ ಹಕ್ಕು ವಕ್ಫ್ ಮಂಡಳಿಗೆ (Waqf Board)ಮಾತ್ರ ಇದೆ ಎಂದು ವಾದ ಮಾಡಿದ್ದರು.
ಗ್ಯಾನವ್ಯಾಪಿ ಮಸೀದಿ ಪ್ರಕರಣ, ಪೂಜೆಗೆ ಅವಕಾಶ ಕೋರಿದ ಅರ್ಜಿದಾರರ ಪತಿಗೆ ಸರ್ ತನ್ ಸೆ ಜುದಾ ಬೆದರಿಕೆ!
ಈ ನಡುವೆ ವಾರಣಾಸಿಯ ವಿವಿದೆಡೆ ಹಿಂದುಗಳು ಅರ್ಜಿಯ ಪುರಸ್ಕಾರವಾಗಲಿ ಎಂದು ಯಜ್ಞ ಕೂಡ ಮಾಡಿದ್ದಾರೆ. ಈ ಮಸೀದಿಯನ್ನು 1669ರಲ್ಲಿ ಔರಂಗಜೇಬ, ದೇವಾಲಯವನ್ನು ಕೆಡವಿ ನಿರ್ಮಾಣ ಮಾಡಿದ್ದ ಎಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು (anjuman intezamia masjid) ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ. 1992 ರಲ್ಲಿ ಉತ್ತರ ಪ್ರದೇಶ ಸರ್ಕಾರ ಮತ್ತು ವಕ್ಫ್ ಮಂಡಳಿ ನಡುವಿನ ಒಪ್ಪಂದದ ನಂತರ ಗ್ಯಾನವಾಪಿ ಸಂಕೀರ್ಣದ ಒಂದು ಭಾಗವನ್ನು ಪೊಲೀಸ್ ನಿಯಂತ್ರಣ ಕೊಠಡಿಯಾಗಿ ಪರಿವರ್ತಿಸಲಾಯಿತು ಎಂದು ಮುಸ್ಲಿಂ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
