ತನಗಿಂತ ಉನ್ನತವಾದ ನ್ಯಾಯಾಲಯಗಳು ನೀಡಿದ ಆದೇಶಕ್ಕೆ ವಿರುದ್ಧವಾಗಿ ಕೆಳಗಿನ ನ್ಯಾಯಾಲಯಗಳು ಆದೇಶ ಪ್ರಕಟಿಸುವಂತಿಲ್ಲ. ಇಂತಹ ನಡವಳಿಕೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು ಎಂದು ಸುಪ್ರೀಂಕೋರ್ಟ್‌ ಸೋಮವಾರ ತಾಕೀತು ಮಾಡಿದೆ.  

ನವದೆಹಲಿ: ತನಗಿಂತ ಉನ್ನತವಾದ ನ್ಯಾಯಾಲಯಗಳು ನೀಡಿದ ಆದೇಶಕ್ಕೆ ವಿರುದ್ಧವಾಗಿ ಕೆಳಗಿನ ನ್ಯಾಯಾಲಯಗಳು ಆದೇಶ ಪ್ರಕಟಿಸುವಂತಿಲ್ಲ. ಇಂತಹ ನಡವಳಿಕೆ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು ಎಂದು ಸುಪ್ರೀಂಕೋರ್ಟ್‌ ಸೋಮವಾರ ತಾಕೀತು ಮಾಡಿದೆ. ಅತ್ಯಾಚಾರ ಸಂತ್ರಸ್ತೆಯೊಬ್ಬರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ನಿಗದಿಯಾಗಿದ್ದರೂ, ಆ ಅರ್ಜಿಯ ಕುರಿತಂತೆ ಶನಿವಾರವೇ ಆದೇಶ ಹೊರಡಿಸಿದ್ದ ಗುಜರಾತ್‌ ಹೈಕೋರ್ಟ್‌ನ ಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಗುಜರಾತ್‌ ಹೈಕೋರ್ಟ್‌ನಲ್ಲಿ (Gujarat High court) ಏನಾಗುತ್ತಿದೆ? ತನಗಿಂತ ಉನ್ನತವಾದ ನ್ಯಾಯಾಲಯದ ವಿರುದ್ಧ ದೇಶದ ಯಾವುದೇ ನ್ಯಾಯಾಲಯ ಕೂಡ ಆದೇಶ ಹೊರಡಿಸುವಂತಿಲ್ಲ. ಇದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ (B V Nagaratna) ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ ಹೇಳಿತು.

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ, ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ

ಏನಿದು ಪ್ರಕರಣ?:

ಅತ್ಯಾಚಾರ ಸಂತ್ರಸ್ತೆಯೊಬ್ಬಳು (Rape victim) ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್‌ (Gujarat High court) ಮೊರೆ ಹೋಗಿದ್ದರು. ವೈದ್ಯಕೀಯ ತಂಡವೊಂದನ್ನು ಹೈಕೋರ್ಟ್‌ ರಚಿಸಿತ್ತು. ಗರ್ಭ ತೆಗೆಸಲು ವೈದ್ಯರು ಅನುಮತಿ ನೀಡಿದ್ದರು. ಆ ವರದಿ ಬಂದ 12 ದಿನಗಳ ಬಳಿಕ ಹೈಕೋರ್ಟ್‌ ಆ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಿತ್ತು. ಇದರ ವಿರುದ್ಧ ಸಂತ್ರಸ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ವಿಳಂಬ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್, ಸೋಮವಾರ ಆದೇಶ ಹೊರಡಿಸುವುದಾಗಿ ಶನಿವಾರದ ವಿಚಾರಣೆ ವೇಳೆ ತಿಳಿಸಿತ್ತು.

ಸೋಷಿಯಲ್‌ ಮೀಡಿಯಾ ಬಳಸಿದರೆ ಪರಿಣಾಮ ಕೂಡ ಎದುರಿಸಿ: ಸುಪ್ರೀಂ ಖಡಕ್‌ ಉತ್ತರ

ಈ ನಡುವೆ ಗುಜರಾತ್‌ ಹೈಕೋರ್ಟ್ ಸಂತ್ರಸ್ತೆಯ ಅರ್ಜಿಯನ್ನು ಶನಿವಾರ ವಜಾಗೊಳಿಸಿತ್ತು. ಆದರೆ ಸೋಮವಾರದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ (abortion) ಅನುಮತಿ ನೀಡಿತು.