ಮೋದಿ ಸರ್‌ನೇಮ್‌ ಟೀಕೆಗೆ ಸಂಭಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಅಪರಾಧಿ ಎನಿಸಿಕೊಂಡಿರುವ ರಾಹುಲ್‌ ಗಾಂಧಿ, ಪ್ರಕರಣದ ಕುರಿತಾಗ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ತೀರ್ಪು ನೀಡಲು ಗುಜರಾತ್ ಹೈಕೋರ್ಟ್ ಸಜ್ಜಾಗಿದೆ.

ಅಹಮದಾಬಾದ್‌ (ಜು.6):'ಮೋದಿ ಸರ್‌ನೇಮ್‌' ಟೀಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾನನಷ್ಟ ಮೊಕದ್ದಮೆಯಲ್ಲಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ನೀಡಲಿದೆ. ಪ್ರಕರಣದ ಹಿಂದಿನ ವಿಚಾರಣೆಯಲ್ಲಿ ರಾಹುಲ್ ಗಾಂಧಿಗೆ ಮಧ್ಯಂತರ ರಕ್ಷಣೆಯನ್ನು ನಿರಾಕರಿಸಿದ ನ್ಯಾಯಾಲಯವು ಅವರ ಮನವಿಯನ್ನು ಪರಿಗಣನೆಯಲ್ಲಿ ಕಾಯ್ದಿರಿಸಿತ್ತು. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿಗೆ ಗುಜರಾತ್‌ ಹೈಕೋರ್ಟ್‌ 2 ವರ್ಷದ ಶಿಕ್ಷೆಯನ್ನು ವಿಧಿಸಿದೆ. ಇದರ ಬೆನ್ನಲ್ಲಿಯೇ ಅವರ ಲೋಕಸಭಾ ಸದಸ್ಯತ್ವ ಕೂಡ ಅನರ್ಹವಾಗಿತ್ತು. ಹಾಗೇನಾದರೂ ಅವರ ಶಿಕ್ಷೆಗೆ ಕೋರ್ಟ್‌ ತಡೆಯಾಜ್ಞೆ ನೀಡಿದಲ್ಲಿ, ಅವರ ಅನರ್ಹತೆ ಕೂಡ ರದ್ದಾಗಲಿದೆ. ಹಾಗೇನಾದರೂ ಅವರ ಶಿಕ್ಷೆಗೆ ತಡೆ ನೀಡದೇ ಇದ್ದಲ್ಲಿ ರಾಹುಲ್ ಗಾಂಧಿ ಅವರು ಗುಜರಾತ್ ಹೈಕೋರ್ಟ್‌ನ ಉನ್ನತ ಪೀಠದ ಮುಂದೆ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಪ್ರಸ್ತುತ, ರಾಹುಲ್ ಗಾಂಧಿ ಸಂಸತ್ ಸದಸ್ಯರಾಗಿ ಎಂಟು ವರ್ಷಗಳ ಕಾಲ ಅಮಾನತಿನಲ್ಲಿರುತ್ತಾರೆ.

Breaking: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ!

Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್‌!