ಈ ಕಾರಣಕ್ಕೆ ಬೆಂಗಳೂರು ನಿವಾಸಿ ಮನೆ ಬಾಡಿಗೆ 80 ಸಾವಿರ ರೂ, ಕಣ್ತೆರೆದು ನೋಡಲು ಹೇಳಿದ ಜನ!
ಬೆಂಗಳೂರು ನಗರದಲ್ಲಿ ಕೆಲಸ ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು. ಆದರೆ ಮನೆ ಬಾಡಿಗೆ ಪಡೆಯುವುದು ಸುಲಭದ ಮಾತಲ್ಲ. ಇದೀಗ ಬೆಂಗಳೂರು ನಿವಾಸಿಯೊಬ್ಬ ತಿಂಗಳಿಗೆ 80,000 ರೂಪಾಯಿ ಮನೆ ಬಾಡಿಗೆ ಕಟ್ಟುತ್ತಿದ್ದಾರೆ. ಒಂದೇ ಒಂದು ಕಾರಣಕ್ಕೆ ಈತ ಈ ದುಬಾರಿ ಮನೆಯಲ್ಲಿ ವಾಸವಿದ್ದಾನೆ.
ಬೆಂಗಳೂರು(ಜೂ.12) ಬೆಂಗಳೂರು ನಗರದಲ್ಲಿ ಮನೆ ಬಾಡಿಗೆ ಪಡೆಯುವುದು ಸಾಹಸ. ಬಜೆಟ್‌ನಲ್ಲಿದ್ದರೆ ಮನೆ ಸರಿ ಇರಲ್ಲ. ಸರಿಯಾದ ಮನೆಗೆ ಬಜೆಟ್ ಇರಲ್ಲ. ಇವರೆಡರ ಮಧ್ಯದಲ್ಲಿ ಮನೆಗೆ ಬಾಡಿಗೆ ಪಡೆದರೆ ಕಿರಿಕಿರಿ, ಸಮಸ್ಯೆಗಳು ಒಂದೆರೆಡಲ್ಲ. ಇನ್ನು ದುಬಾರಿ ಬಾಡಿಗೆ ಹಲವು ಬಾರಿ ಸುದ್ದಿಯಾಗಿದೆ. ತಿಂಗಳಿಗೆ 40 ಸಾವಿರ, 50 ಸಾವಿರದ ಬಾಡಿಗೆ ಮನೆಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಇಲ್ಲೊಬ್ಬ ಬೆಂಗಳೂರು ನಿವಾಸಿ ಪ್ರತಿ ತಿಂಗಳು 80,000 ರೂಪಾಯಿ ಬಾಡಿಗೆ ಕಟ್ಟುತ್ತಿರುವುದು ಬಹಿರಂಗವಾಗಿದೆ. ಆದರೆ ತಿಂಗಳಿಗೆ ಇಷ್ಟೊಂದು ದುಬಾರಿ ಬಾಡಿಗೆ ಕಟ್ಟುತ್ತಿರುವುದಕ್ಕೆ ಈತನಿಗೆ ಯಾವುದೇ ದುಗುಡ, ಪಶ್ಚಾತಾಪವಿಲ್ಲ.
ಅನೀಶ್ ಝಾ ಅನ್ನೋ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಈ ಕುರಿತು ಪೋಸ್ಟ್ ಒಂದು ಬಾರಿ ವೈರಲ್ ಆಗಿದೆ. 26 ವರ್ಷದ ಅನೀಶ್ ಝಾ ತನ್ನ ದುಬಾರಿ ಬಾಡಿಗೆ ಕುರಿತು ಮನಿಕಂಟ್ರೋಲ್ ಮಾಧ್ಯಮದ ಜೊತೆ ಮಾತನಾಡಿದ್ದಾನೆ. ಬೆಂಗಳೂರಲ್ಲಿ 30 ರಿಂದ 50 ಸಾವಿರದೊಳಗೆ ಅತ್ಯುತ್ತಮ ಬಾಡಿಗೆ ಮನೆಗಳನ್ನು ಪಡೆಯಬಹುದಲ್ವೇ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನೀಶ್ ಝಾ, ನಾನು 80,000 ರೂಪಾಯಿ ಬಾಡಿಗೆ ನೀಡುತ್ತಿದ್ದೇನೆ. ಆದರೆ ಈ ಮನೆಗೆ ಅಷ್ಟು ದುಡ್ಡು ಸರಿಯಾಗಿದೆ. ಕಾರಣ ಈ ಮನೆಯಿಂದ ಹೊರಗೆ ನೋಡಿದರೆ ಅತ್ಯುತ್ತಮ ಸೀನರಿ ಇದೆ. ಹಸಿರಿನಿಂದ ಕಂಗೊಳಿಸುತ್ತಿದೆ ಎಂದಿದ್ದಾನೆ.
