ಹೊಸದಾಗಿ ಸಿಕ್ಕ ಗರ್ಲ್‌ಫ್ರೆಂಡ್ ಜೊತೆ ಜೀವನ ಮಾಡುವುದಕ್ಕಾಗಿ ಕಟ್ಟಿಕೊಂಡ ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಅಪಘಾತದ ಕತೆ ಕಟ್ಟಿದ ಫಿಸಿಯೋಥೆರಪಿಸ್ಟ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದಾಗಿ ಸಿಕ್ಕ ಗರ್ಲ್‌ಫ್ರೆಂಡ್ ಜೊತೆ ಜೀವನ ಮಾಡುವುದಕ್ಕಾಗಿ ಕಟ್ಟಿಕೊಂಡ ಹೆಂಡತಿ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಅಪಘಾತದ ಕತೆ ಕಟ್ಟಿದ ಫಿಸಿಯೋಥೆರಪಿಸ್ಟ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 32 ವರ್ಷದ ಬೊಡಾ ಪ್ರವೀಣ್ ಬಂಧಿತ ಆರೋಪಿ. ಈತ ಪತ್ನಿ ಮಕ್ಕಳ ಸಾವಿನ ನಂತರ ತನ್ನ ಗೆಳತಿ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದ. ಆದರೆ ಕೊಲೆ ನಡೆದ 45 ದಿನಗಳ ನಂತರ ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರವೀಣ್‌ಗೆ ವಿವಾಹದನ ಮಥರ ಸೋನಿ ಫ್ರಾನ್ಸಿಸ್ ಎಂಬಾಕೆಯೊಂದಿಗೆ ಸ್ನೇಹ ಬೆಳೆದಿದೆ. ಇದಾದ ನಂತರ ಆಕೆಯೊಂದಿಗೆ ಬಾಳುವುದಕ್ಕಾಗಿ ಆಕೆಯ ಒತ್ತಾಯದ ಮೇರೆಗೆ ತನ್ನ 29 ವರ್ಷದ ಪತ್ನಿ ಕುಮಾರಿ ಪುತ್ರಿಯರಾದ 5 ವರ್ಷದ ಕೃಷಿಕಾ ಹಾಗೂ 3 ವರ್ಷದ ಕೃತಿಕಾ ಎಂಬ ಮಕ್ಕಳನ್ನು ಕೊಲೆ ಮಾಡಿದ್ದಾನೆ . ಮೊದಲಿಗೆ ಪತ್ನಿ ಕುಮಾರಿಗೆ ಹೈಡೋಸ್ ಅನಸ್ತೇಸಿಯಾ ನೀಡಿ ಕೊಲೆ ಮಾಡಿದ್ದಾನೆ. ನಂತರ ಇಬ್ಬರು ಮಕ್ಕಳನ್ನು ತನ್ನ ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ ಅವರ ಬಾಯಿ ಹಾಗೂ ಮೂಗನ್ನು ಮುಚ್ಚಿ ಉಸಿರುಕಟ್ಟಿಸಿ ಕೊಲೆ ಮಾಡಿದ್ದಾನೆ..
ತಲೆಗೆ ಮಸಾಜ್ ಮಾಡಲು ನಿರಾಕರಿಸಿದ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತಿ!
ಇದಾದ ನಂತರ ಆಸ್ಪತ್ರೆಗೆ ದಾಖಲಾದ ಪ್ರವೀಣ್ ಅಪಘಾತವಾಗಿದೆ ಎಂದು ಹೇಳೀ ತನಗಾದ ಸಣ್ಣಪುಟ್ಟ ಗಾಯಗಳಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ನಂತರ ಹೈದರಾಬಾದ್‌ಗೆ ಮರಳಿ ಸಹಜ ಜೀವನ ನಡೆಸಲು ಶುರು ಮಾಡಿದ್ದಾನೆ ಎಂದು ಕಮ್ಮಂ ಜಿಲ್ಲೆಯ ರಘುನಾಥಪಾಲೆಂನ ಎಸ್‌ಹೆಚ್‌ಒ ಕೊಂಡಲಾ ರಾವ್ ಹೇಳಿದ್ದಾರೆ.
