ಅಹಮದಾಬಾದ್(ಮೇ 06)  ಗುಜರಾತ್ ನಲ್ಲಿ ಕೊರೋನಾ ವೈರಸ್ ಈ ಪರಿಯಾಗಿ ಹರಡಲು ಏನು ಕಾರಣ ಎಂಬುದನ್ನು ಅಲ್ಲಿನ ಕಾಂಗ್ರಸ್   ಪತ್ತೆ ಹಚ್ಚಿದೆ! ನಿಮಗೆ ಅಚ್ಚರಿಯಾಗಬಹುದು ಕಾಂಗ್ರೆಸ್ ಈ ಸಂಶೋಧನೆ ಹೇಗೆ ಮಾಡಿತು ಅಂಥ. ವಿವರಗಳನ್ನು ನಿಮ್ಮ ಮುಂದೆ ಇಡುತ್ತೇವೆ ಕೇಳಿ.

ಗುಜರಾತ್ ಸರ್ಕಾರ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮವೇ ಇದಕ್ಕೆ ಕಾರಣ. ಗುಜರಾತ್ ನಲ್ಲಿ ಕೊರೋನಾ ಹರಡಲು ಬಿಜೆಪಿ ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿದೆ.

ಫೆಬ್ರವರಿ 24 ರಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾಗ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೇರಳದಲ್ಲಿ ಜನವರಿಯಲ್ಲೇ ಕೊರೋನಾ ಪಾಸಿಟವ್ ಕೇಸ್ ದಾಖಲಾಗಿತ್ತು. ಆದರೆ ಇಲ್ಲಿ ಸೋಶಿಯಲ್ ಡಿಸ್ಟಂಸಿಂಗ್ ಮರೆತು ಕಾರ್ಯಕ್ರಮ ಆಯೋಜನೆ ಮಾಡಿದ್ದೇ ಕೊರೋನಾ ಹರಡಲು ಕಾರಣವಾಯಿತು ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಅದ್ಭುತ,,,ಭಾರತದ ಈ ನಗರದಲ್ಲಿ ಒಂದೇ ಒಂದು ಕೊರೋನಾ ಕೇಸ್ ಇಲ್ಲ

ವಿಶೇಷ ತನಿಖಾ ದಳ ರಚಿಸಿ ಈ ಕಾರ್ಯಕ್ರಮ ಆಯೋಜನೆ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು. ಈ ಕಾರ್ಯಕ್ರಮದಿಂದ ಕೊರೋನಾ ಹರಡಿದೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ. 

ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ವೇದಿಕೆ ಹಂಚಿಕೊಂಡಿದ್ದರು . ಗುಜರಾತ್ ನಲ್ಲಿ ಇಲ್ಲಿಯವರೆಗೆ 5 ಸಾವಿರಕ್ಕೂ ಅಧಿಕ ಕೊರೋನಾ ಪೊಸೀಟಿವ್ ಕೇಸ್ ದಾಖಲಾಗಿ ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ.