Breaking: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ!

ಮೋದಿ ಸರ್‌ನೇಮ್‌ ಕುರಿತಾಗಿ ಹೇಳಿಕೆ ನೀಡಿ ಜಾತಿ ನಿಂದನೆ ಮಾಡಿದ್ದ ರಾಹುಲ್‌ ಗಾಂಧಿಯನ್ನು ಸೂರತ್‌ ಕೋರ್ಟ್‌ ದೋಷಿ ಎಂದು ತೀರ್ಪು ನೀಡಿತ್ತು. ಇದರ ಹಿನ್ನಲೆಯಲ್ಲಿ ಜನಪ್ರತಿನಿಧಿ ಕಾಯ್ದೆ ಅನ್ವಯ ರಾಹುಲ್‌ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.

Rahul  Gandhi disqualified as member of parliament san

ನವದೆಹಲಿ (ಮಾ.23): ಮೋದಿ ಸರ್‌ನೇಮ್‌ ಕುರಿತಾಗಿ ಹೇಳಿಕೆ ನೀಡುವ ವೇಳೆ ಒಬಿಸಿ ಜಾತಿಗಳ ನಿಂದನೆ ಮಾಡಿದ್ದ ರಾಹುಲ್‌ ಗಾಂಧಿಗೆ ಸೂರತ್‌ ಕೋರ್ಟ್‌ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲಿಯೇ ರಾಹುಲ್‌ ಗಾಂಧಿ ಅವರ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸೂರತ್‌ ಕೋರ್ಟ್‌ ಶಿಕ್ಷೆ ನೀಡಿದ ಬೆನ್ನಲ್ಲಿಯೇ ರಾಹುಲ್‌ ಘಾಂಧಿ ಜಾಮೀನು ಪಡೆದು ದೆಹಲಿಗೆ ವಾಪಸಾಗಿದ್ದರು. ಆದರೆ, ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ರಾಹುಲ್ ಗಾಂಧಿ ಅವರನ್ನು ವಯನಾಡು ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿದೆ ಎಂದು ಲೋಕಸಭಾ ಕಾರ್ಯಾಲಯದಿಂದ ಅಧಿಕೃತ ಆದೇಶ ನೀಡಲಾಗದೆ. ಕ್ರಿಮಿನಲ್‌ ಮೊಕದ್ದಮೆಯಲ್ಲಿ ಅವರು ದೋಷಿ ಎಂದು ತೀರ್ಮಾನವಾಗಿರುವ ಕಾರಣ ಅವರ ಲೋಕಸಭೆ ಸದಸ್ಯತ್ವ ಸ್ಥಾನ ಅನರ್ಹಗೊಂಡಿದೆ.  2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭೆ ಚುನಾವಣೆ ಸಮಾವೇಶದಲ್ಲಿ ಕೆಎಚ್‌  ಮುನಿಯಪ್ಪ ಪರವಾಗಿ ಮತಯಾಚನೆ ಮಾಡುವ ವೇಳೆ ರಾಹುಲ್‌ ಗಾಂಧಿ, ಕಳ್ಳರೆಲ್ಲಾ ಮೋದಿ ಎನ್ನುವ ಸರ್‌ನೇಮ್‌ ಅನ್ನೇ ಯಾಕೆ ಹೊಂದಿರುತ್ತಾರೆ ಎಂದು ಪ್ರಶ್ನೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡುವ ಭರದಲ್ಲಿ ರಾಹುಲ್‌ ಗಾಂಧಿ ಮೋದಿ ಎನ್ನುವ ಇತರೆ ಹಿಂದುಳಿದ ಜಾತಿಯನ್ನು ನಿಂದನೆ ಮಾಡಿದ್ದರು. ಈ ಕುರಿತಾಗಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ ಕೋರ್ಟ್‌ನಲ್ಲಿ ಕ್ರಿಮಿನಲ್‌ ಮಾನಹಾನಿ ಪ್ರಕರಣ ದಾಖಲು ಮಾಡಿದ್ದರು.

