Asianet Suvarna News Asianet Suvarna News

ಗುಜರಾತ್‌: ಇಂದು ಅಂತಿಮ ಕದನ:93 ಮತಕ್ಷೇತ್ರಗಳಲ್ಲಿ ಮತದಾನ

ಇಡೀ ದೇಶದ ಗಮನ ಸೆಳೆದಿರುವ ಗುಜರಾತ್‌ ವಿಧಾನಸಭೆಗೆ 2ನೇ ಹಾಗೂ ಕೊನೆ ಹಂತದ ಚುನಾವಣೆ ಇಂದು ನಡೆಯಲಿದೆ. ಒಟ್ಟು 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಿದ್ಧತೆ ನಡೆದಿದೆ.

Gujarat Assembly election Final battle today, Voting in 93 constituencies akb
Author
First Published Dec 5, 2022, 6:51 AM IST

ಅಹಮದಾಬಾದ್‌: ಇಡೀ ದೇಶದ ಗಮನ ಸೆಳೆದಿರುವ ಗುಜರಾತ್‌ ವಿಧಾನಸಭೆಗೆ 2ನೇ ಹಾಗೂ ಕೊನೆ ಹಂತದ ಚುನಾವಣೆ ಇಂದು ನಡೆಯಲಿದೆ. ಒಟ್ಟು 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಸಿದ್ಧತೆ ನಡೆದಿದೆ. ಇನ್ನೊಂದೆಡೆ ದೇಶದ ವಿವಿಧ ಭಾಗಗಳಲ್ಲಿ 1 ಲೋಕಸಭೆ ಹಾಗೂ 7 ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕೂಡ ನಡೆಯಲಿವೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಡಿ.8ರಂದು ಪ್ರಕಟವಾಗಲಿದೆ.

ಗುಜರಾತ್‌ನಲ್ಲಿ(Gujarat) ಇಂದು ಚುನಾವಣೆ ನಡೆಯುತ್ತಿರುವ 93 ಕ್ಷೇತ್ರಗಳಲ್ಲಿ 2017ರಲ್ಲಿ ಬಿಜೆಪಿ  51 ಸೀಟುಗಳನ್ನು ಗೆದ್ದಿತ್ತು. ಅದೇ ಕಾಂಗ್ರೆಸ್‌ 39 ಹಾಗೂ ಉಳಿದ 3 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಮೊದಲ ಸಲ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವೂ ಕಣಕ್ಕಿಳಿದಿದೆ. ಇದರಿಂದ ಬಿಜೆಪಿ (BJP), ಕಾಂಗ್ರೆಸ್‌ (Congress)ಹಾಗೂ ಆಪ್‌ ನಡುವಿನ ತ್ರಿಕೋನ ಕದನ ಭಾರಿ ಕುತೂಹಲ ಸೃಷ್ಟಿಸಿದೆ. 93 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ (AAP) ಸೇರಿ ಒಟ್ಟು 61 ಪಕ್ಷಗಳ 833 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದಾರೆ. 285 ಸ್ವತಂತ್ರ ಅಭ್ಯರ್ಥಿಗಳು ಕೂಡಾ ಸ್ಪರ್ಧಿಸಲಿದ್ದಾರೆ.

ಸತತ ಪ್ರಚಾರ, ಪ್ರವಾಸ ಮುಗಿಸಿ ತಾಯಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ!

ಪ್ರಚಾರ ಅಬ್ಬರ:

ಇಂದು ಅಹಮದಾಬಾದ್‌ (Ahmadabad), ವಡೋದರಾ (Vadodara), ಗಾಂಧಿನಗರ ಸೇರಿ ಇನ್ನಿತರೆ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಅಬ್ಬರದ ಪ್ರಚಾರ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ 50 ಕಿ.ಮೀ. ಉದ್ದದ ರೋಡ್‌ಶೋ ನಡೆಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ (Bhupendra Patel) ಅವರು ಅಹಮದಾಬಾದಿನ ಘಟ್ಲೋಡಿಯಾದಿಂದ, ಹಾರ್ದಿಕ್‌ ಪಟೇಲ್‌ (Hardik patel) ವಿರಾಮ್‌ಗಾಮ್‌ನಿಮದ ಹಾಗೂ ಅಲ್ಪೇಶ್‌ ಠಾಕೂರ್‌ (Alpesh Thakur) ಗಾಂಧಿನಗರ ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.

ಎಲ್ಲ ಕ್ಷೇತ್ರಗಳಲ್ಲಿ 2.51 ಕೋಟಿ ಮತದಾರರಿದ್ದಾರೆ. 14,975 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1.13 ಲಕ್ಷ ಚುನಾವಣಾ ಸಿಬ್ಬಂದಿಯನ್ನು ನೇಮಿಸಲಾಗಿದೆ.ಗುಜರಾತ್‌ ವಿಧಾನಸಭೆಗೆ (Gujarat Assembly election)  ಒಟ್ಟು 182 ಸ್ಥಾನಗಳಿದ್ದು, ಡಿ.1ರಂದು ಮೊದಲನೇ ಹಂತದ ಚುನಾವಣೆ 89 ಕ್ಷೇತ್ರಗಳಲ್ಲಿ ನಡೆದಿತ್ತು. ಇದರಲ್ಲಿ ಶೇ. 63.31 ಮತದಾನದ ಪ್ರಮಾಣ ದಾಖಲಾಗಿತ್ತು. ಚುನಾವಣೆ ಫಲಿತಾಂಶ ಡಿ.8ರಂದು ಪ್ರಕಟವಾಗಲಿದೆ.

ಮೋದಿ ತವರಲ್ಲಿ ರಾವಣ ಸಂಗ್ರಾಮ: 'ನಮೋ' ಸಮರ ಘೋಷದ ಸಂದೇಶವೇನು?

ಇಂದು ಅಹಮದಾಬಾದ್‌ನಲ್ಲಿ ಮೋದಿ, ಶಾ ಮತದಾನ

ಅಹಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ. ನಗರದ ಸಾಬರಮತಿ ಕ್ಷೇತ್ರದ ರಾಣಿಪ್‌ ಮತಗಟ್ಟೆಯಲ್ಲಿ ಅವರು ಇಂದು ಮತ ಚಲಾಯಿಸಲಿದ್ದಾರೆ. ಇದಕ್ಕೆಲ್ಲ ಸಕಲ ಏರ್ಪಾಡು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಅಹಮದಾಬಾದ್‌ನ ನಾರನ್‌ಪುರ ಮತಗಟ್ಟೆಯಲ್ಲಿ ಮತ ಹಾಕಲಿದ್ದಾರೆ. ಈ ನಡುವೆ, ಮೋದಿ ಭಾನುವಾರ ಅಹಮದಾಬಾದ್‌ಗೆ ಬಂದ ತಕ್ಷಣ ತಮ್ಮ ತಾಯಿ ಹೀರಾಬೆನ್‌ ಅವರನ್ನು ಗಾಂಧಿನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಕ್ಷೇಮ ವಿಚಾರಿಸಿ, ಆಶೀರ್ವಾದ ಪಡೆದುಕೊಂಡರು.

ನನ್ನ ಮೋದಿ ಶೂರ್ಪನಖಿ ಎಂದಿದ್ದರು... ಮೋದಿ, ರೇಣುಕಾ ಹಳೆ ವಿಡಿಯೋ ವೈರಲ್

Follow Us:
Download App:
  • android
  • ios