* ಜ್ಞಾನವಾಪಿ ಕೇಸ್‌ವಿಚಾರಣೆ ಮೇ 26ಕ್ಕೆ ಮುಂದೂಡಿದ ಕೋರ್ಟ್‌ * ಹಿಂದು/ಮುಸ್ಲಿಂ ಪೈಕಿ ಯಾವ ಅರ್ಜಿ ಮೊದಲು ವಿಚಾರಣೆ* ವಾರಾಣಸಿ ಜಿಲ್ಲಾ ಕೋರ್ಚ್‌ನಿಂದ ಇಂದು ನಿರ್ಧಾರ ಸಂಭವ

ವಾರಾಣಸಿ(ಮೇ.24): ಗ್ಯಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಹಾಗೂ ಮುಸ್ಲಿಮರು ಸಲ್ಲಿಸಿರುವ ಅರ್ಜಿಗಳ ಪೈಕಿ ಯಾವುದನ್ನು ಮೊದಲು ವಿಚಾರಣೆ ನಡೆಸಬೇಕು ಎಂಬ ಬಗ್ಗೆ ಮೇ 26ಕ್ಕೆ ವಿಚಾರಣೆ ನಡೆಸುವುದಾಗಿ ವಾರಾಣಸಿಯ ಜಿಲ್ಲಾ ನ್ಯಾಯಾಲಯ ತಿಳಿಸಿದೆ. 

ಸಿವಿಲ್‌ ನ್ಯಾಯಾಲಯ (ಹಿರಿಯ ವಿಭಾಗ)ದ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಶುಕ್ರವಾರ ಸುಪ್ರೀಂಕೋರ್ಚ್‌ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. 25ರಿಂದ 30 ವರ್ಷ ಅನುಭವವುಳ್ಳ ಹಿರಿಯ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಸೂಚಿಸಿತ್ತು. ಅದರಂತೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್‌ ಅವರು ಸೋಮವಾರ ಹಿಂದು ಹಾಗೂ ಮುಸ್ಲಿಂ ಎರಡೂ ಕಡೆಯ ಅರ್ಜಿಗಳ ವಿಚಾರಣೆ ನಡೆಸಿದ್ದು, ಮಂಗಳವಾರಕ್ಕೆ ಆದೇಶ ಕಾಯ್ದಿರಿಸಿದ್ದರು. ಆದರೀಗ ಈ ಆದೇಶವನ್ನು ಮೇ 26ಕ್ಕೆ ಮತ್ತೆ ಮುಂದೂಡಿದೆ.

ಕುತುಬ್ ಮಿನಾರ್‌ನಲ್ಲಿ ಪೂಜಾ ಹಕ್ಕು ನೀಡಲು ಸಾಧ್ಯವಿಲ್ಲ: ಪುರಾತತ್ವ ಇಲಾಖೆ!

ನ್ಯಾಯಾಲಯದಿಂದ ನೇಮಕಗೊಂಡಿದ್ದ ಸರ್ವೇ ಸಮಿತಿ ಈಗಾಗಲೇ ತನ್ನ ಕಾರ್ಯ ಪೂರ್ಣಗೊಳಿಸಿದೆ. ಹೀಗಾಗಿ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದು ಅರ್ಜಿದಾರರು ಕೋರಿದರು. ಈ ನಡುವೆ, 1991ರ ಪೂಜಾ ಸ್ಥಳ ಕಾಯ್ದೆಯನ್ವಯ ಹಿಂದು ಅರ್ಜಿದಾರರ ಅರ್ಜಿಯೇ ನಿಯಮಬಾಹಿರ. ಹೀಗಾಗಿ ಅರ್ಜಿಯನ್ನೇ ವಜಾಗೊಳಿಸಬೇಕು ಎಂದು ಮುಸ್ಲಿಂ ಅರ್ಜಿದಾರರು ಮನವಿ ಮಾಡಿದ್ದರು. ಈ ಪೈಕಿ ಯಾವ ಅರ್ಜಿಯನ್ನು ಮೊದಲು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಗುರುವಾರ ನಿರ್ಧರಿಸಲಿದೆ.

ಬಹಮನಿ ಕೋಟೆಯೊಳಗೂ ಮಂದಿರದ ಕುರುಹು: ಪೂಜಾದಿ ಅವಕಾಶಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

ಹೊಸ ಅರ್ಜಿ:

ಮತ್ತೊಂದೆಡೆ, ವಿಡಿಯೋ ಸಮೀಕ್ಷೆ ವೇಳೆ ಗ್ಯಾನವಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ಪೂಜಿಸಲು ಅನುಮತಿ ನೀಡಬೇಕು ಎಂದು ಕೋರಿ ಕಾಶಿ ವಿಶ್ವನಾಥ ದೇಗುಲದ ಮಹಾಂತ ಡಾ| ಕುಲಪತಿ ತಿವಾರಿ ಅವರು ಹೊಸ ಅರ್ಜಿ ಸಲ್ಲಿಸಿದ್ದಾರೆ.

