ವಂಚಕರು ಹೊಸ ಹೊಸ ವಿಧಾನಗಳ ಮೂಲಕ, ಮೆಸೇಜ್, ವ್ಯಾಟ್ಸಾಪ್ ಮೂಲಕ ವಂಚಿಸಿ ಹಣ ದೋಚುತ್ತಲೇ ಇರುತ್ತಾರೆ. ಈ ಕುರಿತು ಸ್ಕಾಮ್ ಮೆಸೇಜ್‌ಗಳು ಬಹುತೇಕರಿಗೆ ಬಂದಿರುತ್ತದೆ. ಹೀಗೆ ಸಾಫ್ಟ್‌ವೇರ್ ಡೆವಲಪ್ಪರ್‌ಗೆ ವಂಚಿಸಲು ಹೋಗಿ ವಂಚಕ ಬೆಪ್ಪಾದ ಘಟನೆ ನಡೆದಿದೆ. 

ಗುರುಗ್ರಾಂ(ಜು.30) ಡಿಜಿಟಲ್ ಸ್ಕ್ಯಾಮ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಸದ್ಯ ಬಹುತೇಕ ಎಲ್ಲಾ ವ್ಯವಹಾರಗಳು, ಹಣ ವರ್ಗಾವಣೆ, ಪಾವತಿ ಡಿಜಿಟಲ್ ಮೂಲಕವೇ ನಡೆಯುತ್ತಿದೆ. ಇದರ ಜೊತೆಗೆ ಸೈಬರ್ ಕ್ರೈಂ ಸಂಖ್ಯೆ ಕೂಡ ಹೆಚ್ಚಾಗಿದೆ. ನಿಮಗೆ ಮೆಸೇಜ್ ಮೂಲಕ, ವ್ಯಾಟ್ಸಾಪ್ ಸಂದೇಶ ಮೂಲಕ ಈ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ. ಹೀಗೆ ನಾನಾ ರೀತಿಯಲ್ಲಿ ಮೋಸ ಮಾಡಿ ಖಾತೆಯಿಂದ ಹಣ ಎಗರಿಸುವುದು ನಡೆಯುತ್ತಲೇ ಇದೆ. ಆದರೆ ಈ ಬಾರಿ ವಂಚಕನೊಬ್ಬ ಹೀಗೆ ಮೆಸೇಜ್ ಮೂಲಕ ಸೈಬರ್ ಕ್ರೈಂಗೆ ಮುಂದಾಗಿದ್ದಾನೆ. ಆದರೆ ಈ ಮೆಸೇಜ್ ಸಾಫ್ಟ್‌ವೇರ್ ಎಂಜಿನೀಯರ್‌ಗೆ ಕಳುಹಿಸಲಾಗಿದೆ. ಮೆಸೇಜ್ ಕಳುಹಿಸಿದ ವಂಚನೆ ಕೊನೆಗೆ ಬೆಪ್ಪಾದ ಘಟನೆ ನಡೆದಿದೆ.

ಗುರುಗ್ರಾಂನ ಸಾಫ್ಟ್‌ವೇರ್ ಎಂಜಿನೀಯರ್‌ ಗೌರವ್ ಶರಣ್‌ಗೆ ವಂಚಕನೊಬ್ಬ ಮೆಸೇಜ್ ಕಳುಹಿಸಿದ್ದಾನೆ. ಬ್ಯಾಂಕ್‌ನಿಂದ ಕಳುಹಿಸಲಾಗಿರುವ ಮೆಸೇಜ್ ರೀತಿ ಸಂದೇಶ ಕಳುಹಿಸಲಾಗಿದೆ. ಪ್ರೀತಿಯ ಗಾಹಕ, ನಿಮ್ಮ ಹೆಚ್‌ಡಿಎಫ್‌ಸಿ ಖಾತೆ ನಿಷ್ಕ್ರೀಯಗೊಂಡಿದೆ. ದಯವಿಟ್ಟು ಲಿಂಕ್ ಕ್ಲಿಕ್ ಮಾಡಿ ನಿಮ್ಮ ಪಾನ್ ಸಂಖ್ಯೆ ಅಪ್‌ಡೇಟ್ ಮಾಡಿ ಎಂಬ ಮೆಸೇಜ್ ಬಂದಿದೆ.

