ಸಿಂಧು ನಾಗರೀಕತೆಗೆ ಸೇರಿದ ಗುಜರಾತ್‌ನ ಹರಪ್ಪನ್ ನಗರಕ್ಕೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಸ್ಥಾನಮಾನ!
- ತೆಲಂಗಾಣದ ರಾಮಪ್ಪ ದೇವಾಲಯದ ಬೆನ್ನಲ್ಲೇ ಹರಪ್ಪನ್ ನಗರಕ್ಕೂ ಸ್ಥಾನಮಾನ
- ಭಾರತದ ಪ್ರಮುಖ ಪುರಾತತ್ವ ಸ್ಥಳ ಹರಪ್ಪನ್ ಸಿಟಿಗೆ ಯುನೆಸ್ಕೋ ಮಾನ್ಯತೆ
- ಯುನೆಸ್ಕೋ ವಿಶ್ವ ಪರಂಪರೆ ತಾಣ ಸ್ಥಾನಮಾನಕ್ಕೆ ಸೇರಿದ ಗುಜರಾತ್‌ನ ಧೋಲವಿರಾದ ಹರಪ್ಪನ್
ನವದೆಹಲಿ(ಜು.27): ಸಿಂಧು ಕಣಿವೆ ನಾಗರೀಕತೆಗೆ ಸೇರಿದ ಗುಜರಾತ್‌ನಲ್ಲಿರುವ ಹರಪ್ಪನ್ ನಗರಕ್ಕೆ ಯುನೆಸ್ಕೋ ವಿಶ್ವ ಪರಂಪರೆ ತಾಣ ಸ್ಥಾನಮಾನ ನೀಡಿದೆ. ಈ ಮೂಲಕ ತೆಲಂಗಾಣದ 800 ವರ್ಷಗಳ ಹಳೆಯ ರಾಮಪ್ಪ ದೇವಸ್ಥಾನಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಸ್ಥಾನ ನೀಡಿದ ಬೆನ್ನಲ್ಲೇ ಇದೀಗ ಹರಪ್ಪನ್ ನಗರಕ್ಕೂ ಯುನೆಸ್ಕೋ ಮಾನ್ಯತೆ ಸಿಕ್ಕಿದೆ.
ರಾಮಪ್ಪ ಮಂದಿರಕ್ಕೆ ಯುನೆಸ್ಕೂ ವಿಶ್ವ ಪಾರಂಪರಿಕ ತಾಣ ಸ್ಥಾನಮಾನ; ಪ್ರಧಾನಿ ಮೋದಿ ಅಭಿನಂದನೆ!
ಗುಜರಾತ್‌ನ ಧೋಲವಿರಾದಲ್ಲಿರುವ ಹರಪ್ಪನ್ ನಗರ ಭಾರತದ ನಾಗರೀಕತೆ ವಿಕಸನಕ್ಕೆ ಹಿಡಿದ ಕೊಂಡಿಯಾಗಿದೆ. ಭಾರತದ ಪ್ರಾಚೀನ ನಾಗರೀಕತೆಯಾಗಿರುವ ಸಿಂಧೂ ನಾಗರೀಕತೆಯ ಕೊಂಡಿಯಾಗಿರುವ ಹರಪ್ಪನ್ ನಗರವನ್ನ 1968ರಲ್ಲಿ ಪತ್ತೆ ಹಚ್ಚಿ ಸಂಶೋಧನೆ ನಡೆಸಲಾಯಿತು.
ಧೋಲವಿರಾ ದಕ್ಷಿಣ ಏಷ್ಯಾದ ಅತ್ಯಂತ ಪ್ರಾಚೀನ ಹಾಗೂ ಗಮನಾರ್ಹ ನಗರ. ಅತ್ಯಂತ ಪ್ರಾಚೀನ ನಾಗರೀಕತೆಯನ್ನು ಅಷ್ಟೇ ಉತ್ತಮವಾಗಿ ಸಂರಕ್ಷಿಸಲಾಗಿದೆ. ಇದು ನಗರ ವಸಾಹತುಗಳಲ್ಲಿ ಒಂದಾಗಿದೆ. ಇದು ಕ್ರಿ.ಪೂ 3 ರಿಂದ 2 ನೇ ಸಹಸ್ರಮಾನದ ಹಿಂದಿನ ಪಳೆಯುಳಿಕೆಯಾಗಿದೆ ಎಂದು ಯೆನೆಸ್ಕೂ ಹೇಳಿದೆ.
ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ!
ಈ ಪುರಾತತ್ವ ಸ್ಥಳದಲ್ಲಿ ಕ್ರಿ.ಪೂ 3 ರಿಂದ 2ನೇ ಶತಮಾನದಲ್ಲಿ ಬಳಸಿದ ತಾಮ್ರ, ಚಿಪ್ಪು, ಕಲ್ಲು, ಅಮೂಲ್ಯ ಕಲ್ಲುಗಳು, ಆಭರಣಗಳು, ಟೆರಾಕೋಟಾ, ಚಿನ್ನ, ದಂತದಂತಹ ವಿವಿಧ ರೀತಿಯ ಕಲಾಕೃತಿಗಳು ಈ ಸ್ಥಳದಲ್ಲಿ ಕಂಡುಬಂದಿವೆ. ನಗರ, ನೀರಿನ ವ್ಯವಸ್ಥೆ, ರಸ್ತೆ, ಸೇರಿದಂತೆ ಆಧುನಿಕ ನಾಗರೀಕತೆ ಅಲ್ಲಿ ನೆಲೆಸಿತ್ತು ಅನ್ನೋದು ಈ ಪಳೆಯುಳಿಕೆಗಳು ಹೇಳುತ್ತಿವೆ.
ಈ ಐತಿಹಾಸಿಕ ತಾಣವನ್ನು ಯೆನೆಸ್ಕೋ ಗುರುತಿಸಿ ವಿಶ್ವ ಪರಂಪರೆ ತಾಣ ಸ್ಥಾನಮಾನ ನೀಡಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಧೋಲವಿರಾ ಒಂದು ಪ್ರಮುಖ ನಗರ ಕೇಂದ್ರವಾಗಿತ್ತು. ಇದು ನಮ್ಮ ಪೂರ್ವಜರೊಂದಿಗೆ ಸಂಪರ್ಕ ಬೆಸೆಯುವ ನಗರವಾಗಿದೆ. ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ತ್ವ ಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಭೇಟಿ ನೀಡಲೇಬೇಕು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.