ಗುರ್ಗಾಂವ್‌ನ NH8 ರಲ್ಲಿ ವೆಲ್ಡಿಂಗ್ ಕಿಡಿಗಳು ವಾಹನಗಳ ಮೇಲೆ ಬಿದ್ದು ಬೆಂಕಿ ಮಳೆಯಂತೆ ಉದುರುತ್ತಿರುವ ವಿಡಿಯೋ ವೈರಲ್ ಆಗಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರಿಂದ ಈ ಅವಘಡ ಸಂಭವಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆಡೆಮಾಡಿದೆ.

ನವದೆಹಲಿ (ಡಿ.31): ವಾಹನಗಳಿಂದ ಕಿಕ್ಕಿರಿದು ತುಂಬಿ ತುಳುಕುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿಯ ಮಳೆ ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಉಪನಗರ ಹರಿಯಾಣದ ಗುರ್ಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಹೋಗುತ್ತಿರುವ ವಾಹನಗಳ ಮೇಲೆ ಬಿಳುತ್ತಿರುವ ಬೆಂಕಿಯ ಕಿಡಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೀವ್ರ ಚಳಿಯಿಂದ ತತ್ತರಿಸಿರುವ ದೆಹಲಿಯಲ್ಲಿ ಬೆಂಕಿಯ ಮಳೆ ಎಲ್ಲಿಂದ ಬಂತಪ್ಪ ಅಂತಾ ಅಂತೀರಾ? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

 ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಣಿಜ್ಯ ಜಾಹೀರಾತು ಫಲಕ ಅಳವಡಿಸಲು ವೆಲ್ಡಿಂಗ್ ಕೆಲಸ ಮಾಡಲಾಗುತ್ತಿದೆ. ಕೆಳಗಡೆ ವಾಹನಗಳು ಓಡಾಡುತ್ತಿವೆ. ಯಾವುದೇ ಸುರಕ್ಷತೆ ಕ್ರಮ ಇಲ್ಲದೆ ವೆಲ್ಡಿಂಗ್ ಮಾಡಲಾಗುತ್ತಿದ್ದು, ಅದರ ಬೆಂಕಿಯ ಕಿಡಿಗಳು ವಾಹನಗಳ ಮೇಲೆ ಮಳೆ ಹನಿಗಳಂತೆ ಉದುರುತ್ತಿರುವುದ ವಿಡಿಯೋ ದೃಶ್ಯದಲ್ಲಿ ಸೆರೆಯಾಗಿದೆ. ಚಲಿಸುತ್ತಿದ್ದ ಕಾರು, ಬಸ್‌ಗಳಲ್ಲದೇ ಬೈಕ್ ಗಳ ಮೇಲೆ ಕಿಡಿ ಬಿದ್ದಿದೆ. ಬೈಕ್‌ ಚಾಲಕ ಮೇಲೆ ಕಿಡಿ ಬಿದ್ದಿದ್ದು ಕೆಲವರಿಗೆ ತಲೆ ಬಟ್ಟೆ ಮೇಲೆ ಬಿದ್ದು ಸುಟ್ಟಿವೆ.

Watch | ಒಂಟಿಯಾಗಿ ಕಂಡರೆ ಕೆನ್ನೆಗೆ ಚಪ್ಪರಿಸಿ ಪರಾರಿ, ಯುವಕನ ವರ್ತನೆ ಕಂಡು ಪೊಲೀಸರೇ ದಂಗು!

ಘಟನೆಯ ವಿಡಿಯೋವನ್ನು ವೈದ್ಯರೊಬ್ಬರು ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಗುರ್ಗಾಂವ್‌ನ NH8 ನಲ್ಲಿನ ದೃಶ್ಯಾವಳಿ. ಸಂಚಾರ ವ್ಯತ್ಯಯ ಅಥವಾ ನಿಯಂತ್ರಣವಿಲ್ಲ. ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲ. ಅನಾಹುತವಾದರೆ ಯಾರು ಹೊಣೆ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಭದ್ರತೆಯ ಲೋಪದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೆ ಈ ರೀತಿ ಆಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

Scroll to load tweet…