ಮದುವೆ ಪೂರ್ವ ಸಂಪ್ರದಾಯ ಆಚರಿಸಲು ಹೋಗಿ ಕಂಬಿ ಹಿಂದೆ ಕೂತ ವರ

ವಿವಾಹ ಪೂರ್ವ ಸಂಪ್ರದಾಯವನ್ನು ಪಾಲಿಸಲು ಹೋದ ವರ ಹಾಗೂ ಆತನ ಕುಟುಂಬದವರು ಜೈಲು ಪಾಲಾದ ಅಚ್ಚರಿಯ ಘಟನೆ ಗುಜರಾತ್‌ನಲ್ಲಿ ನಡೆದಿದೆ.  

Gujarat groom arrested after celebrate a pre wedding ritual

ಭಾರತದಲ್ಲಿ ಮದುವೆ ಸಂಪ್ರದಾಯಗಳು ದೊಡ್ಡ ಮಟ್ಟದ ವ್ಯವಹಾರಗಳು. ಮದುವೆ ದಿನ ಹಾಗೂ ಮದುವೆಗೂ ಮೊದಲು ಹಾಗೂ ನಂತರ ಹಲವು ಚಿತ್ರವಿಚಿತ್ರ ಸಂಪ್ರದಾಯಗಳಿರುತ್ತವೆ. ವಧುವನ್ನು ಅಡಗಿಸಿಟ್ಟು ಹುಡುಕುವುದು, ವರನ ಶೂ ಅಡಗಿಸಿಡುವುದು ಹೀಗೆ ಹಲವು ರೀತಿಯ ಮಜಾ ನೀಡುವ ಸಂಪ್ರದಾಯಗಳನ್ನು ಮದುವೆ ಮನೆಯವರು ಮಾಡುತ್ತಾರೆ. ಆದರೆ ಹೀಗೆ ಏನೋ ಒಂದು ವಿವಾಹಪೂರ್ವ ಸಂಪ್ರದಾಯ ಆಚರಿಸಲು ಹೋದ ವರ ಹಾಗೂ ಆತನ ಮನೆಯವರು ಕಂಬಿ ಹಿಂದೆ ಕುಳಿತ ಘಟನೆ ನಡೆದಿದೆ. 

ಹೌದು ವಿವಾಹ ಪೂರ್ವ ಸಂಪ್ರದಾಯವನ್ನು ಪಾಲಿಸಲು ಹೋದ ವರ ಹಾಗೂ ಆತನ ಕುಟುಂಬದವರು ಜೈಲು ಪಾಲಾದ ಅಚ್ಚರಿಯ ಘಟನೆ ಗುಜರಾತ್‌ನಲ್ಲಿ ನಡೆದಿದೆ.  ಮದುವೆಗೆ ಕೆಲ ಗಂಟೆಗಳಿರುವಾಗ ವರ ಹಾಗೂ ಆತನ ಕುಟುಂಬದವರು ಮಾಡಿದ ಬ್ಯಾಚುಲರ್ ಸಂಭ್ರಾಮಾಚರಣೆ 27 ವರ್ಷದ ವರ ಹಾಗೂ ಆತನ ಕುಟುಂಬದವರನ್ನು ಕಂಬಿ ಹಿಂದೆ ಕೂರುವಂತೆ ಮಾಡಿದೆ. ಗುಜರಾತ್‌ನ ಜಿಲಾನಿ ಬ್ರಿಡ್ಜ್‌ ಸಮೀಪದ ತುಂಬಿ ಹಾಲ್ ಬಳಿ ಈ ಘಟನೆ ನಡೆದಿದೆ.  ಪೊಲೀಸರು ಬಂದು ಬಂಧಿಸಿ ಕರೆದೊಯ್ಯುವಂತಹ ಸಂಪ್ರದಾಯ ಅದೇನು ಮಾಡಿದ್ರು ವರನ ಕಡೆಯವರು ಎಂದು ನೀವು ಅಚ್ಚರಿಗೊಳ್ಳುವುದು ಸಹಜ ಅದೇನು ಅಂತ ಮುಂದೆ ಓದಿ...

ಹಾಗಾದ್ರೆ ವರ ಹಾಗೂ ವರನ ಸಂಬಂಧಿಕರು ಆಚರಿಸಿದ್ದ ಸಂಪ್ರದಾಯ ಯಾವುದು?
ಶನಿವಾರ ಮದ್ವೆ ಇದ್ರೆ ಶುಕ್ರವಾರ ರಾತ್ರಿ ವರನ ಕಡೆಯವರು ರಾತ್ರಿ ಸಂಪ್ರದಾಯದ ಭಾಗವಾಗಿ ಜೂಜೂಟ ಶುರು ಮಾಡಿದ್ದಾರೆ. ತೀನ್ ಪತಿ (three-card poker)ಎಂದು ಕರೆಯಲ್ಪಡುವ ಆಟವನ್ನು ಕುಟುಂಬದವರೆಲ್ಲರೂ ಸೇರಿ ಆಡಿದ್ದಾರೆ. ಈ ಜೂಜಾಟವನ್ನು ಕುಟುಂಬದವರು ಕುಟುಂಬದ ಸಂಪ್ರದಾಯವೆಂದು ಕರೆದಿದ್ದಾರೆ. ಅಲ್ಲಿ ಕುಟುಂಬದವರು ಹಾಗೂ ವರ ಸೇತಿ ತೀನ್ ಪತಿ ಆಟವಾಡಿದ್ದು, ಈ ಆಟ ನಸುಕಿನ ಜಾವ ಮೂರು ಗಂಟೆಯವರೆಗೆ ಮುಂದುವರೆದಿದೆ. 

ಇದರಿಂದ ಯಾರೋ  ಪೊಲೀಸರಿಗೆ ಸುಳಿವು ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭಾರಿ ಮೊತ್ತದ ಹಣ ಹಾಗೂ ಇಸ್ಪೀಟು ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ 76,720 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 1.32 ಲಕ್ಷ ರೂಪಾಯಿ ಮೌಲ್ಯದ 12 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟ ಕಾಯ್ದೆಯ ಸೆಕ್ಷನ್ 4 ಹಾಗೂ 5ರ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳೆಲ್ಲರಿಗೂ ನಂತರ ಜಾಮೀನು ಸಿಕ್ಕಿದೆ.

ಮದುವೆಗೆ ಮೊದಲು ವರನ ಕಿಡ್ನ್ಯಾಪ್
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಅಮೇಥಿಯಲ್ಲಿ ವರನನ್ನು ವಧುವಿನ ಕುಟುಂಬದವರು ಕಿಡ್ನ್ಯಾಪ್ ಮಾಡಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಅಲ್ಲದೇ ಮದುವೆಯ ಸಿದ್ಧತೆಯ ವೆಚ್ಚವನ್ನು ನೀಡುವಂತೆ ಆಗ್ರಹಿಸಿದ್ದರು. ಆದರೆ ನಂತರದಲ್ಲಿ ವರನಿಗೆ ಬೇರೆ ಮಹಿಳೆಯ ಜೊತೆ ಸಂಬಂಧ ಇದೆ ಎಂದು ಆರೋಪಿಸಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದರು. 

Latest Videos
Follow Us:
Download App:
  • android
  • ios