ಹಮಾಸ್ ರೀತಿಯಲ್ಲೇ ಭಾರತದ ಮೇಲೆ ದಾಳಿ ಮಾಡ್ತೇವೆ, ಖಲಿಸ್ತಾನಿ ನಾಯಕ ಗುರುಪತ್ವಂತ್ ಪನ್ನು ಎಚ್ಚರಿಕೆ!
ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ರೀತಿಯಲ್ಲಿಯೇ ಭಾರತದ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಫಾರ್ ಜಸ್ಟೀಸ್ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.
ನವದೆಹಲಿ (ಅ.10): ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ ಮಾದರಿಯಲ್ಲಿಯೇ ಭಾರತದ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಫಾರ್ ಜಸ್ಟೀಸ್‌ನ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಎಚ್ಚರಿಸಿದ್ದಾನೆ. ಈ ಕುರಿತಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. 40 ಸೆಕೆಂಡ್‌ನ ವಿಡಿಯೋ ಇದಾಗಿದ್ದು, ಇದರಲ್ಲಿ ಸ್ವತಃ ಗುರುಪತ್ವಂತ್ ಸಿಂಗ್ ಪನ್ನು ಮಾತನಾಡಿದ್ದಾನೆ. 'ಮೋದಿ, ಇಸ್ರೇಲ್ ಇಂದು ಪ್ಯಾಲೆಸ್ತೇನ್‌ನಿಂದ ಆಕ್ರಮಣಕ್ಕೆ ಒಳಗಾಗಿದೆ. ಇಸ್ರೇಲ್ ಮಾದರಿಯಲ್ಲಿಯೇ ಭಾರತ ಪಂಜಾಬ್‌ನ ಮೇಲೆ ಹಿಡಿತ ಸಾಧಿಸಿದೆ. ಭಾರತ ಹಿಂಸೆ ಮಾಡಿದರೆ, ನಾವೂ ಹಿಂಸೆಯನ್ನು ಆರಂಭ ಮಾಡುತ್ತೇವೆ. ಹಾಗೇನಾದರೂ ಭಾರತ ಪಂಜಾಬ್‌ನ ಮೇಲೆ ತನ್ನ ಅತಿಕ್ರಮಣವನ್ನು ಮುಂದುವರಿಸಿದರೆ, ಇದಕ್ಕೆ ಖಂಡಿತವಾಗಿಯೂ ಪ್ರತಿಕ್ರಿಯೆ ಇರುತ್ತದೆ. ಇದಕ್ಕೆ ಮೋದಿ ಹಾಗೂ ಭಾರತವೇ ಜವಾಬ್ದಾರಿಯಾಗಿರುತ್ತದೆ. ಎಸ್‌ಎಫ್‌ಜೆ ಬ್ಯಾಲಟ್‌ನ ಮೇಲೆ ನಂಬಿಕೆ ಇಟ್ಟಿದೆ. ವೋಟ್‌ನ ಮೇಲೆ ನಂಬಿಕೆ ಇಟ್ಟಿದೆ. ಪಂಜಾಬ್‌ನ ಪ್ರತ್ಯೇಕ ಮಾಡುವ ದಿನ ಹತ್ತಿರವಾಗಿದೆ. ಬ್ಯಾಲಟ್ ಬೇಕೋ? ಬುಲೆಟ್ ಬೇಕೋ? ಭಾರತ ಆಯ್ಕೆ ನಿಮ್ಮದು' ಎಂದು ಗುರುಪತ್ವಂತ್ ಎಚ್ಚರಿಕೆ ನೀಡಿದ್ದಾರೆ.
Isreal Dispatch: ಗಾಜಾಕ್ಕೆ ವಿದ್ಯುತ್, ಇಂಧನ, ಆಹಾರ ಬಂದ್; ಈವರೆಗೂ 1 ಸಾವಿರ ಟನ್ ಬಾಂಬ್ ಗಿಫ್ಟ್!
Israel Palestine War: ಬಂದೂಕು ಹಿಡಿದು ರಣಾಂಗಣಕ್ಕೆ ಕಾಲಿಟ್ಟ ಇಸ್ರೇಲ್‌ನ 61 ವರ್ಷದ ಮಾಜಿ ಯೋಧ ಯೈರ್ ಗೋಲನ್!