Asianet Suvarna News Asianet Suvarna News

ತಿರಂಗಾ ಯಾತ್ರೆ ವೇಳೆ ನುಗ್ಗಿದ ಬೀದಿ ಹಸು, ಕಾಲು ಮುರಿದುಕೊಂಡ ರಾಜಕಾರಣಿ, ವಿಡಿಯೋ ವೈರಲ್‌!

ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ತಿರಂಗಾ ಯಾತ್ರೆಯಲ್ಲಿ ಭಾಗಹಿಸಿದ್ದರು. ಈ ವೇಳೆ ಬೀದಿ ಹಸುವೊಂದು ಅವರ ಮೇಲೆ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಕಾಲು ಮುರಿದುಕೊಂಡ ನಿತಿನ್‌ ಪಟೇಲ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 

Gujarat ex Deputy Chief Minister Nitin Patel attacked by stray cattle admitted to private hospital san
Author
Bengaluru, First Published Aug 13, 2022, 3:52 PM IST

ಅಹಮದಾಬಾದ್ (ಆ.13): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ಹಿನ್ನಲೆಯಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವದ ಭಾಗವಾಗಿ ಕೇಂದ್ರ ಸರ್ಕಾರ ಹರ್‌ ಘರ್‌ ತಿರಂಗಾ ಅಭಿಯಾನವನ್ನು ಆರಂಭಿಸಿದೆ. ಅದರ ಭಾಗವಾಗಿ ಶನಿವಾರ ದೇಶದ ಹಲವೆಡೆ ತಿರಂಗಾ ಯಾತ್ರೆ ಕೂಡ ನಡೆಯಿತು. ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಭಾಗವಹಿಸಿದ್ದ ತಿರಂಗಾ ಯಾತ್ರೆಯ ವೇಳೆ ಬೀದಿ ಹಸುವೊಂದು ದಾಳಿ ನಡೆಸಿದೆ. ಕರಣಪುರ ತರಕಾರಿ ಮಾರುಕಟ್ಟೆ ಬಳಿ ನಿತಿನ್ ಪಟೇಲ್ ಮೇಲೆ ಬಿಡಾಡಿ ದನಗಳು ದಾಳಿ ನಡೆಸಿವೆ. ಹಸುವಿನ ದಾಳಿಗೆ ಅವರು ಕಾಲು ಮುರಿದುಕೊಂಡಿದ್ದು, ಸದ್ಯ ಅವರನ್ನು ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಹಸು ಅವರ ಮೇಲೆ ಹಾರಿದ ಹೊಡೆತಕ್ಕೆ ಹಸುವಿನ ಕಾಲುಗಳು ಅವರ ಬಲಗಾಲಿನ ಮೇಲೆ ಬಿದ್ದಿವೆ.  ಕಡಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವೇಳೆ ಈ ಘಟನೆ ನಡೆದಿದೆ. ಇದರಲ್ಲಿ ನಿತಿನ್ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯರು ಕೆಲ ತಿಂಗಳ ವಿಶ್ರಾಂತಿಯನ್ನೂ ಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಕಾಡಿಯ ಭಾಗ್ಯೋದಯ ಆಸ್ಪತ್ರೆಗೆ ಅವರನ್ನು ರವಾನಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅವರು ಅಹಮದಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಅವರ ಮೇಲೆ ಹಸು ಹಾರಿದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ನಿತಿನ್‌ ಪಟೇಲ್‌ರೊಂದಿಗೆ ಕೆಲ 3-4 ಮಂದಿ ಕೂಡ ನೆಲಕ್ಕೆ ಉರುಳಿದ್ದರು. ನಿತಿನ್‌ ಪಟೇಲ್‌ ನೆಲಕ್ಕೆ ಉರುಳಿದರೂ, ರಾಷ್ಟ್ರಧ್ವಜವನ್ನು ನೆಲಕ್ಕೆ ತಾಕಿಸಿರಲಿಲ್ಲ. ದೇಶವು 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಇದೇ ವೇಳೆ ಹರ್ ಘರ್ ತ್ರಿರಂಗ ಅಭಿಯಾನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಏತನ್ಮಧ್ಯೆ, ವಿವಿಧ ನಗರಗಳಲ್ಲಿ ತಿರಂಗಾ ಯಾತ್ರೆಯನ್ನೂ ಸಹ ಕೈಗೊಳ್ಳಲಾಗುತ್ತದೆ. ಅಂತಹ ಒಂದು ಯಾತ್ರೆಯಲ್ಲಿ ನಿತಿನ್ ಪಟೇಲ್ ಕೂಡ ಭಾಗವಹಿಸಿದ್ದರು.

