ಗುರುಗ್ರಾಮದ ಅಪಾರ್ಟ್‌ಮೆಂಟ್ ಸರ್ವೀಸ್ ಲಿಫ್ಟ್ ಬದಲಿಗೆ ಸಾಮಾನ್ಯ ಲಿಫ್ಟ್‌ಗಳನ್ನು ಬಳಸಿದ್ದಕ್ಕಾಗಿ ಮನೆಕೆಲಸದವರಿಗೆ ದಂಡ ವಿಧಿಸಿದ್ದು, ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನವದೆಹಲಿ (ಫೆ.22): ಗುರುಗ್ರಾಮ್‌ನ ಅಪಾರ್ಟ್‌ಮೆಂಟ್ ಸರ್ವೀಸ್ ಲಿಫ್ಟ್ ಬದಲಿಗೆ ಮುಖ್ಯ ಲಿಫ್ಟ್ ಬಳಸಿದ್ದಕ್ಕಾಗಿ ಮನೆಕೆಲಸದವರಿಗೆ ಹಾಗೂ ಡೆಲಿವರಿ ಸ್ಟಾಫ್‌ಗಳಿಗೆ ದಂಡ ವಿಧಿಸಿದೆ. ರೆಡ್ಡಿಟ್‌ನಲ್ಲಿ ಯೂಸರ್‌ಗಳು ನೋಟಿಸ್ ಮತ್ತು ದಂಡದ ರಶೀದಿಗಳ ಚಿತ್ರಗಳನ್ನು ಹಂಚಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದ್ದು, ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಪಾರ್ಟ್‌ಮೆಂಟ್‌ನ ಒಳಗೆ ಅಂಟಿಸಲಾದ ನೋಟಿಸ್‌ನಲ್ಲಿ ಎಲ್ಲಾ ಮನೆಕೆಲಸದವರು ಮತ್ತು ಡೆಲಿವರಿ ಸಿಬ್ಬಂದಿಗೆ ಸೇವಾ ಲಿಫ್ಟ್ ಅನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. "ಎಲ್ಲಾ ಮನೆಕೆಲಸದವರು ಮತ್ತು ಡೆಲಿವರಿ ಸ್ಟಾಫ್, ದಯವಿಟ್ಟು ಸೇವಾ ಲಿಫ್ಟ್ ಅನ್ನು ಮಾತ್ರ ಬಳಸಿ" ಎಂದು ಬರೆಯಲಾಗಿದೆ. ಇವರ ಈ ನಿಯಮವು ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ಬರುವ ವ್ಯಕ್ತಿಗಳಿಗೆ ಪ್ರಧಾನ ಲಿಫ್ಟ್ ಬಳಕೆಯನ್ನು ನಿಷೇಧಿಸಿದ್ದಂತೆ ಕಂಡು ಬಂದಿದೆ.ಅದರೊಂದಿಗೆ ಹೌಸಿಂಗ್ ಸೊಸೈಟಿಯ ಬಳಹೆ ಇರುವ ಪತ್ಯೇಕ ಬಳಕೆಯ ನೀತಿಯ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ.
ಆ ಪೋಸ್ಟ್‌ನಲ್ಲಿ ಕಾರ್ಮಿಕರಿಗೆ ನೀಡಲಾದ ದಂಡ ರಶೀದಿಗಳ ಚಿತ್ರಗಳೂ ಸೇರಿವೆ. ಅಂತಹ ಒಂದು ರಶೀದಿಯಲ್ಲಿ ಹೆಸರು ವಿಭಾಗದಲ್ಲಿ "ಸೇವಕಿ" ಎಂದು ಉಲ್ಲೇಖಿಸಲಾದ ಕಾಜಲ್ ಎಂಬ ಮಹಿಳೆಗೆ "ನಿಯಮಗಳನ್ನು ಪಾಲಿಸದಿದ್ದಕ್ಕಾಗಿ" ₹100 ದಂಡ ವಿಧಿಸಲಾಗಿದೆ ಎಂದು ತೋರಿಸಲಾಗಿದೆ.
ಈ ಕ್ರಮವು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಲವರು ಇದನ್ನು ತಾರತಮ್ಯ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದು, ಗುರುಗ್ರಾಮ್ ಹೆಚ್ಚಿನ ಸೊಸೈಟಿಗಳಲ್ಲಿ ಇಂಥ ನೋಟಿಸ್‌ಗಳನ್ನು ಕಾಣಬಹುದು. ಆದರೆ, ದಂಡ ವಿಧಿಸಿರೋದನ್ನು ನಾನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಬರೆದಿದ್ದಾರೆ.