ಇದರ ಸೂಕ್ತ ವಿಚಾರಣೆ ಮಾಡಿದ ಸೂರತ್‌ ಕೋರ್ಟ್‌ ಗುರುವಾರ ತನ್ನ ತೀರ್ಪನ್ನು ಪ್ರಕಟ ಮಾಡಿತ್ತು. ರಾಹುಲ್‌ ಗಾಂಧಿಯನ್ನು ದೋಷಿ ಎಂದಿದ್ದ ಕೋರ್ಟ್‌ 2 ವರ್ಷದ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿದ್ದರು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಹುಲ್‌ ಗಾಂಧಿಗೆ 30 ದಿನಗಳ ಕಾಲಾವಕಾಶ ಇರಲಿದೆ. 

ಕೋಲಾರದಲ್ಲಿ ಆಡಿದ ಮಾತು, ರಾಹುಲ್‌ಗೆ ಬಂತು ಕುತ್ತು, ಇವೆಲ್ಲದರ ಸೂತ್ರಧಾರಿ ರಘುನಾಥ್‌!

ಇತಿಹಾಸದ ಅತೀದೊಡ್ಡ ಗೆಲುವು ದಾಖಲಿಸಿದ್ದ ರಾಹುಲ್‌ ಗಾಂಧಿ: 1951ರ ಜನಪ್ರತಿನಿಧಿ ಕಾಯ್ದೆ ಅನ್ವಯ, ಶಾಸಕ ಅಥವಾ ಸಂಸದರಂತಹ ಜನಪ್ರತಿನಿಧಿಗಳಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ 2013ರಲ್ಲಿ ತೀರ್ಪು ನೀಡಿತ್ತು. ಶಿಕ್ಷೆಯ ವಿರುದ್ಧ ಪ್ರತಿನಿಧಿಯು ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

Modi Surname Case: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ನಿರ್ಧಾರ, ಕೋರ್ಟ್‌ಗೆ ಗೌರವ ನೀಡಿ ಎಂದ ಬಿಜೆಪಿ!

ರಾಹುಲ್‌ ಗಾಂಧಿ ವಯನಾಡ್‌ನಿಂದ ಲೋಕಸಭೆಯ ಸದಸ್ಯರಾಗಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ, ಅವರು ವಯನಾಡ್‌ನಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಭಾರತೀಯ ಇತಿಹಾಸದಲ್ಲಿ ಅತಿದೊಡ್ಡ ಗೆಲುವನ್ನು ದಾಖಲು ಮಾಡಿದ್ದರು. ರಾಹುಲ್ ಸುಮಾರು ಎಂಟು ಲಕ್ಷ ಮತಗಳಿಂದ ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು.

ಅನರ್ಹರಾಗಿರುವ ಸಂಸದರು/ಶಾಸಕರು: ರಾಹುಲ್‌ ಗಾಂಧಿ ಮಾತ್ರವಲ್ಲ ಸಂಸದ ಸ್ಥಾನದಿಂದ ಅನರ್ಹಗೊಂಡ ಸಾಕಷ್ಟು ಸಂಸದರು ನಮ್ಮ ನಡುವೆ ಇದ್ದಾರೆ. ಮೇವು ಹಗರಣದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರೆ, ಎಂಬಿಬಿಎಸ್‌ ಸೀಟು ಹಗರಣದಲ್ಲಿ ಅಪರಾಧಿಯಾದ ರಶೀದ್‌ ಮಸೂದ್‌ ಕೂಡ ಅನರ್ಹತೆ ಶಿಕ್ಷೆ ಪಡೆದಿದ್ದರು. ಕೊಲೆ ಪ್ರಕರಣದಲ್ಲಿ ಬಿಜೆಪಿ ಸಂಸದ ಅಶೋಕ್‌ ಚಂದೇಲ್‌, ಉನ್ನಾವೋ ಕೇಸ್‌ನಲ್ಲಿ ಕುಲದೀಪ್‌ ಸೆನೆಗರ್‌ ಹಾಗೂ ಕಳೆದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಶಾಸಕ ಅಬ್ದುಲ್ಲಾ ಅಜಮ್‌ ಅನರ್ಹರಾಗಿದ್ದರು. 

Latest Videos
Follow Us:
Download App:
  • android
  • ios