ನಿತಿನ್ ಪಟೇಲ್ ಧ್ವಜ ಬೀಳಲು ಬಿಡಲಿಲ್ಲ: ನಿತಿನ್ ಪಟೇಲ್ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಮುಂದೆ ಸಾಗುತ್ತಿದ್ದಾಗ ಹಸುವೊಂದು ಏಕಾಏಕಿ ಅವರತ್ತ ಜಿಗಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ ಹಸು ಬಂದಾಗ ನಿತಿನ್ ಪಟೇಲ್ ಮತ್ತು ಅವರ ಎದುರಿಗಿದ್ದ ವ್ಯಕ್ತಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ನಿತಿನ್ ಪಟೇಲ್ ಕೈಯಲ್ಲಿ ತ್ರಿವರ್ಣ ಧ್ವಜವಿತ್ತು. ಆದರೆ, ಕೆಳಗೆ ಬಿದ್ದರೂ ತ್ರಿವರ್ಣ ಧ್ವಜ ಕೆಳಗೆ ಬೀಳಲು ಬಿಡಲಿಲ್ಲ.

ಮೋಹನ್‌ ಭಾಗವತ್‌ ತ್ರಿವರ್ಣ ಧ್ವಜ ಹಾರಿಸಿದ ವಿಡಿಯೋ ಬಿಡುಗಡೆ ಮಾಡಿದ ಆರೆಸ್ಸೆಸ್‌

 

ವಲ್ಸಾದ್‌ನಲ್ಲಿ ಅತಿ ಎತ್ತರದ ತ್ರಿವರ್ಣ ಧ್ವಜ: ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಸಂಭ್ರಮ ಮನೆ ಮಾಡಿದ್ದು, ಜಿಲ್ಲೆಯ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ವಾಪಿಯಲ್ಲಿ ವಿತ್ತ ಸಚಿವರು ಹಾರಿಸಿದರು. 100 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ವಿತ್ತ ಸಚಿವ ಕನುಭಾಯಿ ದೇಸಾಯಿ ಹಾರಿಸಿದರು. ಇದರಲ್ಲಿ ಸಾಕಷ್ಟು ಜನರು ಸೇರಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಜನರಲ್ಲಿ ಸಂಭ್ರಮ ಮನೆ ಮಾಡಿತ್ತು.

ಹಾವಿನಿಂದ ಮಗನನ್ನು ಕಾಪಾಡಿದ ತಾಯಿ, ವಿಡಿಯೋ ವೈರಲ್!

ಗುಜರಾತ್‌ನಲ್ಲಿ ಬೀದಿ ಹಸುಗಳ ಹಾವಳಿ: ಇನ್ನೊಂದೆಡೆ, ಅಂಜಾರ್‌ನ ಸತಾಪರ್ ರಸ್ತೆಯಲ್ಲಿ ತಂದೆ-ಮಗ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಗೂಳಿಗೆ ಡಿಕ್ಕಿ ಹೊಡೆದು ಗಂಭೀರ ಅಪಘಾತ ಸಂಭವಿಸಿದೆ. ಸತಾಪರ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಗೂಳಿಯೊಂದು ಏಕಾಏಕಿ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ವೇಳೆ ತಂದೆ ಮೃತಪಟ್ಟಿದ್ದಾರೆ. ಬಿಡಾಡಿ ದನಗಳನ್ನು ಹಿಡಿಯಲು ಸ್ಥಳೀಯರಿಂದ ಹಲವು ಪ್ರಸ್ತಾವನೆಗಳು ಬಂದಿದ್ದರೂ ಗುಜರಾತ್‌ನಲ್ಲಿ ಆಡಳಿತ ಗಾಢ ನಿದ್ದೆಯಲ್ಲಿದೆ.

Follow Us:
Download App:
  • android
  • ios