ವಿವಾಹ ಸಮಾರಂಭ ಟೈಮಲ್ಲೇ ಹೃದಯಾಘಾತದಿಂದ ಮೃತಪಟ್ಟ ವಧು: ತಂಗಿಯ ಜತೆ ಮದ್ವೆ ಮಾಡಿಕೊಟ್ಟ ಕುಟುಂಬ
ಹೇತಲ್ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ, ಮದುವೆಯನ್ನು ನಿಲ್ಲಿಸಲು ಇಷ್ಟಪಡದ ಸಂಬಂಧಿಕರು ಮದುವೆ ಸಮಾರಂಭ ಮುಂದುವರಿಸಲು ಬೇರೆ ಪ್ಲ್ಯಾನ್ ಅನ್ನೇ ಮಾಡಿದ್ದಾರೆ. ವರ ವಿಶಾಲ್‌ಗೆ ವಧುವಿನ ಬದಲು ಆಕೆಯ ತಂಗಿಯನ್ನು ಮದುವೆಯಾಗಲು ಸಲಹೆ ನೀಡಿದರು.
ಭಾವನಗರ (ಗುಜರಾತ್) ಫೆಬ್ರವರಿ 25, 2023: ಮದುವೆ ಅನ್ನೋದು ಹುಡುಗಿಯ ಜೀವನದಲ್ಲಿ ಬಹಳ ಮಹತ್ವದ ಗಟ್ಟ. ಮದುವೆ ಮುಹೂರ್ತದ ದಿನ ಅಂದ್ರೆ ಹುಡುಗಿಯ ಜೀವನದಲ್ಲಿ ಬಹಳ ಮುಖ್ಯವಾದ ದಿನ, ಹಾಗೂ ಅಷ್ಟೇ ಸಂತೋಷದ ದಿನ ಕೂಡ. ಆದರೆ, ಈ ಪ್ರಕರಣದಲ್ಲಿ ಮದುವೆಯ ದಿನವೇ ಮಹಿಳೆಯೊಬ್ಬರ ಕೊನೆಯ ದಿನವಾಗಿದೆ. ಹೌದು, ಗುಜರಾತಿನ ಭಾವನಗರದಲ್ಲಿ ವಧುವೊಬ್ಬರು ಸುಭಾಷ್‌ನಗರ ಪ್ರದೇಶದ ಮದುವೆ ಸ್ಥಳದಲ್ಲಿ, ಅದರಲ್ಲೂ ಮದುವೆ ಸಮಾರಂಭದ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗುಜರಾತಿನ (Gujarat) ಭಾವನಗರದ (Bhavnagar) ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಜಿನಾಭಾಯಿ ರಾಥೋಡ್ (Jinabhai Rathore) ಎಂದು ಗುರುತಿಸಲಾದ ವ್ಯಕ್ತಿಯ ಪುತ್ರಿಯಾದ ಹೀತಲ್ (Hethal), ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಮಗ ವಿಶಾಲ್ (Vishal) ಅವರನ್ನು ಮದುವೆಯಾಗುವ (Marriage) ಮುನ್ನವೇ ಹಾರ್ಟ್ ಅಟ್ಯಾಕ್‌ನಿಂದ (Heart Attack) ಬಲಿಯಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಹಾಡು, ಡ್ಯಾನ್ಸ್ ನಡೆಯುತ್ತಿದ್ದ ವೇಳೆ ವಧು ತೀರಿಹೋಗಿದ್ದು, ಈ ಹಿನ್ನೆಲೆ ಸಂತಸದಿಂದ ಕೂಡಿದ್ದ ಸಮಾರಂಭಕ್ಕೆ ಸೂತಕದ ಕಳೆ ಬಂದಿದೆ.
ಇದನ್ನು ಓದಿ: ಕಣ್ರೆಪ್ಪೆ ಮುಚ್ಚಿ ತೆರೆಯೋದ್ರೊಳಗೆ ಜೀವಾನೇ ಹೋಗಿತ್ತು, ಬದುಕು ಎಷ್ಟು ಕ್ಷಣಿಕ ನೋಡಿ..
ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದಾಗ, ಹೀತಲ್‌ಗೆ ತಲೆಸುತ್ತು ಬಂದು ಮೂರ್ಛೆಹೋದಳು ಎಂದು ವರದಿಯಾಗಿದೆ. ನಂತರ, ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದ ಬಳಿಕ ಆಕೆ ಆಸ್ಪತ್ರೆಗೆ ತಲುಪುವ ಮೊದಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಮಧ್ಯೆ, ಹೇತಲ್ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ, ಮದುವೆಯನ್ನು ನಿಲ್ಲಿಸಲು ಇಷ್ಟಪಡದ ಸಂಬಂಧಿಕರು ಮದುವೆ ಸಮಾರಂಭ ಮುಂದುವರಿಸಲು ಬೇರೆ ಪ್ಲ್ಯಾನ್ ಅನ್ನೇ ಮಾಡಿದ್ದಾರೆ. ವರ ವಿಶಾಲ್‌ಗೆ ವಧುವಿನ ಬದಲು ಆಕೆಯ ತಂಗಿಯನ್ನು ಮದುವೆಯಾಗಲು ಸಲಹೆ ನೀಡಿದರು. ಅದಕ್ಕೆ ವರ ಕೂಡ ಒಪ್ಪಿದ ನಂತರ, ಎರಡೂ ಕುಟುಂಬದವರು ವಧುವಿನ ತಂಗಿ ಜತೆ ಮದುವೆ ಮಾಡಲು ನಿರ್ಧರಿಸಿದರು. ಇನ್ನೊಂದೆಡೆ, ಆ ಮದುವೆ ಮುಗಿಯೋವರೆಗೂ ಮೃತ ಹೇತಲ್ ಡೆಡ್‌ಬಾಡಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲಾಗಿತ್ತು ಎಂದೂ ವರದಿಯಾಗಿದೆ.
ಇದನ್ನೂ ಓದಿ: ಕೆಟ್ಟು ನಿಂತ ಲಿಫ್ಟ್, ತಮ್ಮದೇ ಆರತಕ್ಷತೆ ಮಿಸ್ ಮಾಡ್ಕೊಂಡ NRI ಜೋಡಿ
ಇನ್ನು, ಈ ಅಪರೂಪದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಜರಾತಿನ ಭಾವನಗರದ ಕಾರ್ಪೊರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್, ಇದನ್ನು ಅತ್ಯಂತ ದುಃಖಕರ ಎಂದು ಬಣ್ಣಿಸಿದ್ದಾರೆ. ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ಅವರು ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾಗಿದ್ದಾರೆ ಎಂದೂ ತಿಳಿದುಬಂದಿದೆ.
2 ವರ್ಷದ ಹಿಂದೆಯೂ ಇಂತದ್ದೇ ಘಟನೆ ನಡೆದಿತ್ತು
ಇನ್ನು, ಈ ರೀತಿಯ ಘಟನೆ ನಡೆದಿರೋದು ಇದೇ ಮೊದಲಲ್ಲ. ಮೇ 27, 2021 ರಲ್ಲಿ ಉತ್ತರ ಪ್ರದೇಶದಲ್ಲಿ ಸುರಭಿ ಎಂಬ ವಧು ಹಾಗೂ ಮಂಗೇಶ್ ಕುಮಾರ್ ಎಂಬ ವರ ವಿವಾಹ ಸಮಾರಂಭದ ನಡುವೆಯೇ ವಧು ಮೃತಪಟ್ಟಳು. ವರ ಹಾಗೂ ವಧು ಮಾಲೆ ಬದಲಾಯಿಸುವ ವೇಳೆಯಲ್ಲಿ ಆಕೆ ಮೃತಪಟ್ಟಳು. ಹೃದಯಾಘಾತದಿಂದ ಆಕೆ ಮೃತಪಟ್ಟಿದ್ದು, ಸ್ಥಳಕ್ಕೆ ವೈದ್ಯರನ್ನು ಕರೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ಎಷ್ಟ್ ಫೋಟೋ ತೆಗೀತಿರಪ್ಪಾ..ಫೋಟೋಗೆ ಪೋಸ್ ನೀಡಲು ಹೇಳಿದ್ದಕ್ಕೆ ವರಮಾಲೆ ಎಸೆದು ಹೊರನಡೆದ ವರ!
ಆದರೆ, ವಧು ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ, ವಧು ಮತ್ತು ವರನ ಕುಟುಂಬಗಳು ವಧುವಿನ ಕಿರಿಯ ಸಹೋದರಿ ನಿಶಾ ಜತೆಗೆ ವರನೊಂದಿಗೆ ಮದುವೆಯಾಗಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ. ವಧುವಿನ ಕಿರಿಯ ಸಹೋದರಿಯನ್ನು ಅದೇ ಕುಟುಂಬಕ್ಕೆ ನೀಡಲು ಒಪ್ಪಿಗೆ ನೀಡಿದರು ಎಂದು ತಿಳಿದುಬಂದಿತ್ತು.