ಈ ಕಾರಣಕ್ಕೆ ಬೆಂಗಳೂರು ನಿವಾಸಿ ಮನೆ ಬಾಡಿಗೆ 80 ಸಾವಿರ ರೂ, ಕಣ್ತೆರೆದು ನೋಡಲು ಹೇಳಿದ ಜನ!

ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿರುವ ಗೌರವ್ ಶರಣ್, ಈ ಮೆಸೇಜ್ ನೋಡಿದ ತಕ್ಷಣ ಇದು ಸ್ಕ್ಯಾಮ್ ಮೆಸೇಜ್ ಎಂದು ಪತ್ತೆ ಹಚ್ಚಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗಿಲ್ಲ. ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಒಕೆ ಬಯ್ಯಾ ಎಂದು ರಿಪ್ಲೈ ಮಾಡಿದ್ದಾರೆ. ತಕ್ಷಣವೇ ಮತ್ತೆ ಪಾನ್ ನಂಬರ್ ಅಪ್‌ಡೇಟ್ ಮಾಡಿ ಎಂದು ಮತ್ತೊಂದು ಸಂದೇಶ ಬಂದಿದೆ.

Scroll to load tweet…

ಇದಕ್ಕೆ ಉತ್ತರಿಸಿದ ಟೆಕ್ಕಿ, ಇದು ಸ್ಕ್ಯಾಮ್ ವೆಬ್‌ಸೈಟ್ ಎಂದು ಸುಲಭವಾಗಿ ಪತ್ತೆಹಚ್ಚಬಹುದು. ನಾನು ಸಾಫ್ಟ್‌ವೇರ್ ಎಂಜಿನಿಯರ್, ಬೇಕಾದರೆ ನಿಮ್ಮ ವೆಬ್‌ಸೈಟ್ ರಿ ಡಿಸೈನ್ ಮಾಡಿಕೊಡುತ್ತೇನೆ ಎಂದು ಉತ್ತರಿಸಿದ್ದಾರೆ. ಬ್ಯಾಂಕ್‌ ಸೋಗಿನಲ್ಲಿ ಮೆಸೇಜ್ ಮಾಡಿದ ವಂಚಕ, ಟೆಕ್ಕಿ ಉತ್ತರದಿಂದ ಎಲ್ಲವನ್ನೂ ಮರೆತಿದ್ದಾನೆ. ಬಳಿಕ ನಿಜವಾಗಿಯೂ ಎಂದು ಪ್ರಶ್ನಿಸಿದ್ದಾನೆ. ಕೇವಲ 20 ಸಾವಿರ ರೂಪಾಯಿಗೆ ನಾನು ನಿಮ್ಮ ವೈಬ್‌ಸೈಟನ್ನು ಹೆಚ್‌ಡಿಎಫ್‌ಸಿ ನೆಟ್‌ಬ್ಯಾಂಕಿಂಗ್ ವೆಬ್‌ಸೈಟ್ ರೀತಿ ಡಿಸೈನ್ ಮಾಡಿಕೊಡುತ್ತೇನೆ ಎಂದಿದ್ದಾನೆ. ಈ ಕುರಿತ ಯಾವುದೇ ಮಾದರಿಗಳಿದ್ದರೆ ಕಳುಹಿಸಿ, ವ್ಯಾಟ್ಸಾಪ್ ಮಾಡಿ ಎಂದು ವಂಚಕ ಉತ್ತರಿಸಿದ್ದಾನೆ. 

ಗೌರವ್ ಶರಣ್ ಈ ಸ್ಕ್ರೀನ್ ಶಾಟ್‌ನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರಿ ವೈರಲ್ ಆಗಿದೆ. ಯಾವತ್ತೂ ಡೆವಲಪ್ಪರ್ ಬಳಿ ಶಕ್ತಿ ಪ್ರದರ್ಶನ ಮಾಡಬೇಡಿ ಎಂದು ಕೆಲವರು ಸಲಹೆ ನೀಡಬೇಡಿ ಎಂದಿದ್ದಾರೆ. 

ಪ್ರಾಡಕ್ಟ್ ಕೊರಿಯರ್‌ ಹೆಸರಲ್ಲಿ ಟೆಕ್ಕಿಗೆ ವಂಚನೆ, ನಿಮಗೂ ಕಾಲ್ ಮಾಡಬಹುದು ಖದೀಮರು!