ಗುಜರಾತ್‌ನ ಕೇಖ್ರಿ ತೆಹಸಿಲ್ ವ್ಯಾಪ್ತಿಯ ಸೆವಡಾ ಅಗೋಲ್ ಗ್ರಾಮದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪಂಚಾಯತಿ ಅಧ್ಯಕ್ಷನ ಸಂಬಂಧಿಯ ಮದುವೆಯ ಲಕ್ಷಗಟ್ಟಲೆ ಮೊತ್ತದ ನೋಟುಗಳ ಮಳೆಗೆರೆಯಲಾಗಿದೆ.
ನವದೆಹಲಿ (ಫೆ.18): ಬಹುಶಃ ಮಧ್ಯಮ ವರ್ಗವೇ ಹೆಚ್ಚಿರುವ ಭಾರತದಲ್ಲಿ ಕಾಣಸಿಗುವ ಬಹಳ ಅಪರೂಪದ ಹಾಗೂ ಶಾಕಿಂಗ್ ವಿಡಿಯೋ ಇದು. ಭಾರತದಲ್ಲಿ ಮದುವೆ ಸಂಪ್ರದಾಯ ಎಂದರೆ, ಅದು ದುಬಾರಿ ಕೆಲಸ. ಗುಜರಾತ್‌ನಲ್ಲಿ ನಡೆದ ಮದುವೆಯೊಂದರ ಬಹಳ ಅಚ್ಚರಿಯ ವಿಡಿಯೋ ಇದಾಗಿದೆ. ಇದರಲ್ಲಿ ಮನೆಗಳ ಟೆರಸ್ ಮೇಲಿನಿಂದ ವರನ ಸಂಬಂಧಿಗಳು 500 ರೂಪಾಯಿ ಮುಖಬೆಲೆಯ ಲಕ್ಷಾಂತರ ನೋಟುಗಳನ್ನು ಗಾಳಿಗೆ ಹಾರಿಸುತ್ತಿದ್ದರು. ಇದನ್ನು ನೋಡಿದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಜನರು ಒಬ್ಬರ ಮೇಲೊಬ್ಬರು ಬಿದ್ದು ನೋಟುಗಳನ್ನು ಹೆಕ್ಕುತ್ತಿದ್ದರು. ಇನ್ನೂ ಕೆಲವರು ನೋಟುಗಳು ನೆಲಕ್ಕೆ ಬೀಳುವ ಮುನ್ನವೇ ಅವುಗಳನ್ನು ಹಿಡಿದುಕೊಳ್ಳುತ್ತಿದ್ದರು. ಗುಜರಾತ್‌ನ ಕೇಖ್ರಿ ತೆಹಸಿಲ್‌ನ ಸೆವಡಾ ಅಗೋಲ್ ಗ್ರಾಮದಲ್ಲಿ ಊರ ಪಂಚಾಯತಿ ಅಧ್ಯಕ್ಷನ ಸಂಬಂಧಿಯ ಮದುವೆಯ ವೇಳೆ ನೋಟುಗಳನ್ನು ಗಾಳಿಯಲ್ಲಿ ಹಾರಿಸಿ ಸಂಭ್ರಮಪಡಲಾಗಿದೆ. ಗ್ರಾಮದ ಮಾಜಿ ಸರಪಂಚ ಕರೀಂ ಜಾಧವ್ ಅವರ ಪುತ್ರ ರಜಾಕ್ ಮತ್ತು ಅವರ ಸಹೋದರ ರಸೂಲ್ ಅವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ವೀಡಿಯೊದಲ್ಲಿ, ಸಂಬಂಧಿಕರು ಬಾಲ್ಕನಿ ಮತ್ತು ಟೆರೇಸ್‌ನಿಂದ 10 ರಿಂದ 500 ರೂ.ವರೆಗಿನ ನೋಟುಗಳನ್ನು ಎಸೆಯುತ್ತಿರುವುದನ್ನು ಕಾಣಬಹುದಾಗಿದೆ. ಮದುವೆಯ ಮೆರವಣಿಗೆಯ ವೇಳೆ ಹಾಡುಗಳಿಗೆ ನೃತ್ಯ ಮಾಡುತ್ತಲೇ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ಊರಿನವರು ನೋಟಗಳನ್ನು ಹೆಕ್ಕುತ್ತಿರುವ ದೃಶ್ಯಗಳು ಕಂಡಿವೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅನೇಕರನ್ನು ಅಚ್ಚರಿ ನೀಡಿದೆ. ಮದುವೆ ಸಮಾರಂಭಗಳು ಹಾಗೂ ಇತರ ಸಂಭ್ರಮದ ಕಾರ್ಯಕ್ರಮದ ವೇಳೆ ನೋಟುಗಳು ಮತ್ತು ಆಭರಣಗಳನ್ನು ಎಸೆಯುವುದು ಸಾಮಾನ್ಯ ವಿದ್ಯಮಾನವಲ್ಲ. ಕೆಲವು ವರ್ಷಗಳ ಹಿಂದೆ, ಗುಜರಾತ್‌ನ ವಲ್ಸಾದ್‌ನಿಂದ ಚಾರಿಟಿ ಕಾರ್ಯಕ್ರಮವೊಂದರಲ್ಲಿ ಗಾಯಕನ ಮೇಲೆ ಸುಮಾರು 50 ಲಕ್ಷ ರೂ.ಗಳ ಸುರಿದಿದ್ದು ವೈರಲ್ ಆಗಿತ್ತು. ಅದಾದ ಬಳಿಕ ಅಂಥದ್ದೇ ಮತ್ತೊಂದು ವೈರಲ್ ವಿಡಿಯೀ ಇದಾಗಿದೆ.
ಬೆಂಗಳೂರಿನಲ್ಲಿ ದುಡ್ಡಿನ ಸುರಿಮಳೆ: ಹಣ ಎಸೆದ ವ್ಯಕ್ತಿ ಹೇಳಿದ್ದೇನು?
ಇಬ್ಬರು ಹೆಸರಾಂತ ಜಾನಪದ ಗಾಯಕಿಯರಾದ ಗೀತಾ ರಾಬರ್ ಮತ್ತು ಬ್ರಿಜ್‌ರಾಜ್‌ದನ್ ಗಧ್ವಿ ಅವರು ಇಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಜನರು 10, 200 ಮತ್ತು 500 ರೂ ನೋಟುಗಳನ್ನು ಸುರಿದಿದ್ದರು.
ಗಾಯಕನ ಮೇಲೆ ಕಾಂಗ್ರೆಸ್ ನಾಯಕನ ನೋಟಿನ ಸುರಿಮಳೆ
ಬೆಂಗಳೂರಿನಲ್ಲೂ ಆಗಿತ್ತು ಘಟನೆ: ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡ ಇಂಥ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬ ಕೆಆರ್ ಮಾರ್ಕೆಟ್ ಫ್ಲೈಓವರ್‌ನ ಮೇಲೆ ನಿಂತು 10 ರೂಪಾಯಿ ನೋಟುಗಳನ್ನು ಕೆಳಗೆ ಎಸೆದಿದ್ದ. ಅಂದಾಜು 3 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಎಸೆದಿದ್ದು ಸಾಕಷ್ಟು ವೈರಲ್ ಆಗಿತ್ತು.
