ಜೇಮ್ ಶೇಡ್ ಪುರ(ಮೇ 06)  ಕೊರೋನಾ ವಿರುದ್ಧ ದೇಶದಲ್ಲಿ ಹೋರಾಟ ಮುಂದುವರಿದೇ ಇದೆ. ಕೊರೋನಾದಿಂದ ಮೃತಪಟ್ಟವರಲ್ಲಿ ಶೇ. 75ಜನ ನಗರವಾಸಿಗಳು. ಶೇ. 66 ರಷ್ಟು ಕೇಸು ದಾಖಲಾಗಿದ್ದು ನಗರ ಪ್ರದೇಶದಿಂದ. ಆದರೆ ಜೇಮ್ ಶೇಡ್ ಪುರದಲ್ಲಿ ಮಾತ್ರ ಒಂದೇ ಒಂದು ಕೇಸ್ ದಾಖಲಾಗಿಲ್ಲ.

ಜಾರ್ಖಂಡ್ ನಲ್ಲಿಯೇ ದೊಡ್ಡ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ.  ಟಾಟಾ ನಗರ, ರೈಲ್ವೆ ಕಾಲೋನಿ, ಮಾನ್ಗೋ, ಹಲುಬ್ದಾನಿ, ಗಾದ್ರಾ, ಘೋರಾಬಂಧಾ ಸೇರಿದಂತೆ ಅನೇಕ ಜನನಿಬಿಡ ಪ್ರದೇಶಗಳನ್ನು ಹೊಂದಿದೆ.

ಸದ್ದಿಲ್ಲದೆ ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ ಸರ್ಕಾರ
 
ಪೂರ್ವ ಸಿಂಧಮಗ್ ಡಿಸಿ ರವಿ ಶಂಕರ್ ಶುಕ್ಲಾ ಹೇಳುವಂತೆ, 70 ವಿಶೇಷ ತಂಡಗಳ ಮೂಲಕ 3 ಸಾವಿರ ಜನ ಕೊರೋನಾ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ.  1000ಕ್ಕೂ ಅಧಿಕ ಸ್ಯಾಂಪಲ್ ಸಂಗ್ರಹ ಮಾಡಿಕೊಂಡಿದ್ದೇವು. ಅದೆಲ್ಲವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ಮಹಾತ್ಮಾ ಗಾಂಧಿ ಮೇಮೋರಿಯಲ್ ಆಸ್ಪತ್ರೆ ಮಾರ್ಚ್ 12 ರಿಂದಲೇ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದೆ.  ಟಾಟಾ ಆಸ್ಪತ್ರೆ ಸಹ ಸಕಲ ಸೌಲಭ್ಯ ಒದಗಿಸಿಕೊಡುವುದಾಗಿ ತಿಳಿಸಿದೆ.

ಜೇಮ್ ಶೇಡ್ ಪುರದಲ್ಲಿ  ಜನರು ಸಹ ಅಷ್ಟೆ ಸಹಕಾರ ನೀಡಿದರು. ಕಾರ್ಮಿಕರು ಸ್ವಚ್ಛತೆ ಅರಿವು ಬೆಳೆಸಿಕೊಂಡು ಸರ್ಕಾರ ಮತ್ತು ಆಡಳಿತ ನೀಡಿದ ಸೂಚನೆ ಪಾಲಿಸಿದರು. ಇದೆಲ್ಲದರ ಪರಿಣಾಮ ಕೊರೋನಾ ನಿಯಂತ್ರಣಕ್ಕೆ ಬಂತು ಎಂದಿದ್ದಾರೆ.