ಗ್ಯಾನವಾಪಿ ಮಸೀದಿ ವಕ್ಫ್ ಆಸ್ತಿ ಅಲ್ಲ ಎಂದಿದ್ದ ಬ್ರಿಟಿಷ್‌ ಸರ್ಕಾರ!

ವಿಶ್ವ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಮಗ್ಗುಲಲ್ಲೇ ಇರುವ ಗ್ಯಾನವಾಪಿ ಮಸೀದಿಯೊಳಗಿನ ಹಿಂದು ದೇವತೆಗಳ ದರ್ಶನ ಹಾಗೂ ಆರಾಧನೆಗೆ ಅನುಮತಿ ಕೋರಿ ವಾರಾಣಸಿ ನ್ಯಾಯಾಲಯದ ಮೊರೆ ಹೋಗಿರುವ ಹಿಂದು ಮಹಿಳೆಯರು, ಇದೀಗ ಬ್ರಿಟಿಷ್‌ ಸರ್ಕಾರದ ನಿಲುವನ್ನು ಉಲ್ಲೇಖಿಸಿದ್ದಾರೆ. ಆಗಿನ ಬ್ರಿಟಿಷ್‌ ಸರ್ಕಾರವು ಗ್ಯಾನವಾಪಿ ಮಸೀದಿಯು ವಕ್ಫ್ ಆಸ್ತಿಯಲ್ಲ, ಆ ಸ್ಥಳ ಎಂದಿಗೂ ಮಸೀದಿ ಸ್ಥಳವಾಗಿರಲಿಲ್ಲ ಎಂದು ಘೋಷಿಸಿದ್ದನ್ನು ಪ್ರಸ್ತಾಪಿಸಿದ್ದಾರೆ. ಈ ಸಂಬಂಧ ನ್ಯಾಯಾಲಯಕ್ಕೂ ಅಫಿಡವಿಟ್‌ ಸಲ್ಲಿಸಿದ್ದಾರೆ.

1936ರಲ್ಲಿ ದೀನ್‌ ಮೊಹಮ್ಮದ್‌ ಎಂಬಾತ ಹಿಂದು ಸಮುದಾಯದ ಯಾರೊಬ್ಬರನ್ನೂ ಕಕ್ಷಿದಾರರು ಎಂದು ಪರಿಗಣಿಸದೆ ಸಿವಿಲ್‌ ಮೊಕದ್ದಮೆ ಹೂಡಿದ್ದ. ಬನಾರಸ್‌ ಜಿಲ್ಲಾಧಿಕಾರಿ ಮೂಲಕ ಭಾರತದ ಮಹಾಕಾರ್ಯದರ್ಶಿ, ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರುವ ಅಂಜುಮನ್‌ ಇಂತಾಜಾಮಿಯಾ ಮಸೀದಿಯನ್ನು ಕಕ್ಷಿದಾರರನ್ನಾಗಿ ಮಾಡಿದ್ದ. ಗ್ಯಾನವಾಪಿ ಮಸೀದಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕು ಎಂದು ಕೋರಿದ್ದ.

ಇದಕ್ಕೆ ಲಿಖಿತ ಹೇಳಿಕೆ ದಾಖಲಿಸಿದ್ದ ಭಾರತದ ಮಹಾಕಾರ್ಯದರ್ಶಿಗಳು, ಭಾರತದಲ್ಲಿ ಮೊಹಮದೀಯರ ಆಳ್ವಿಕೆ ಆರಂಭಕ್ಕೂ ಮುನ್ನವೇ ಕಾಶಿ ದೇವಸ್ಥಾನ, ವಿಗ್ರಹಗಳು ಇದ್ದವು. ಅಲ್ಲದೆ ಗ್ಯಾನವಾಪಿ ಮಸೀದಿ ಇರುವ ಎಲ್ಲ ಸ್ಥಳ ಸರ್ಕಾರಕ್ಕೆ ಸೇರಿದ್ದು. ಅದು ಎಂದಿಗೂ ಮಸೀದಿಯ ಸ್ಥಳವಲ್ಲ ಎಂದು ಹೇಳಿದ್ದರು. ಇದನ್ನು ಹಿಂದು ಕಕ್ಷಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.