ಹೆಚ್ಚಾಯ್ತು ವಯಾಗ್ರ ಡೋಸ್, ಆಹ್ವಾನಿಸಿದ ಗೆಳತಿ ಕೋಣೆಗೆ ಬರುವ ಮೊದಲೇ ಯುವಕ ಸಾವು, ಕಾಂಡೋಮ್ ಸೇರಿದಂತೆ ಕೆಲ ವಸ್ತುಗಳು ಮೃತದೇಹ ಬಳಿ ಪತ್ತೆಯಾಗಿದೆ. ಏನಿದು ಘಟನೆ, ಯುವಕ ಸಾವು ಕಂಡಿದ್ದು ಹೇಗೆ?

ಗುರುಗಾಂವ್ (ಏ.25) ಪಿಜಿಯಲ್ಲಿ ವಾಸವಿದ್ದ 29ರ ಹರೆಯಗ ಯುವಕ ಮೃತಪಟ್ಟ ಘಟನೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಾಗಪುರ ಮೂಲದ ಈ ಯುವಕ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ. ಇದರ ನಡುವೆ ತನ್ನ ಕೋಣೆಗೆ ಗೆಳತಿಯನ್ನು ಆಹ್ವಾನಿಸಿದ್ದ. ಆದರೆ ಗೆಳತಿ ಕೋಣೆಗೆ ಬರುವ ಮೊದಲೇ ಭಾರಿ ತಯಾರಿ ಮಾಡಿಕೊಂಡಿದ್ದ ಯುವಕ ಮೃತಪಟ್ಟಿದ್ದಾನೆ. ಈತನ ಮೃತದೇಹ ಬಳಿಕ ವಯಾಗ್ರ, ಕಾಂಡೋಮ್ ಸೇರಿದಂತೆ ಕೆಲ ವಸ್ತುಗಳು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಯಾಗ್ರಾ ಓವರ್ ಡೋಸ್

ಗುರುಗ್ರಾಂ ಪಿಜಿಯಲ್ಲಿ ವಾಸವಿದ್ದ 29ರ ಹರೆಯದ ರೋಹಿತ್ ಲಾಲ್ ಮೃತ ದುರ್ದೈವಿ. ರೋಹಿತ್ ಲಾಲ್ ಕಚೇರಿಗೆ ರಜೆಯ ಕಾರಣದಿಂದ ತನ್ನ ಕೋಣೆಗೆ ಗೆಳತಿಯನ್ನು ಆಹ್ವಾನಿಸಿದ್ದ. ಗೆಳತಿ ಜೊತೆ ಲೈ0ಗಿಕ ಸಂಪರ್ಕ ಬಯಸಿದ್ದ. ಹೀಗಾಗಿ ಈತ ವಯಾಗ್ರ ರೀತಿಯ ಡ್ರಗ್ಸ್ ಸೇವಿಸಿದ್ದಾನೆ. ಆದರೆ ಇದು ಓವರ್ ಡೋಸ್ ಆಗಿದೆ. ಇದರ ಪರಿಣಾಮ ಹೃದಯಾಘಾತದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ರೋಹಿತ್ ಲಾಲ್ ಪ್ರತಿ ದಿನ ತನ್ನ ಕಚೇರಿಯ ಮತ್ತೊಬ್ಬ ಉದ್ಯೋಗಿ ಜೊತೆ ಕಚೇರಿಗೆ ತೆರಳುತ್ತಿದ್ದ. ಪ್ರತಿ ದಿನ ಬೆಳಗ್ಗೆ ಸಹೋದ್ಯೋಗಿ ಆಗಮಿಸಿದಾಗ ಆತನ ಜೊತೆ ತೆರಳುತ್ತಿದ್ದ. ಎಂದಿನಂತೆ ಸಹೋದ್ಯೋಗಿ ಆಗಮಿಸಿದರೆ ಇತ್ತ ರೋಹಿತ್ ಲಾಲ್ ಪತ್ತೆ ಇರಲಿಲ್ಲ. ಹೀಗಾಗಿ ಸಹೋದ್ಯೋಗಿ ಕರೆ ಮಾಡಿದ್ದಾನೆ. ಆದರೆ ಸುಳಿವಿಲ್ಲ. ಹೀಗಾಗಿ ರೋಹಿತ್ ಲಾಲ್ ಕೊಠಡಿಗೆ ತೆರಳಿದಾಗ ಡೋರ್ ಲಾಕ್ ಆಗಿದೆ. ಕೋಣೆಯೊಳಗೆ ಫೋನ್ ರಿಂಗ್ ಆಗುತ್ತಿದೆ. ಅನುಮಾನಗೊಂಡ ಸಹೋದ್ಯೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ರೋಹಿತ್ ಮೃತದೇಹ ಬೆಡ್ ಮೇಲೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ರೋಹಿತ್ ಲಾಲ್, ಗೆಳತಿ ಜೊತೆ ಕಳೆಯಲು ವಯಾಗ್ರ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಓವರ್ ಡೋಸ್ ಪರಿಣಾಮ ಇದು ಗಂಭೀರ ಪರಿಣಾಮ ಸೃಷ್ಟಿಸಿದೆ. ಓವರ್ ಡೋಸ್‌ನಿಂದ ರೋಹಿತ್ ಲಾಲ್‌ಗೆ ಹೃದಯಾಘಾತ ಸಂಭವಿಸಿದೆ. ಹೀಗಾಗಿ ದುರಂತ ಅಂತ್ಯಕಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಯುವಕನ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಪೋಷಕರು ದೂರು ನೀಡಿದರೆ ಅದರಂತೆ ತನಿಖೆ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. ಮೃತದೇಹ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.