ಹೋಟೆಲ್, ಮಾಲ್, ದೇಗುಲ ಆರಂಭ: ಹೀಗಿದೆ ಮಾರ್ಗಸೂಚಿ
ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ದೇಗುಲ, ಮಸೀದಿ, ಚರ್ಚ್‌ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಜೂ.8ರ ಸೋಮವಾರದಿಂದ ಪುನಾರಂಭಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಅದಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾರ್ಗಸೂಚಿಯನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಿದೆ.
ನವದೆಹಲಿ(ಜೂ.05): ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ದೇಗುಲ, ಮಸೀದಿ, ಚರ್ಚ್‌ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಜೂ.8ರ ಸೋಮವಾರದಿಂದ ಪುನಾರಂಭಿಸಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಅದಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾರ್ಗಸೂಚಿಯನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಿದೆ.
ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಪಾಲನೆಗಳಿಗೆ ಈ ಮಾರ್ಗಸೂಚಿಯಲ್ಲಿ ಒತ್ತು ನೀಡಲಾಗಿದೆ. ಕಚೇರಿಗಳಿಗೂ ಮಾರ್ಗಸೂಚಿಯಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ.
ಹೋಂ ಗಾರ್ಡ್‌ಗಳನ್ನ ಕೆಲಸದಿಂದ ತೆಗೆಯಲ್ಲ: ಗೃಹ ಸಚಿವ ಬೊಮ್ಮಾಯಿ
ಜೂ.8ರಿಂದ ಅನ್‌ಲಾಕ್ ಆಗಲಿರುವ ಧಾರ್ಮಿಕ ಕೇಂದ್ರ, ಮಾಲ್ ಹಾಗೂ ಹೋಟೆಲ್- ರೆಸ್ಟೋರೆಂಟ್‌ಗಳಲ್ಲಿ ನಾಗರಿಕರು, ಸಿಬ್ಬಂದಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹಲವು ಸಲಹೆಗಳನ್ನು ನೀಡಿದೆ.
ರಾತ್ರಿ ಕರ್ಫ್ಯೂ ವೇಳೆ ಬಸ್, ಆಟೋ, ಕ್ಯಾಬ್ ಸಂಚಾರಕ್ಕೆ ಅನುಮತಿ
ಹವಾನಿಯಂತ್ರಣ ವ್ಯವಸ್ಥೆ (ಎ.ಸಿ.)ಯಲ್ಲಿ 24ರಿಂದ 30 ಡಿಗ್ರಿಯಷ್ಟುತಾಪಮಾನವನ್ನು ಮಾತ್ರ ಕಾಯ್ದುಕೊಳ್ಳಬೇಕು. ಉಗುಳುವುದನ್ನು ನಿಷೇಧಿಸಬೇಕು ಎಂಬುದು ಸೇರಿ ಹಲವು ಸೂಚನೆಗಳನ್ನು ನೀಡಿದೆ. ಹೋಟೆಲ್ ಸಿಬ್ಬಂದಿ ಗ್ಲೌಸ್ ಧರಿಸಬೇಕು. ಕಂಟೇನ್ಮೆಂಟ್ ವಲಯದ ನೌಕರರಿಗೆ ಮನೆಯಲ್ಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ದೇಗುಲಗಳಲ್ಲಿ ಮೂರ್ತಿ, ವಿಗ್ರಹಗಳನ್ನು ಮುಟ್ಟಕೂಡದು. ಪ್ರಸಾದ, ನೈವೇದ್ಯ ವಿತರಿಸಬಾರದು ಎಂಬೆಲ್ಲ ಸಲಹೆಗಳನ್ನು ನೀಡಲಾಗಿದೆ.
ದೇವಸ್ಥಾನ ತೆರೆದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಟಾಸ್ಕ್ ಫೋರ್ಸ್ ಟೀಂ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ನಿಯಮದಿಂದ ತಜ್ಞ ವೈದ್ಯರಿಗೆ ತಳಮಳ ಶುರುವಾಗಿದ್ದು, ಸೋಂಕಿತ ಭಕ್ತನೊಬ್ಬ ದೇವಾಲಯಕ್ಕೆ ಭೇಟಿ ಕೊಟ್ರೆ ನೂರಾರು ಭಕ್ತರಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಸ್ಟ್ ಅರ್ಧ ಗಂಟೆಯಲ್ಲಿ ಕ್ಯೂ ನಲ್ಲಿ ನಿಲ್ಲುವ ನೂರಕ್ಕೂ ಹೆಚ್ಚು ಜನರಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಮನೆಯೇ ದೇವಾಲಯ ಎಂದು ಮನೊಳಗಿದ್ದರೆ , 2 ರಿಂದ 4 ಜನರಿಗೆ ಮಾತ್ರ ಸೋಂಕು ಹರಡಬಹುದು ಎಂದಿದ್ದಾರೆ.
1 ಕೊರೋನಾ ಇಂಜೆಕ್ಷನ್‌ಗೆ 7000 ರುಪಾಯಿ..!
ಉಸಿರಾಟದ ಸಮಸ್ಯೆ ಇರುವ ಕೋವಿಡ್ -19 ಸೋಂಕಿರುವ ಹಿರಿಯರು ಮತ್ತಷ್ಟು ಡೇಂಜರ್. ಹಿರಿಯರು ಹೆಚ್ಚೆಚ್ಚು ದೇವಾಲಯಗಳಿಗೆ ಭೇಟಿ ಕೊಡ್ತಾರೆ. ದೇವರು ತಮ್ಮೆಲ್ಲ ಕಷ್ಟಗಳನ್ನು ನೀಗಿಸ್ತಾರೆ ಎಂದು ನಂಬುತ್ತಾರೆ. ಈ ನಂಬಿಕೆಯಿಂದಲೇ ದೇವಾಲಯಕ್ಕೆ ಬರುವ ಅವರು ಸೋಂಕನ್ನು ಇತರರಿಗೂ ಹಬ್ಬಿಸುವ ಸಾಧ್ಯತೆ ಹೆಚ್ಚಿದೆ. ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ ಅಂತಹ ದೊಡ್ಡ ದೇವಾಲಯಗಳು ತೆರೆದರೆ ಅಪಾಯ ಮತ್ತಷ್ಟು ಅಧಿಕ ಎಂದು ಅಂದಾಜಿಸಲಾಗಿದೆ.
ಇದರಿಂದ ಪ್ರಕರಣಗಳ ಸಂಖ್ಯೆ ದ್ವಿಗುಣ ಸಾಧ್ಯತೆ ಇದ್ದು, ಸದ್ಯ ರೋಗಲಕ್ಷಣ ಇಲ್ಲದವರನ್ನ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಶೇಕಡ 96% ರಷ್ಟು ರೋಗಲಕ್ಷಣ ಇಲ್ಲದ ಪ್ರಕರಣಗಳು ಇತ್ತೀಚಿಗೆ ದಾಖಲಾಗ್ತಿದೆ. ಇಂತಹ ಆತಂಕದ ಸ್ಥಿತಿಯಲ್ಲಿ ದೇವಾಲಯಗಳ ಬಾಗಿಲು ತೆರೆಯುವುದು ಟೆನ್ಷನ್ ಹೆಚ್ಚಿಸಿದೆ. ದೇವಾಲಯಗಳು ತೆರೆಯುವ ಕುರಿತು ಟಾಸ್ಕ್ ಫೋರ್ಸ್ ಟೀಂ ವೈದ್ಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.