ಕುಮಾರಿ ದೇಹದಲ್ಲಿ ಇಂಜೆಕ್ಷನ್ ಚುಚ್ಚಿದ್ದ ಗುರುತು ನೋಡಿ ನಾವು ಪ್ರಾರಂಭದಲ್ಲಿ ಅನುಮಾನಪಟ್ಟಿದ್ದೆವು. ಆಕೆಯ ದೇಹದಲ್ಲಾಗಲಿ ಮಕ್ಕಳ ದೇಹದಲ್ಲಾಗಲಿ ಬೇರೆಲ್ಲೂ ಗಾಯಗಳಿರಲಿಲ್ಲ, ಅಲ್ಲದೇ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರಿಸಿದ್ದೆವು. ಅದೇ ದಿನ ತನಿಖಾ ತಂಡವೊಂದು ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು. ಆದರೆ ಪ್ರವೀಣ್ ಹೇಳಿದಷ್ಟು ಗಂಭೀರವಾದ ಅಪಘಾತ ಅಲ್ಲಿ ನಡೆದಿರಲಿಲ್ಲ, ನಾವು ಇಡೀ ಕಾರನ್ನು ಪರಿಶೀಲಿಸಿದಾಗ ನಮಗೆ ಅಲ್ಲಿ ಸಿರಿಂಜ್ ಒಂದು ಸಿಕ್ಕಿತ್ತು. ಆದರೆ ಅದು ಖಾಲಿ ಆಗಿತ್ತು. ಹಾಗೂ ನಾವು ಅದನ್ನು ಘಟನೆಯ ಸುಳಿವಾಗಿ ಪರಿಗಣಿಸಿದ್ದೆವು ಎಂದು ಕೊಂಡಾಲ ರಾವ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ಫೇಸ್ ಬುಕ್ ಗೆಳತಿಗಾಗಿ ಹೆತ್ತವರನ್ನೇ ಕೊಂದ ಪಾಪಿ
ಇದಾದ ನಂತರ ಪೊಲೀಸ್ ತಂಡ ಸಿರಿಂಜ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇತ್ತ ಪ್ರವೀಣ್ ಯಾವುದೇ ಹತಾಶೆ ಇಲ್ಲದೇ ಸಹಜ ಜೀವನ ನಡೆಸುತ್ತಿದ್ದ, ಈತ ಹೈದರಾಬಾದ್‌ನ ಅತ್ತಾಪುರದಲ್ಲಿ ಇರುವ ಜರ್ಮಂಟೆನ್ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ಮೂಲಗಳ ಪ್ರಕಾರ ಈತ ಪ್ರತ್ಯೇಕ ಬಾಡಿಗೆ ಮನೆ ಮಾಡಿ ತನ್ನ ಗೆಳತಿ ಸೋನಿ ಫ್ರಾನ್ಸಿಸ್ ಜೊತೆ ಜೀವನ ಮಾಡ್ತಿದ್ದ, ಈ ಸೋನಿ ಫ್ರಾನ್ಸಿಸ್ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಳು.
ಇತ್ತ ಪ್ರವೀಣ್‌ಗೆ ತನ್ನ ಹೆಂಡತಿ ಮಕ್ಕಳ ಸಾವಿನ ಬಗ್ಗೆ ಯಾವುದೇ ಪಶ್ಚಾತಾಪವಿರಲಿಲ್ಲ, ಆತ ತಾನು ಸಿಕ್ಕಿಬೀಳಲ್ಲ, ತಾನು ಸಂಪೂರ್ಣ ಸುರಕ್ಷಿತವಾಗಿದ್ದೇನೆ ಎಂದು ಭಾವಿಸಿದ್ದ. ನಾವು ಕೂಡ ಸುಮಾರು 45 ದಿನಗಳವರೆಗೆ ಆತನನ್ನು ಕರೆದಿರಲಿಲ್ಲ, ನಾವು ಇದನ್ನು ಮೊದಲು ಅಪಘಾತ ಪ್ರಕರಣ ಎಂದು ದೂರು ದಾಖಲಿಸಿದ್ದರಿಂದ ಆತನೂ ಈ ಪ್ರಕರಣದಿಂದ ತಾನು ಪಾರಾದೇ ಎಂದೇ ಭಾವಿಸಿದ್ದ. ಆದರೆ ನಮಗೆ ಯಾವಾಗ ಸಿರಿಂಜ್ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂತೋ ನಾವು ಆತನನ್ನು ಅತ್ತಾಪುರ ಪ್ರದೇಶದಲ್ಲಿ ಬಂಧಿಸಿದೆವು. ತನಿಖೆ ವೇಳೆ ಆತನ ಆಟಗಳೆಲ್ಲವೂ ಹೊರ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಕೊಂಡಾಲ ರಾವ್ ಹೇಳಿದ್ದಾರೆ.
ಒಟ್ಟಿನಲ್ಲಿ ತನ್ನ ಕರುಳ ಕುಡಿಗಳು ಪುಟ್ಟ ಪುಟ್ಟ ಮಕ್ಕಳು ಎಂಬುದನ್ನೂ ಕೂಡ ನೋಡದೇ ತಾನು ಕಲಿತ ವಿದ್ಯೆಯನ್ನು ಕೈ ಹಿಡಿದ ಮಡದಿ ಮಕ್ಕಳ ಕೊಲೆಗೆ ಬಳಸಿದ ಈ ಪಾಪಿ ಮೃಗಕ್ಕೆ ಮದುವೆ ಸಾಂಸಾರ ಯಾಕಾದರೂ ಬೇಕಿತ್ತೋ?
