ಭೂತ-ಪ್ರೇತಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಿಗೂಢ ಮಹಿಳೆಯೊಬ್ಬಳು ರಾತ್ರಿ ಡೋರ್‌ಬೆಲ್ ಬಾರಿಸಿ ಮಾಯವಾಗುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಕಗ್ಗಂಟಾಗಿದೆ. ಮಹಿಳೆ ಕಾಣಿಸಿಕೊಂಡಾಗ ಪ್ರಾಣಿಗಳು ವಿಚಿತ್ರವಾಗಿ ವರ್ತಿಸುತ್ತವೆ. ಈ ಹಿಂದೆ ಇಂತಹ ಘಟನೆಗಳು ವರದಿಯಾಗಿದ್ದವು. ದೂರು ದಾಖಲಾದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು.
ಇದೀಗ ಅಂಥದ್ದೇ ಒಂದು ಭಯಾನಕ ಘಟನೆಯ ವಿಡಿಯೋ ವೈರಲ್ ಆಗ್ತಿದೆ. ಪೊಲೀಸರೂ ಬೆದರಿದ, ಬಿಡಿಸಲಾಗದ ಕಗ್ಗಂಟಾಗಿದೆ ಈ ಘಟನೆ. ಇದು ನಡೆಯುತ್ತಿರುವುದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ನಿಗೂಢ ಮಹಿಳೆಯೊಬ್ಬಳು ರಾತ್ರಿಯ ವೇಳೆ ಡೋರ್‌ಬೆಲ್ ಬಾರಿಸುತ್ತ ಕೊನೆಗೆ ಗಾಳಿಯಲ್ಲಿ ಮಾಯವಾಗುವ ದೃಶ್ಯಗಳು ಮನೆಯಲ್ಲಿ ಇರುವ ಸಿಸಿಟಿವಿಯಲ್ಲಿಲ ದಾಖಲಾಗಿದೆ. ಇದರ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ. ರಾಜ ಮಂಡಿ ಮತ್ತು ಸೋನಾ ಗಾರ್ಡನ್ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳ ಹಲವಾರು ತುಣುಕುಗಳು ಮಹಿಳೆ ಡೋರ್‌ಬೆಲ್ ಬಾರಿಸಿ ಬಳಿಕ ಕಣ್ಮರೆಯಾಗುತ್ತಿರುವುದನ್ನು ನೋಡಬಹುದಾಗಿದೆ. ಇದು ಎಐ ಅಥವಾ ನಕಲಿ ವಿಡಿಯೋ ಎಂದೂ ಹೇಳಲಾಗದು. ಏಕೆಂದರೆ ಪೊಲೀಸರು ಕೂಡ ಇದರ ತನಿಖೆ ಕೈಗೊಂಡಿದ್ದು, ಅವರಿಗೂ ಇದು ಬಿಡಿಸಲಾಗದ ನಂಟಾಗಿದೆ.
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಹೇಳಿದ್ದೇನು?
ಈಕೆ ಕಾಣಿಸಿಕೊಂಡ ತಕ್ಷಣ, ದನಗಳು ಮತ್ತು ಬೀದಿ ನಾಯಿಗಳು ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿರುವುದನ್ನು, ಈ ಮಹಿಳೆ ಹೋದ ಜಾಗವನ್ನೇ ದಿಟ್ಟಿಸಿ ನಾಯಿಗಳ ವಿಚಿತ್ರವಾಗಿ ಕೂಗುವುದನ್ನು ಕೇಳಬಹುದಾಗಿದೆ. ಸಲ್ವಾರ್-ಕಮೀಜ್ ಧರಿಸಿದ ಮಹಿಳೆ, ಈ ವಿಡಿಯೋದಲ್ಲಿ ಕಂಡುಬರುವಂತೆ, ಮುಖವನ್ನು ಉದ್ದವಾದ ದುಪ್ಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ. ಆಕೆಯ ಎರಡೂ ಪಾದಗಳನ್ನು ಬಟ್ಟೆಯಿಂದ ಸುತ್ತಿಕೊಂಡಿರುವಂತೆ ಕಾಣುತ್ತದೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ, ಇದೇ ರೀತಿಯ ದೂರು ದಾಖಲಾಗಿತ್ತು. ಆದರೆ ಕ್ರಮೇಣ ಇದು ಕಡಿಮೆಯಾಗಿ ಜನರು ಇದನ್ನು ಮರೆತೇ ಹೋಗಿದ್ದರು. ಆದರೆ ಇದೀಗ ಮತ್ತೆ ನಿವಾಸಿಗಳಿಗೆ ಆತಂಕ ಶುರುವಾಗಿದೆ.
ಈ ಪ್ರಕರಣದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಅವರು ತಮಗೆ ಯಾವುದೇ ಔಪಚಾರಿಕ ದೂರುಗಳು ದಾಖಲಾಗಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಮಾಹಿತಿ ಆಧರಿಸಿ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಈ ಮಹಿಳೆಯನ್ನು ನಾವೂ ನೋಡಿದ್ದೇವೆ. ಯಾರಾದರೂ ದೂರು ದಾಖಲು ಮಾಡಿದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ಹೊರತಾಗಿಯೂ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲು ಠಾಣಾ ಉಸ್ತುವಾರಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
'ಭೂತ'ದ ಹೆಸ್ರು ಸಂಜು ಅಲ್ಲ ಸಲೀಂ: ಗರ್ಭಿಣಿಯಾದ ರೀಲ್ಸ್ ರಾಣಿಯ ಭಯಾನಕ ಅಂತ್ಯ