ಕಟ್ಟಡ ಬಾಡಿಗೆ ನೀಡಿದ ವಿರಾಟ್ ಕೊಹ್ಲಿ, ಪ್ರತಿ ತಿಂಗಳ ಬಾಡಿಗೆ 8.85 ಲಕ್ಷ ರೂ!
ನಾನು ಹಣಕ್ಕಿಂತ ಸಮಯಕ್ಕೆ ಬೆಲೆಕೊಡುತ್ತೇನೆ. ಹೀಗಾಗಿ 80 ಸಾವಿರ ರೂಪಾಯಿ ಬಾಡಿಗೆ ಕೋಡೋದರಲ್ಲಿ ಯಾವುದೇ ತಪ್ಪಿಲ್ಲ. ನನ ಕಚೇರಿಗೂ ಮನೆಗೂ ಕೇವಲ 15 ನಿಮಿಗಳ ಅಂತರ. ಇದರಿಂದ ನಾನು ಹೆಚ್ಚು ಪ್ರಯಾಣ ಮಾಡಿ ಆಯಾಸ ಪಡಬೇಕಿಲ್ಲ. ಮನೆಯಲ್ಲಿ ಕಾಲಕಳೆಯಲು ಹೆಚ್ಚಿನ ಸಮಯ ಸಿಗಲಿದೆ. ನಾನು ನೋಯ್ಡಾದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇನೆ. ನೋಯ್ಡಾದಿಂದ ದೆಹಲಿಗೆ ಕೆಲಸಕ್ಕೆ ತೆರಳುತ್ತಿದ್ದ ನನಗೆ ಪ್ರಯಾಣ, ಸಮಯದ ಬೆಲೆ ಚೆನ್ನಾಗಿ ಅರಿವಿದೆ. ಹೀಗಾಗಿ ನನ್ನ ಆಸಕ್ತಿ, ಕಚೇರಿ ಎಲ್ಲದ್ದಕ್ಕೂ ಸರಿಯಾಗಿ ಈ ಮನೆ ಸಿಕ್ಕಿದೆ ಎಂದು ಹೇಳಿದ್ದಾನೆ.
ಮನೆಯಿಂದ 3 ನಿಮಿಷ ದೂರದಲ್ಲಿ ಮೆಟ್ರೋ ಸೌಲಭ್ಯವಿದೆ. ನೀರು, ವಿದ್ಯುತ್ ಹೀಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾನೆ. ಈತನ ಸೋಶಿಯಲ್ ಮೀಡೀಯಾ ಪೋಸ್ಟ್‌ಗೆ ಹಲವು ಬೆಂಗಳೂರಿಗರು ಪ್ರತಿಕ್ರಿಯಿಸಿದ್ದಾರೆ. ಕೇವಲ ಸೀನರಿಗಾಗಿ, ಸಮಯಕ್ಕೆ ಈ ಮನೆಯಲ್ಲಿ ಉಳಿದುಕೊಳ್ಳುದಕ್ಕಿಂತ ಕಣ್ತೆರೆದು ನೋಡಿ. 80,000 ರೂಪಾಯಿಗೆ ಇಡೀ ಭಾರತ ಸುತ್ತ ಬಹುದು. ಪ್ರಾಕೃತಿಕ ಸೌಂದರ್ಯ ಸವಿಯಬಹುದು ಎಂದು ಸಲಹೆ ನೀಡಿದ್ದಾರೆ. ಇದಕ್ಕಿಂತ ಉತ್ತಮ ಸೀನರಿ ಇರುವ ಸ್ಥಳಗಳು, ಮನೆಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಯಾರಿಗೆ ಹೇಳೋಣ ಬೆಂಗಳೂರಿನ ಮನೆ ಬಾಡಿಗೆ? 25 ಲಕ್ಷ ರೂ ಡಿಪಾಸಿಟ್, 2.5 ಲಕ್ಷ ರೆಂಟ್‌ಗೆ ದಂಗಾದ ಜನ!