ವಿವಿಧ ಉಲ್ಲಂಘನೆಗಳಿಗೆ ಸೊಸೈಟಿಯು ದಂಡ ವಿಧಿಸುತ್ತದೆ, ಅವುಗಳಲ್ಲಿ ಕೆಲವು ಅತಿಯಾದ ಮತ್ತು ಅಸಾಮಾನ್ಯವೆಂದು ಅನೇಕ ಬಳಕೆದಾರರು ಟೀಕಿಸಿದ್ದಾರೆ. ಪಟ್ಟಿ ಮಾಡಲಾದ ಅಪರಾಧಗಳಲ್ಲಿ ಬಾಲ್ಕನಿಗಳಲ್ಲಿ ಲಾಂಡ್ರಿ ನೇತುಹಾಕುವುದು, ಸಾಕುಪ್ರಾಣಿಗಳನ್ನು ಮುಖ್ಯ ಲಿಫ್ಟ್ ಅಥವಾ ಉದ್ಯಾನದ ಮೂಲಕ ಕರೆದೊಯ್ಯುವುದು ಮತ್ತು ಆಕ್ರಮಣಕಾರಿ ಸಾಕುಪ್ರಾಣಿಗಳ ಮುಖಕ್ಕೆ ಏನನ್ನೂ ಕಟ್ಟಿಹಾಕದೆ ತೆಗೆದುಕೊಂಡು ಹೋಗುವುದು ಇವೆಲ್ಲದಕ್ಕೂ ದಂಡ ವಿಧಿಸಲಾಗುತ್ತದೆ.
ಕರ್ಮ ರಿರ್ಟನ್ಸ್: ಅಪಘಾತಕ್ಕಿಡಾದವನ ಹಾಗೇ ಬಿಟ್ಟು ಬೈಕ್ ಜೊತೆ ಎಸ್ಕೇಪ್ ಆಗುವಾಗ ಅಪಘಾತ: ಓರ್ವ ಕೋಮಾಗೆ
ಬಾಲ್ಕನಿಗಳಲ್ಲಿ ಲಾಂಡ್ರಿ ನೇತುಹಾಕಿದ್ದಕ್ಕಾಗಿ ದಂಡವನ್ನು ಟೀಕಿಸಿದ ಯೂಸರ್‌ವೊಬ್ಬರು, "ಅತ್ಯಂತ ಅಸಂಬದ್ಧ ನಿಯಮವೆಂದರೆ ಸಂಖ್ಯೆ 5. ನನ್ನ ಪ್ರಕಾರ, ಪರ್ಯಾಯವೇನು?" ಎಂದು ಬರೆದಿದ್ದಾರೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಇದು ಸಾಮಾನ್ಯ. ಮುಖ್ಯ ಲಿಫ್ಟ್‌ಅನ್ನು ಕೆಲಸಗಾರರು ಬಳಸುತ್ತಿದ್ದರೆ ಅವರನ್ನು ಲಿಫ್ಟ್‌ನಿಂದ ಹೊರಹಾಕಿದ ಘಟನೆಯನ್ನು ನಾನ ನೋಡಿದ್ದೇನೆ ಎಂದಿದ್ದಾರೆ.
Watch | ದೆಹಲಿಯ ಜನನಿಬಿಡ ರಸ್ತೆಯಲ್ಲಿ ಬೆಂಕಿಯ ಮಳೆ, ಬೆಚ್ಚಿಬಿದ್ದ ವಾಹನ ಸವಾರರು ವಿಡಿಯೋ ವೈರಲ್!
"ನಮ್ಮ ಸೊಸೈಟಿಯ ಲಿಫ್ಟ್‌ಗಳು ಯಾವಾಗಲೂ ಗುಟ್ಕಾ ಕಲೆಗಳು ಮತ್ತು ತಂಬಾಕಿನಿಂದ ತುಂಬಿರುತ್ತಿದ್ದವು. ಇಲ್ಲಿ ಕೆಲಸದವರು ಮತ್ತು ಡ್ರೈವರ್‌ಗಳ ವಿರುದ್ಧ ಏನೂ ಇಲ್ಲ. ಕೊನೆಗೆ ನಾವು ಲಿಫ್ಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಇರಿಸಿದಾಗ ಅದು ಚಾಲಕರು ಮತ್ತು ಸೇವಕಿಯರು ಎಂದು ಅರಿತುಕೊಂಡೆವು" ಎಂದು ನಿಯಮಗಳನ್ನು ಸಮರ್ಥಿಸಿಕೊಳ್ಳುವ ಬಳಕೆದಾರರು ಬರೆದಿದ್ದಾರೆ.
